ಮುಂಡಗೋಡ : ಸರಳ ರೀತಿಯಿಂದ ಪವಿತ್ರ ಈದುಲ್ ಫೀತರ್ ಹಬ್ಬ ಆಚರಿಸಿಕೊಂಡು ಮುಸ್ಲೀಂ ಬಾಂದವರು

Source: Nazir Tadapatri | By I.G. Bhatkali | Published on 14th May 2021, 11:56 PM | Coastal News |

ಮುಂಡಗೋಡ : ಪವಿತ್ರ  ಈದುಲ್ ಫೀತರ್ ಹಬ್ಬವನ್ನು ಮುಸ್ಲೀಂ ಬಾಂದವರು ಸರಳ ರೀತಿಯಲ್ಲಿ ಸರಕಾರ ನೀಡಿರುವ ಕೊರಾನ ನಿಯಮಾವಳಿ ಪಾಲಿಸಿ ಆಚರಿಸಿಕೊಂಡರು.

ಬೆಳಗ್ಗೆ 9.30 ಗಂಟೆಯೊಳಗಾಗಿ ಈದುಲ್ ಫೀತರ್ ವಿಶೇಷ ನಮಾಜನ್ನು ಮನೆಗಳಲ್ಲಿ ಪೂರ್ಣಗೊಳಿಸ ಬೇಕೆಂದು ಆಯಾ ಮಸೀದಿಗಳ ಕಮಿಟಿಯು ಸೂಚನೆ ನೀಡಿತ್ತು. ಬೆಳಗ್ಗೆ  9.30 ಗಂಟೆಯ ನಂತರ ಮಸೀದಿಗಳಲ್ಲಿ ಕುತ್ಬಾ ಓದುವುದನ್ನು ಮುಸ್ಲೀಂ ಬಾಂದವರು ಮನೆಗಳಲ್ಲಿ ಕುಳಿತು ಆಲಿಸಿದರು ಅಲ್ಹಾನಿಗೆ ಕೃತಾರ್ಥರಾದರು. 

ಹಬ್ಬದ ನಮಾಜನ್ನು ಈದ್ಗಾ ಮೈದಾನಕ್ಕೆ ಹೋಗದೆ ಮಸೀದಿಗಳಲ್ಲಿ ಮಾಡದೆ ಮನೆಗಳಲ್ಲಿಯೇ ಮಾಡಿಕೊಂಡರು. ಈ ಕುರಿತು ಪೊಲೀಸ ಇನ್ಸಪೇಕ್ಟರ ಪ್ರಭುಗೌಡ ಡಿ.ಕೆ ಮುಸ್ಲಿಂ ಮುಖಂಡರಿಗೆ ಹಬ್ಬದ ನಮಾಜನ್ನು ಮನೆಗಳಲ್ಲಿಯೇ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಆಯಾ ಮಸೀದಿಗಳಲ್ಲಿ ನಮಾಜ ಮಾಡಲು ಕೇವಲ ಐದು ಜನರಿಗೆ ಅವಕಾಶ ಮಾಡಿಕೊಡಲಾಗಿತ್ತು. 

ನಮಾಜ ಪೂರ್ಣಗೊಂಡನಂತರ ಮುಸ್ಲೀಂ ಬಾಂದವರು ಕೋವಿಡ್ ನಿಯಮ ಪಾಲಿಸಿಕೊಂಡು ಸ್ನೇಹಿತರಿಗೆ ಬಂದು ಬಳಗದವರಿಗೆ ಹಬ್ಬದ ಸಂತೋಷವನ್ನು ವಿನಿಮಯವನ್ನು ಮಾಡಿಕೊಂಡರು. ದೂರದಿಂದ ನಿಂತು ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡರು ಹಲವರು ವಾಟ್ಸ್-ಅಪ್ ಮುಖಾಂತರ ಹಬ್ಬದ ವಿನಿಮಯ ಮಾಡಿಕೊಂಡರು. ಎಲ್ಲಿಯೂ ಆಲೀಂಗನ ಮಾಡಿಕೊಂಡು ಹಬ್ಬದ ಸಂತೋಷ ವಿನಿಮಯ ಮಾಡಿಕೊಳ್ಳುವುದು ಹಾಗೂ ಬಂದುಬಳಗದ ಮನೆಗಳಿಗೆ ಹೋಗುವುದು ಕಂಡು ಬರಲಿಲ್ಲ. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...