ಭಟ್ಕಳ ಗೊರಟೆ ಕ್ರಾಸ್ ಬಳಿ ಲಾರಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ : ತಪ್ಪಿದ ಭಾರಿ ಅನಾಹುತ.

Source: S O News Service | By I.G. Bhatkali | Published on 25th October 2016, 12:14 AM | Coastal News |

ಭಟ್ಕಳ: ಸುಬ್ರಹ್ಮಣ್ಯದಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಭಟ್ಕಳದಿಂದ ಮಂಗಳುರು ಮಾರ್ಗವಾಗಿ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ತಾಲೂಕಿನ ಗೊರಟೆ ಕ್ರಾಸ್ ಬಳಿ ಸೋಮವಾರದಂದು ರಾತ್ರಿ 8.30 ಸುಮಾರಿಗೆ ನಡೆದಿದೆ. 

ಅಪಘಾತದಲ್ಲಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಉಪ್ಪುಂದ ಮೂಲದ ದಯಾನಂದ ಉಪ್ಪುಂದ ಇವರ ತಲೆಗೆ, ತುಟಿಗೆ ಹಾಗೂ ಎಡಕೈ ಮುರಿದಿದ್ದು, ಅದೇ ರೀತಿ ಮಲ್ಲಿಕಾರ್ಜುನ ಶಿವಮ್ ಗೌಡರ ಎನ್ನುವವರ ಕಾಲಿ ಮುರಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಫಘಾತದಲ್ಲಿ ಬಸ್ ಡ್ರೈವರ್ಸಗೆ ಚಿಕ್ಕಪುಟ್ಟ ಗಾಯ ಸಂಭವಿಸಿದ್ದು, ಇಬ್ಬರು ಡ್ರೈವರ್ಗಳ ಪೈಕಿ ಮಾರುತಿ ಕುಮಾರ್ ಮೇಸ್ತ ಹಾಗೂ ಮಂಜುನಾಥ ಹನುಮಂತ ನಾಯ್ಕ ಎನ್ನಲಾಗಿದೆ. ಆದರೆ ಘಟನೆಯ ಬಳಿಕ ಲಾರಿ ಡ್ರೈವರ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಫಘಾತದಲ್ಲಿ ಇನ್ನುಳಿದ 11 ಜನ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯದಿಂದ ಪಾರಾಗಿದ್ದಾರೆ. ಅನಿತಾ ಮಂಜುನಾಥ ಭಂಡಾರಿ ಎನ್ನುವ ಚಿಕ್ಕ ಮಗುವಿನ ತಲೆ ಭಾಗಕ್ಕೆ ಗಾಯವಾಗಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...