ಅಗತ್ಯ ವಸ್ತುಗಳ ಕಿಟ್ ನೀಡಲು ಸ್ವಾಮಿಲ್ ಮಾಲಿಕರಿಗೆ ಗುತ್ತಿಗೆದಾರರಿಗೆ ಸಚಿವ ಶಿವರಾಮ ಹೆಬ್ಬಾರ ಸೂಚನೆ

Source: sonews | By Staff Correspondent | Published on 7th April 2020, 5:59 PM | Coastal News |

ಮುಂಡಗೋಡ : ಅಟೋ ಚಾಲಕರು ಗೂಡ್ಸ್ ಚಾಲಕರು ಮತ್ತು ಹಮಾಲರು ಸೇರಿದಂತೆ ನಿರ್ಗತಿಕರಿಗೆ ವೈಯಕ್ತಿಕ 1 ಸಾವಿರ ರೂ ಸಹಾಯ ಧನ ನೀಡುವುದಾಗಿ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು. 

ಅವರು ಸೋಮವಾರ ಪಟ್ಟಣದ  ಹೊರವಲಯದ ರೈಸ್ ಮಿಲ್ ನಲ್ಲಿ ನಡೆದ ಸಭೆಯಲ್ಲಿ ಹೇಳಿದರು. 

ನಂತರ ಪತ್ರಕರ್ತರಿಗೆ ತಿಳಿಸಿದ ಅವರು ಬಡವರು ಹಾಗೂ ನಿರ್ಗತಿಕರಿಗೆ ನೆರವು ನೀಡುವಂತೆ ರೈಸ್ ಮೀಲ್, ಸ್ವಾ ಮಿಲ್ ಉದ್ಯಮಿಗಳು ಹಾಗೂ ಸಿವಿಲ್ ಗುತ್ತಿಗೆದಾರರಿಗ ಮನವಿ ಮಾಡಲಾಗಿದ್ದು ತಕ್ಷಣದಲ್ಲಿ ಎಲ್ಲರ ಸಹಕಾರದೊಂದಿಗೆ ಸುಮಾರು 4 ಸಾವಿರ ಅಗತ್ಯ ವಸ್ತುಗಳ ಕಿಟ್ಟ್‍ಗಳನ್ನು ಜನರಿಗೆ ತಲುಪಿಸಲು ಸಿದ್ದತೆಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಶೇಷವಾಗಿ ಕ್ಷೇತ್ರದ ಅಟೋ ಚಾಲಕರು ಟ್ರ್‍ಕ್ ಚಾಲಕರು ಮತ್ತು ಹಮಾಲರು ಸೇರಿದಂತೆ ನಿರ್ಗತಿಕರಿಗೆ ವೈಯಕ್ತಿಕ1 ಸಾವಿರ ರೂ ಸಹಾಯ ಧನ ನೀಡುವುದಾಗಿ ತಿಳಿಸಿದರು.

ಏಪ್ರೀಲ್14 ನೇ ತಾರೀಖಿಗೆ ಲಾಕ್ ಡೌನ್ ಕೊನೆಗೊಳ್ಳಬೇಕೆಂಬುವುದು ಪ್ರತಿಯೊಬ್ಬರು  ಬಯಸುತ್ತಿದ್ದಾರೆ ಆದರೆ ಪ್ರಧಾನಮಂತ್ರಿಗಳು ಏನು ನಿರ್ಣಯ ಕೈಗೊಳ್ಳುತ್ತಾರೆ ಎಂಬುದರ ಮೇಲೆ ನಿಂತಿದೆ.  ಹೊರದೇಶಳಾದ ಅಮೇರಿಕ, ಇಟಲಿ , ಸ್ಪೇನ್, ಜರ್ಮನಿ, ಇರಾನ್ ಮುಂತಾದ ಮುಂದುವರೆದ ದೇಶಗಳು ಕೊರೋನಾ ಮಹಾಮಾರಿಗೆ ನಲುಗಿಹೋಗಿವೆ 135 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಸ್ಥಿತಿ ಉತ್ತಮವಾಗಿದೆ. ಲಾಕ್‍ಡೌನ್ ಮಾಡಿರುವುದು ಯಾವುದೇ ರಾಜಕೀಯ ಉದ್ದೇಶದಿಂದ ವಿಮಾನ, ರೈಲು, ಬಸ್ ವ್ಯವಸ್ಥೆ ಸಂಪೂರ್ಣ ಬಂದ್ ಮಾಡಿಲ್ಲ. ನಮ್ಮ ಜಿಲ್ಲೆಯ ಭಟ್ಕಳಹೊರತುಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳು ಸುರಕ್ಷಿವಾಗಿದ್ದು ಸಂತೋಷದ ಸಂಗತಿ. ಕರೋನಾ ಸೊಂಕು ತಡೆ ಮುಂಜಾಗ್ರತ ಕಾರ್ಯದಲ್ಲಿ  ಜೀವದ ಹಂಗು ತೊರೆದುಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಟ್ಟಕಡೆಯ ಆಶಾಕಾರ್ಯಕರ್ತರಿಗೆ ನಾವೆಲ್ಲಸಹಕಾರ ನೀಡಬೇಕಾಗಿದೆಎಂದರು ಅವರು ಮಾಡುತ್ತಿರುವ ಕೆಲಸಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿ.ಪಂ ಸದಸ್ಯರಾದ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ತಾಲೂಕ ಅಧ್ಯಕ್ಷ ನಾಗಭೂಷಣ ಹಾವಣಗಿ, ಎಚ್.ಪಿ ಗ್ಯಾಸ್ ವಿತರಕ ಬಸವರಾಜ ಓಶಿಮಠ, ಡಿ.ಎಸ್.ಮಹಾಲೆ, ಉಮೇಶ ಬಿಜಾಪುರ, ಅಶೋಕ ಚಲವಾದಿ, ಗುತ್ತಿಗೆದಾರ ಆರ್.ಎಸ್.ಸಜ್ಜನಶೆಟ್ಟಿ, ಚಂದ್ರಶೇಖರ ಗಾಣಗೇರ, ವಿನಾಯಕ ರಾಯ್ಕರ್,ತಹಶೀಲ್ದಾರ ಶ್ರೀಧರ ಮುಂದಲಮನೆ, ಪಿಆಯ್ ಶಿವಾನಂದಚಲವಾದಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಸೇರಿದಂತೆ ಮುಂತಾದವರು ಇದ್ದರು.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...