ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

Source: S O News | By I.G. Bhatkali | Published on 16th March 2024, 12:55 PM | Coastal News |

ಭಟ್ಕಳ:  ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಭಟ್ಕಳ ಇದರ ಅಧ್ಯಕ್ಷರಾದ ಮೋಹನ್ ನಾಯ್ಕ ಹೇಳಿದರು.

ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ  ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಇನ್ನೋರ್ವ ಅತಿಥಿಯಾದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಭಟ್ಕಳ ಇದರ ರಾಜ್ಯ ಪರಿಷತ್ ಸದಸ್ಯರಾದ ಪ್ರಕಾಶ ಶಿರಾಲಿ ಮಾತನಾಡುತ್ತ ಪ್ರಶಿಕ್ಷಣಾರ್ಥಿಗಳು ನಾಟಕದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರೆ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ನಯನ ಪ್ರಸನ್ನ, ವಿಶ್ವನಾಥ ಮಹಾಲೆ, ವಿರೂಪಾಕ್ಷ ಕಲಾಮಿತ್ರ ಮಂಡಳಿಯ ಅಧ್ಯಕ್ಷರಾದ ರಘುನಾಥ ಮಡಿವಾಳ ಮಾತನಾಡಿದರು.
.ಪ್ರಶಿಕ್ಷಣಾರ್ಥಿಗಳಾದ ದೀಪಲಕ್ಷ್ಮಿ  ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶುಭಾ ಮತ್ತ ಅರ್ಚನ ಸ್ವಾಗತಿಸಿದರು   ಪ್ರಿಯಾಂಕ ವಂದಿಸಿದರು ಹಾಗೂ ಲಕ್ಷ್ಮಿ ಮತ್ತು ಮೈನಾ ನಿರೂಪಿಸಿದರು. ನಂತರ ಪ್ರಶಿಕ್ಷಣಾರ್ಥಿಗಳು ನೃತ್ಯ ಮತ್ತು ನಾಟಕ ಪ್ರದರ್ಶನ ನೀಡಿದರು. 

Read These Next