ಕರ್ನಾಟಕ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು

Source: Vb | By I.G. Bhatkali | Published on 3rd May 2023, 4:08 PM | State News |

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ, ಕಾಂಗ್ರೆಸ್ ಪಕ್ಷವು 'ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ' ಎಂಬ ಶೀರ್ಷಿಕೆ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.

ಮಂಗಳವಾರ ನಗರದ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು, ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ವಾಗ್ದಾನ ಮಾಡಿದ್ದು, ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

* ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ.

* ಒಂದು ವರ್ಷದಲ್ಲಿ ಸರಕಾರದಲ್ಲಿ ಖಾಲಿ ಇರುವ ಎಲ್ಲ ಅನುಮೋದಿತ ಹುದ್ದೆಗಳ ಭರ್ತಿ,

* 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ನಿರ್ಧಾರ.

ರಾಜ್ಯದ ಕರಾವಳಿ ಭಾಗದ ಮೀನುಗಾರ ರಾಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ, ಮೀನುಗಾರಿಕೆ ಸ್ಥಗಿತ ಸಮಯದಲ್ಲಿ ಮೀನುಗಾರರಿಗೆ ತಿಂಗಳಿಗೆ 6ಸಾವಿರ ರೂ.ಸಹಾಯ ಧನ, ನಾಡದೋಣಿ ಮೀನುಗಾರರಿಗೆ 10ಸಾವಿರ ರೂ. ಹಣಕಾಸಿನ ನೆರವು. 2,500ಕೋಟಿ ರೂ. ಬಜೆಟ್;ನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚನೆ. ಮಂಗಳೂರಿನಲ್ಲಿ ಚಿನ್ನ ಮತ್ತು ವಜ್ರದ ಪಾರ್ಕ್ ಸ್ಥಾಪನೆ. ಗಡಿ ಭಾಗಗಳಲ್ಲಿ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪನೆ.

* ಆರೋಗ್ಯ ಇಲಾಖೆಗಳಲ್ಲಿ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳ ಕಾಂಗ್ರೆಸ್ ಸರಕಾರಗಳ ಆದೇಶಗಳ ಮಾದರಿಯಲ್ಲಿ ಕಾಯಂಗೊಳಿಸುವ ಪ್ರಕ್ರಿಯೆ ಜಾರಿ.

* ಅಂಗನವಾಡಿ ಕಾರ್ಯಕರ್ತೆಯರ ವೇತನ 1,500 ರೂ.ನಿಂದ 15 ಸಾವಿರ ರೂ.ಗೆ ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ.

* ಬಿಸಿಯೂಟದ ಅಡಿಗೆಯವರಿಗೆ ಮಾಸಿಕ ಗೌರವಧನ ರೂ 3,600ರಿಂದ 6 ಸಾವಿರ ರೂ. ಗೆ ಹೆಚ್ಚಳ.

* ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವಧನ 5 ಸಾವಿರ ರೂ.ದಿಂದ 8 ಸಾವಿರ ರೂ.ಗೆ ಹೆಚ್ಚಳ. ಸರಕಾರಿ ಸ್ವಾಮ್ಯದಲ್ಲಿರುವ ಸಾರಿಗೆ ನಿಗಮಗಳ ಉದ್ಯೋಗಿಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ಸರಕಾರಿ ಸಮಾನಾಂತರವಾದ ಹುದ್ದೆಗಳ ವೇತನಗಳಿಗೆ ಅನುಗುಣವಾಗಿ, ಆಯಾ ನಿಗಮಗಳ ಆಯವ್ಯಯಗಳ ಪತ್ರಗಳಲ್ಲಿ ಅಡಕವಾಗುವಂತೆ ಸೂಚನೆ.

* ಅತಿಥಿ ಮತ್ತು ಗುತ್ತಿಗೆಯ ಆಧಾರದ ಮೇಲೆ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಗಳು ಸರಕಾರಿ ನೇಮಕಾತಿಗಳಲ್ಲಿ ಆದ್ಯತೆ ಇರುವಂತೆ ನಿಯಮಗಳಲ್ಲಿ ತಿದ್ದುಪಡಿ.

* ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ.

