ರೈತರ ಮರಣಶಾಸನಕ್ಕೆ ಸಹಿ ಹಾಕುವುದಿಲ್ಲ: ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್

Source: sonews | By Staff Correspondent | Published on 20th September 2020, 5:29 PM | National News |

ಹೊಸದಿಲ್ಲಿ ರಾಜ್ಯಸಭೆಯಲ್ಲಿ ಇಂದು ಮಂಡಿಸಲಾಗಿರುವ ಎರಡು ಮಸೂದೆಗಳು ರೈತರ ಆತ್ಮದ ಮೇಲಿನ ದಾಳಿ ಎಂದು ಹೇಳಿರುವ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಪಕ್ಷವು ರೈತರುಗಳ ಮರಣ ಶಾಸನಕ್ಕೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಪಕ್ಷ ಈ ಮಸೂದೆಯನ್ನು ತಿರಸ್ಕರಿಸುತ್ತದೆ. ..ರೈತರುಗಳ ಮರಣಶಾಸನಕ್ಕೆ ನಾವು ಸಹಿ ಹಾಕುವುದಿಲ್ಲ...ನೀವು ಹೇಳುವಂತಹ ಲಾಭ ನಮ್ಮ ರೈತರಿಗೆ ಬೇಕಾಗಿಲ್ಲ. ನೀವೇಕೆ ಅವರನ್ನು ಬಲವಂತಪಡಿಸುತ್ತಿದ್ದೀರಿ. ರೈತರು ಅತ್ಯಂತ ಮುಖ್ಯವಾಗಿ ಪಂಜಾಬ್ ಹಾಗೂ ಹರ್ಯಾಣದ ರೈತರುಗಳು ಇಂತಹ ಮಸೂದೆಗಳು ರೈತರ ಆತ್ಮದ ಮೇಲಿನ ದಾಳಿ ಎಂದು ಭಾವಿಸಿದ್ದಾರೆ. ರೈತರು ಅನಕ್ಷರಸ್ಥರಲ್ಲ. ಇದು ಬೆಂಬಲ ಬೆಲೆಯನ್ನು ದೂರವಿಡುವ ಮಾರ್ಗ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಇದನ್ನು ಅಂಗೀಕರಿಸಿದ ನಂತರ ಕಾರ್ಪೊರೇಟ್ ಸಂಸ್ಥೆಗಳು ಕೃಷಿ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳುತ್ತವೆ''ಎಂದು ಕಾಂಗ್ರೆಸ್ ಸಂಸದ ಹೇಳಿದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...