ಕರೋನಾ ವೈರಸ್ ನಿಯಂತ್ರಿಸಲು ಸಹಕಾರ ನೀಡುವಂತೆ ಸಾರ್ವಜನಿಕರಿಗೆ ವಿನಂತಿಸಿಕೊಂಡ ಮುಂಡಗೋಡ ಪಿಎಸ್ಆಯ್ ಶಿವಾನಂದ ಚಲವಾದಿ

Source: sonews | By Staff Correspondent | Published on 27th March 2020, 7:16 PM | Coastal News |

ಮುಂಡಗೋಡ : ಕರೋರನಾ ವೈರಸ್  ನಿಯಂತ್ರಿಸಲು ಪ್ರಧಾನ ಮಂತ್ರಿಗಳು ಆದೇಶಿಸಿರುವ 21 ದಿನಗಳ ದೇಶ ಲಾಕ್‍ಡೌನ್ ಗೆ ಸಹರಿಸಿ ಯಾರೂ ಮನೆಗಳಿಂದ ಹೊರಗೆ ಬರದೆ ಕರೋನ ವೈರಸ್ ನಿಯಂತ್ರಿಸಲು ಸಹಕಾರ ನೀಡಬೇಕು ಎಂದು ಸಾರ್ವಜನಿಕರಿಗೆ  ಮುಂಡಗೋಡ ಪಿಆಯ್ ಶಿವಾನಂದ ಚಲವಾದಿ  ಕೈ ಮುಗಿದು ಬೇಡಿಕೊಂಡಿದ್ದಾರೆ.

ಗುರುವಾರ ಪತ್ರಕರ್ತಕರ್ತರಿಗೆ ಸಂದರ್ಶನ ನೀಡಿ ಮಾತನಾಡಿದ ಅವರು ವಿಶ್ವಾದ್ಯಂತ ಕೊರೊನಾ ತನ್ನ ಕಂಬದಬಾಹು ಚಾಚುತ್ತಿದ್ದು ಇದನ್ನು ನಿಯಂತ್ರಿಸುವುದು ಎಲ್ಲರ ಕರ್ತವ್ಯ. ಇನ್ನೂ ಹತ್ತೊಂಬತ್ತು ದಿನ ನಾವು ಪ್ರಧಾನಿ ಮಂತ್ರಿಗಳು ಆದೇಶಿಸಿದಂತೆ ನಡೆದುಕೊಳ್ಳಬೇಕಾಗಿದೆ. ಸೋಶಿಯಲ್ ಅಂತರವನ್ನು ಕಾಯ್ದುಕೊಂಡು ಹೋಗಬೇಕು ಅದರೆ ಕೆಲ ಹುಡುಗರು, ಹಾಗೂ  ಪಡ್ಡೆಹುಡುಗರು ದವಾಖಾನೆಗೆ, ಕಿರಾಣಿ ಅಂಗಡಿ, ಮೆಡಿಕಲ್ ಶಾಪ್ ಗೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಾ ಅಡ್ಡಾಡುತ್ತಾರೆ. ಮುಂಡಗೋಡ ನಲ್ಲಿ 144 ಕಲಂ ಜಾರಿ ಇದೆ ಆದ್ದರಿಂದ ಸುಖಾ ಸುಮ್ಮನೆ ಹೊರಗೆ ಬರಬಾರದು ರಸ್ತೆಗಳಲ್ಲಿ ಅಡ್ಡಾಡಬಾರದು ಅಂತವರ ಮೇಲೆ ನಿರ್ದಾಕ್ಷಣ್ಯ ಕ್ರಮ ಜರುಗಿಸಿ ಅವರ ಮೇಲೆ ಸರಕಾರದ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು 2 ವರ್ಷ ಬೆಲ್ ಸಿಗಲಾರದಂತ ಪ್ರಕರಣವನ್ನು ದಾಖಲಿಸಿಬೇಕಾಗುತ್ತದೆ.ಶುಕ್ರವಾರದಿಂದ ತಾಲೂಕ ಆಡಳಿತ ಮತ್ತು ಪಟ್ಟಣ ಪಂಚಾಯತ್ ದವರು ಆಯಾ ವಾಡ್‍ಗಳಿಗೆ ದಿನಸಿ ವಸ್ತುಗಳು, ಹಣ್ಣು ತರಕಾರಿ, ಹಾಲೂ   ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಬರುವಾಗ ಮಾಸ್ಕ ಹಾಕಬೇಕು, ಹ್ಯಾಂಡ್ ಗ್ಲೋಜ್ ಹಾಕಬೇಕು ಹಾಗೂ  ಹ್ಯಾಂಡ್ ಸನಿಟೈಸರ ಉಪಯೋಗಿಸಬೇಕು ಅವಶ್ಯಕ ವಸ್ತುಗಳನ್ನು ಖರೀಧಿಸುವಾಗ ಸೋಶಿಯಲ್ ಅಂತರದಲ್ಲಿ ನಿಂತು ಖರೀದಿಸಬೇಕು. ನಾಳೆಯಿಂದ ಸರಕಾರಿ ವಾಹನ,ಸರಕಾರದ ಕೆಲಸದಲ್ಲಿ ನಿರತರಾದವರ ವಾಹನಗಳಿಗೆ ಮಾತ್ರ ಪೆಟ್ರೋಲ್ ವಿತರಣೆ ಎಂದರು. ಮನೆಯಲ್ಲಿದ್ದು ನಮಗೆ ಸಹಕಾರ ನೀಡಿ ಎಂದು ಕೈ ಮುಗಿದು ಬೇಡಿಕೊಂಡರು 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...