* ಕರ್ನಾಟಕ ಮಾಹಿತಿದಾರರ ಸಂರಕ್ಷಣಾ ಕಾಯ್ದೆ ಜಾರಿ. ಯಾವುದೇ ರೀತಿಯಲ್ಲಿ ಮತದಾರರ ಮಾಹಿತಿ ಕಳವಿಗೆ ತಡೆ ಒಡ್ಡುವ ಕಾನೂನು ರಚನೆ, ಮಹಿಳಾ ದೌರ್ಜನ್ಯಗಳನ್ನು ತಡೆಯಲು ಕಾನೂನಿನಲ್ಲಿ ಕಠಿಣ ಕ್ರಮದ ತಿದ್ದುಪಡಿ.

ಬೆಂಗಳೂರಿನ ಟೆಂಡರ್ ಶಿವ್ಯ ರ್ ರಸ್ತೆ ಮಾದರಿ 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರಗಳಿಗೆ ವಿಸ್ತರಣೆ. ಬಹುಮಹಡಿ ಸಂಕೀರ್ಣಗಳ ಮಾಲಕರಿಗೆ ಆಸ್ತಿ ವರ್ಗಾವಣೆ ಒದಗಿಸುವ ಸಲುವಾಗಿ 1972ರ ಕರ್ನಾಟಕ ಅಪಾರ್ಟ್;ಮೆಂಟ್ ಮಾಲಕತ್ವ ಕಾಯ್ದೆಗೆ ತಿದ್ದುಪಡಿ. ಸ್ಲಂ ಪ್ರದೇಶಗಳಿಗೆ ಶ್ರಮಿಕ ನಿವಾಸ ಪ್ರದೇಶ ಎನ್ನುವ ನಾಮಕರಣ ಮತ್ತು ವಸತಿ ಯೋಜನೆ, ವಸತಿ ಮತ್ತು ನಿವೇಶನಗಳ ಹಕ್ಕುಪತ್ರ ವಿತರಣೆ. ವಸತಿ ಸಮುಚ್ಚಯಗಳ ಸಂಕೀರ್ಣಗಳ ಮನೆ ಮಾಲಕರ ಸಂಘಗಳಿಗೆ ರಕ್ಷಣೆ ಮತ್ತು ನಿಯಾಮಾವಳಿ ರಚಿಸಲು ಕಾನೂನಿನ ಮಾರ್ಪಾಡು ಮಾಡಲಾಗುವುದು.
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

* ರಾಜ್ಯದಲ್ಲಿರುವ ಎಲ್ಲ ನ್ಯಾಯಾಲಯಗಳ ಆಧುನೀಕರಣಕ್ಕಾಗಿ 3 ಸಾವಿರ ಕೋಟಿ ರೂ. ಪ್ರತ್ಯೇಕ ನಿಧಿ.

* ಬಿಜೆಪಿ ಸರಕಾರ ಚಾಲ್ತಿಗೆ ತಂದ ಜನವಿರೋಧಿ ಕಾನೂನುಗಳ ರದ್ದು.

* ಭಯೋತ್ಪಾದನೆ ಹಾಗೂ ಅತ್ಯಾಚಾರ, ಮಹಿಳೆಯರ ಮೇಲೆ ಆ್ಯಸಿಡ್ ದಾಳಿಯಂತ ಹೇಯ ಕೃತ್ಯಗಳ ವಿಶೇಷ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ.

* 100 ದಿನದೊಳಗೆ ಎಲ್ಲ ಆನ್‌ಲೈನ್‌ ಸಾಲ ನೀಡುವ ಆ್ಯಪ್‌ಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನೀತಿ ಜಾರಿ.

* ಒಟ್ಟು ಪೊಲೀಸ್ ಬಲದಲ್ಲಿ ಶೇ.33ರಷ್ಟು ಮಹಿಳಾ ಪೊಲೀಸ್ ಬಲ ಇರುವಂತೆ ನೇಮಕಾತಿ. ಇಲ್ಲ ಕನಿಷ್ಠ ಶೇ 1ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ.

* ರಾತ್ರಿ ಪಾಳೆಯ ಸಿಬ್ಬಂದಿಗೆ 5 ಸಾವಿರ ರೂ.ವಿಶೇಷ ಮಾಸಿಕ ಭತ್ತೆ ಮತ್ತು ಎಲ್ಲ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ.

* ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲ ಖಾಲಿ ಹುದ್ದೆಗಳ ಭರ್ತಿ ನಾಲ್ಕು ವರ್ಷದೊಳಗೆ ಎಲ್ಲ ಪೊಲೀಸ್‌ ಸಿಬ್ಬಂದಿಗೂ ವಸತಿ ಸೌಲಭ್ಯ.

* ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗದ ಮಾರ್ಗಸೂಚಿಯಂತೆ ಹಾಲಿ ಪೊಲೀಸ್ ಠಾಣೆಗಳನ್ನು ಮಕ್ಕಳ ಸ್ನೇಹಿ ಠಾಣೆಗಳಾಗಿ ಪರಿವರ್ತನೆ.

* ಪ್ರತೀ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್‌ ಪೊಲೀಸ್‌ ಠಾಣೆಗಳ ನಿರ್ಮಾಣ.

* ಧರ್ಮ, ಜಾತಿಯ ಹೆಸರಿನಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಕಠಿಣ ಕ್ರಮ.

* ಸಂವಿಧಾನ ವಿಧಿಗಳನ್ನು ಬಜರಂಗ ದಳ, ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ, ಅಲ್ಪಸಂಖ್ಯಾತರು ಯಾರೇ ಉಲ್ಲಂಘಿಸಿದರೂ ಕಠಿಣ ಕ್ರಮ. ಸಂವಿಧಾನಕ್ಕೆ ಧಕ್ಕೆ ತರುವ ಸಂಘಟನೆಗಳ ನಿಷೇಧ.

* ಬಿಜೆಪಿ ಸರಕಾರದಲ್ಲಿ ಸಿದ್ಧಪಡಿಸಿರುವ ಪುಸ್ತಕಗಳು ರದ್ದು. ಕುವೆಂಪು, ಬಸವಣ್ಣ ಆದಿಕವಿ ಪಂಪ ಸೇರಿದಂತೆ ಪ್ರಮುಖರ ವಿಚಾರಗಳು ಮತ್ತೆ ಮರಳಿ ಪಠ್ಯಪುಸ್ತಕಗಳಲ್ಲಿ ಸೇರಿಸಲು ಕ್ರಮ.

* ರಾಷ್ಟ್ರೀಯ ಶಿಕ್ಷಣ ನೀತಿ ರದ್ದು.

* ಮುಂದಿನ ಐದು ವರ್ಷ ನೀರಾವರಿಗಾಗಿ 1.50 ಲಕ್ಷ ಕೋಟಿ ರೂ.ಅನುದಾನ ವಿನಿಯೋಗ.

* ಐದು ವರ್ಷದಲ್ಲಿ ಮೇಕೆದಾಟು ಮಹದಾಯಿ ಯೋಜನೆ ಪೂರ್ಣ.

* ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಪನೆಗೆ 500 ಕೋಟಿ ರೂ. ಮೀಸಲು

* ವಿಧವಾ ಪಿಂಚಣಿ 2,500 ರೂ.ಗೆ ಹೆಚ್ಚಳ

ಕ್ಷೀರಧಾರೆ: ಪ್ರತಿ ಲೀಟರ್ ಹಾಲಿನ ಸಬ್ಸಿಡಿಯನ್ನು 5 ರಿಂದ 7 ರೂ.ಗೆ ಹೆಚ್ಚಳ

* ಮೈಸೂರಿನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡಾ ವಿಶ್ವವಿದ್ಯಾನಿಲಯ ಮತ್ತು ಕ್ರೀಡಾ ಸಂಕೀರ್ಣ ಸ್ಥಾಪನೆ

* ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ 5 ಸಾವಿರ ಕೋಟಿ ರೂ. ಮೀಸಲು

* ಮೈಸೂರಿನಲ್ಲಿ 500 ಕೋಟಿ ರೂ.ಬಜೆಟ್‌ ನೊಂದಿಗೆ ವಿಶ್ವದರ್ಜೆಯ ಡಾ.ರಾಜ್ ಫಿಲ್ಡ್ ಸಿಟಿ ನಿರ್ಮಾಣ

 

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...