ಕಾರವಾರದಲ್ಲಿ ಗುತ್ತಿಗೆದಾರರಿಂದ ಅರೆಬೆತ್ತಲೆ ಮೆರವಣಿಗೆ. ಸಮುದ್ರದಲ್ಲಿ ಸೇವ್ ಕಂಟ್ರಾಕ್ಟರ್ ನಾಮಫಲಕ ಪ್ರದರ್ಶನ.

Source: SO News | By Laxmi Tanaya | Published on 23rd February 2021, 10:14 PM | Coastal News |

ಕಾರವಾರ : ಜಿಲ್ಲೆಯ ಗುತ್ತಿಗೆದಾರರ ಸಮಸ್ಯೆ, ಮೀತಿಮೀರಿದ ಬೃಷ್ಟಾಚಾರ ತಡೆಗಟ್ಟುವಂತೆ ಒತ್ತಾಯಿಸಿ ಕಾರವಾರದಲ್ಲಿ ನೋಂದಾಯಿತ ಗುತ್ತಿಗೆದಾರರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಮಂಗಳವಾರ  ಅರೆಬೆತ್ತಲೆ ಮೆರವಣಿಗೆಯಲ್ಲಿ ಸಾಗಿ ಗುತ್ತಿಗೆದಾರರು ಬೀದಿಬೀದಿಗಳಲ್ಲಿ ಸಂಚರಿಸಿದರು. ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭಗೊಂಡ ಮೆರವಣಿಗೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕೊನೆಗೊಂಡಿತು. ಸಮುದ್ರದಲ್ಲಿ  Save Contractor  ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದರು. 

ಸರ್ಕಾರ ಗುತ್ತಿಗೆದಾರರನ್ನ ಈಗಾಗಲೇ ಅರ್ಧಕ್ಕೆ ಮುಳುಗಿಸಿದೆ. ದಯವಿಟ್ಟು ತಮ್ಮ ಕೈಯನ್ನ ಹಿಡಿದು ಮೇಲಕ್ಕೆ ಎಬ್ಬಿಸಿ ಎಂದು ಮನವಿ ಮಾಡಿಕೊಂಡರು. ಅಪರ ಜಿಲ್ಲಾಧಿಕಾರಿ ಕೃಷ್ಣಾ ಅವರ ಮೂಲಕ ಮನವಿ ಸಲ್ಲಿಸಿದರು. 

ಬೇಡಿಕೆಗಳು : ಸರ್ಕಾರ ಗುತ್ತಿಗೆದಾರರಿಂದ ರಾಜಧನ ಪಡೆಯುವುದನ್ನ ಅಂದಾಜು ಪಟ್ಟಿಯಲ್ಲಿ ಕೊಡಿಸಿದ ನಂತರವೇ ಪರಿಗಣಿಸಬೇಕು. ಮರಳು, ಚಿರೆಕಲ್ಲು, ಜಲ್ಲಿಕಲ್ಲು ಇತರೆ ಸಾಮಾಗ್ರಿಗಳಿಗೆ ವಿಳಂಭ ಮಾಡದೆ ಪರ್ಮಿಟ್ ಒದಗಿಸುವ ಕಾರ್ಯ ಆಗಬೇಕು. ಪಾವತಿ ಆಗದಿರುವ ಬಿಲ್ಗಳನ್ನ ಕೂಡಲೆ ಪಾವತಿಸಬೇಕು. ಹಾಗೂ ಗುತ್ತಿಗೆ ಕಾಮಗಾರಿಯಲ್ಲಿ ಪ್ಯಾಕೇಜ್ ನಿಯಮಗಳನ್ನು ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...