ಮಳೆ, ಪ್ರತಿಕೂಲ ಹವಾಮಾನ ವಿಮಾನ ಯಾನ ವ್ಯತ್ಯಯ

Source: ಉದಯವಾಣಿ | Published on 27th June 2016, 12:42 PM | Coastal News |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಭಾರೀ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ಏರುಪೇರು ಸಂಭವಿಸಿದೆ. ಇದರಿಂದಾಗಿ ಸಚಿವ ಯು.ಟಿ. ಖಾದರ್‌ ಅವರಿದ್ದ ವಿಮಾನ ಸೇರಿದಂತೆ ಮೂರು ವಿಮಾನಧಿಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅವರಿದ್ದ ವಿಮಾನ ಸಂಜೆ 4.10ಕ್ಕೆ ಬೆಂಗಧಿಳೂರಿಧಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಆದರೆ ಜೋರಾದ ಮಳೆ ಹಾಗೂ ಪ್ರತಿಕೂಲ ಹವಾಮಾನಧಿದಿಂದಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಿಲ್ಲ. ಸ್ವಲ್ಪ ಹೊತ್ತು ಆಕಾಶದಲ್ಲಿ ಸುತ್ತು ಹೊಡೆದ ವಿಮಾನ ಬಳಿಕ ಬೆಂಗಳೂರಿಗೆ ಮರಳಿತು.

ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್‌ ಅವರು ನಗರದ ಸಕೀìಟ್‌ ಹೌಸ್‌ನಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದರು. ಬಳಿಕ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಭೆಯ ಹಿನ್ನೆಲೆಯಲ್ಲಿ ರಾತ್ರಿ 10ಕ್ಕೆ ಬೆಂಗಳೂರಿಗೆ ಹಿಂದಿರುಗಲಿದ್ದರು. ಆದರೆ, ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರಿನಲ್ಲಿ ನಿಗದಿಪಡಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗದೆ ಹಿಂದಿರುಗಿದ್ದಾರೆ.

ಸಚಿವರಿದ್ದ ವಿಮಾನದಲ್ಲಿ ಖ್ಯಾತ ಚಿತ್ರನಟ ಉಪೇಂದ್ರ ಕೂಡ ಇದ್ದು, ಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸುತ್ತಿದ್ದರು. ಆದರೆ ವಿಮಾನವು ನಿಲ್ದಾಣದಲ್ಲಿ ಇಳಿಯಲಾಗದ್ದರಿಂದ ಅವರೂ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಈ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ರಾತ್ರಿ 7.20ರ ವಿಮಾನದಲ್ಲಿ ಮಂಗಳೂರಿಗೆ ಮರಳಿದ್ದಾರೆ.

ವಿಮಾನ ವ್ಯತ್ಯಯ
ಪ್ರತಿಕೂಲ ಹವಾಮಾನದಿಂದಾಗಿ ಜೆಟ್‌ ಏರ್‌ವೆàಸ್‌ನ ಮಂಬಯಿಯಿಂದ 3.30ಕ್ಕೆ ಇಳಿಯಬೇಕಾಗಿದ್ದ ವಿಮಾನ ಹಾಗೂ ಬೆಂಗಳೂರಿನಿಂದ 4.10ಕ್ಕೆ ಇಳಿಯಬೇಕಾಗಿದ್ದ ವಿಮಾನಗಳು ತಮ್ಮ ಮಾರ್ಗವನ್ನು ಬದಲಾಯಿಸಿ ಬೆಂಗಧಿಳೂರಿನತ್ತ ತೆರಳಿವೆ. ಅನಂತರ ಜೆಟ್‌ ಏರ್‌ವೆàಸ್‌ನ ಮುಂಬಯಿ ವಿಮಾನ 6.45ಕ್ಕೆ ಮಂಗಳೂರು ವಿಮಾನ ನಿಲ್ದಾಣಧಿದಲ್ಲಿಳಿದರೆ, ಬೆಂಗಳೂರಿನ ವಿಮಾನ 7.20ಕ್ಕೆ ಬಂದಿಳಿಯಿತು. ಅಲ್ಲದೆ ದೋಹಾದಿಂದ 4 ಗಂಟೆಗೆ ಬಂದಿಳಿಯಬೇಕಾಗಿದ್ದ ಏರ್‌ ಇಂಡಿಯಾ ವಿಮಾನ ಅರ್ಧ ತಾಸು ಲೇಟಾಗಿ ಬಂದಿಳಿದಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...