ಮುಂಬೈನಲ್ಲೇ ವಾಸಿಸಬೇಕು, ಮನೆಯಲ್ಲಿ ಸಂದರ್ಶಕರಿಗೆ ಅವಕಾಶ ಇಲ್ಲ: ವರವರ ರಾವ್‌ಗೆ ವಿಶೇಷ ಕೋರ್ಟ್

Source: PTI | By MV Bhatkal | Published on 21st August 2022, 12:10 AM | National News |


ಮುಂಬೈ: ಇತ್ತೀಚೆಗಷ್ಟೇ ವೈದ್ಯಕೀಯ ಕಾರಣಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ 83 ವರ್ಷದ ಕ್ರಾಂತಿಕಾರಿ ಬರಹಗಾರ -ಕವಿ ಪಿ.ವರವರ ರಾವ್ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಮುಂಬೈನಲ್ಲಿ ನೆಲೆಸುವಂತೆ ಮತ್ತು ತನ್ನ ಅನುಮತಿ ಇಲ್ಲದೆ ನಗರವನ್ನು ಬಿಟ್ಟು ಹೋಗದಂತೆ ಸೂಚಿಸಿದೆ. 

ಮುಂಬೈನಲ್ಲಿರುವ ಅವರ ನಿವಾಸದಲ್ಲಿ "ಸಂದರ್ಶಕರ ಸಭೆ" ಮಾಡುವುದನ್ನು ಸಹ ಕೋರ್ಟ್ ನಿರ್ಬಂಧಿಸಿದೆ ಮತ್ತು ಯಾವುದೇ "ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ, ತಮ್ಮ ವಿರುದ್ಧದ ಪ್ರಕರಣ ಅಥವಾ ಇತರ ರೀತಿಯ"  ಪ್ರಕರಣದ ಯಾವುದೇ ಸಹ-ಆರೋಪಿಗಳನ್ನು ಸಂಪರ್ಕಿಸದಂತೆ ಕೋರ್ಟ್ ಸೂಚಿಸಿದೆ.

ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್ ವರವರ ರಾವ್ ಅವರಿಗೆ ಜಾಮೀನು ನೀಡಿತ್ತು.

ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ವಿಶೇಷ ನ್ಯಾಯಾಲಯವು ರಾವ್ ಅವರ ಜಾಮೀನು ಷರತ್ತುಗಳನ್ನು ನಿಗದಿಪಡಿಸಿದ್ದು, ಅದರ ವಿವರಗಳು ಶನಿವಾರ ಲಭ್ಯವಾಗಿವೆ.
ಜಾಮೀನು ಷರತ್ತುಗಳ ಪ್ರಕಾರ ರಾವ್ ಅವರು ಬೃಹತ್ ಮುಂಬೈ ಪ್ರದೇಶದಲ್ಲಿ ವಾಸಿಸಬೇಕು ಮತ್ತು ಎನ್ಐಎ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ನಗರವನ್ನು ತೊರೆಯಬಾರದು.

ಮುಂಬೈನಲ್ಲಿ ಅವರು ಇರುವ ನಿವಾಸದ ವಿವರವಾದ ವಿಳಾಸ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಅವರ ಮೂವರು ನಿಕಟ ಸಂಬಂಧಿಗಳು ಮತ್ತು ಅವರೊಂದಿಗೆ ವಾಸಿಸುವ ವ್ಯಕ್ತಿಗಳ ಮೊಬೈಲ್ ನಂಬರ್ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...