ಭಟ್ಕಳ: ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷರಾಗಿ ಮೊಹತೆಶಮ್ ಮುಹಮ್ಮದ್ ಜಾಫರ್ ಆಯ್ಕೆ

Source: sonews | By Staff Correspondent | Published on 29th January 2018, 11:34 PM | Coastal News |

ಭಟ್ಕಳ: ಇಲ್ಲಿನ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ನ ನೂತನ ಅಧ್ಯಕ್ಷರಾಗಿ ಮೊಹತೆಶಮ್ ಮುಹಮ್ಮದ್ ಜಾಫರ್(ಬರ್ನಿ), ಪ್ರಧಾನ ಕಾರ್ಯದರ್ಶಿಯಾಗಿ ಅಸ್ಕರಿ ಹಮೀದುಲ್ಲಾಹ್ ಚುನಾಯಿತಗೊಂಡಿದ್ದಾರೆ.

ಸೋಮವಾರ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗಾಗಿ ಪದಾಧಿಕಾರಿಗಳ ಆಯ್ಕೆ ನಡೆದಿದೆ.

ಪದಾಧಿಕಾರಿಗಳು: ಅಧ್ಯಕ್ಷ :ಮೊಹತೆಶಮ್ ಮುಹಮ್ಮದ್ ಜಾಫರ್ (ಬರ್ನಿ), ಉಪಾಧ್ಯಕ್ಷ.1: ಖಮರಿ ಅಬೂಬಕರ್, ಉಪಾಧ್ಯಕ್ಷ.2: ಸೈಯ್ಯದ್ ಮುಹಿದ್ದೀನ್ ಮಾರ್ಕೇಟ್, ಪ್ರಧಾನ ಕಾರ್ಯದರ್ಶಿ: ಅಸ್ಕರಿ ಹಮೀದುಲ್ಲಾಹ್, ಕಾರ್ಯದರ್ಶಿ: ಸಾದಾ ಮುಹಮ್ಮದ್ ಮೀರಾ, ಉಪಕಾರ್ಯದರ್ಶಿ: ಮೌಲಾನ ಅಂಜುಮನ್ ಗಂಗಾವಳಿ ನದ್ವಿ, ಹಣಕಾಸು ಕಾರ್ಯದರ್ಶಿ: ಜುಬಾಪು ಇಸ್ಮಾಯಿಲ್, ಖಜಾಂಚಿ: ಮೊಹತೆಶಮ್ ಮುಹಮ್ಮದ್ ನಾಸಿರ್, ಲೆಕ್ಕ ಪರಿಶೋಧಕ: ಶಾಬಂದ್ರಿ ಇಸ್ಮಾಯಿಲ್ ಚಡುಬಾಪ ನೇಮಕಗೊಂಡಿದ್ದಾರೆ.

ಒಟ್ಟು 130 ಕಾರ್ಯಕಾರಿ ಸಮಿತಿ ಸದಸ್ಯರಿರುವ ಈ ಸಂಸ್ಥೆಯ ಚುನಾವಣೆಗೆ ಚುನಾವಣಾಧಿಕಾರಿಯಾಗಿ  ಇಸ್ಮಾಯಿಲ್ ಜುಬಾಪು ಕಾರ್ಯನಿರ್ವಹಿಸಿದರು. 
 

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...