ಮಹಾರಾಷ್ಟ ಬಿಕ್ಕಟ್ಟು; ಬಂಡಾಯ ಬಣಕೆ ಶಿವಸೇನೆಯ ಮತ್ತೋರ್ವ ಶಾಸಕ ಸೇರ್ಪಡೆ

Source: Vb | By I.G. Bhatkali | Published on 25th June 2022, 2:19 PM | National News |

ಮುಂಬೈ: ಅಸ್ಸಾಮಿನಲ್ಲಿರುವ ಸಚಿವ ಏಕನಾಥ ಶಿಂದೆ ನೇತೃತ್ವದ ಬಂಡಾಯ ಶಾಸಕರ ಬಣಕ್ಕೆ ಶಿವಸೇನೆಯ ಇನ್ನೋರ್ವ ಶಾಸಕ ಸೇರಿದ್ದಾರೆ. ಇದರಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಬಂಡಾಯ ಶಾಸಕರು ಕೆಲವು ದಿನಗಳಿಂದ ತಂಗಿರುವ ಗುವಾಹಟಿಯ ಐಷಾರಾಮಿ ಹೊಟೇಲ್‌ಗೆ ಶಾಸಕ ದಿಲೀಪ್‌ ಲಾಂಡೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಶಿಂದೆ ಅವರ ಕಾರ್ಯಾಲಯ ಶುಕ್ರವಾರ ಶೇರ್ ಮಾಡಿದೆ. ಮುಂಬೈಯ ಚಾಂದಿವಲಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲಾಂಡೆ ಅವರ ನಡೆಯಿಂದ ಬಂಡಾಯ ಬಣದ ಶಿವಸೇನೆ ಶಾಸಕರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಒಟ್ಟು 55 ಶಿವಸೇನೆಯ ಶಾಸಕರು ಹಾಗೂ 12 ಪಕ್ಷೇತರ ಶಾಸಕರಲ್ಲಿ ತನಗೆ 40 ಶಾಸಕರ ಬೆಂಬಲ ಇದೆ ಎಂದು ಶಿಂದೆ ಪ್ರತಿಪಾದಿಸಿದ್ದಾರೆ.

ತನ್ನ ಬಣ ನಿಜವಾದ ಶಿವಸೇನೆ ಎಂದು ಶಿಂದೆ ಅವರು ಹೇಳಿದ್ದಾರೆ. ಅಲ್ಲದೆ, 37 ಶಾಸಕರು ಸಹಿ ಹಾಕಿರುವ ಪತ್ರವನ್ನು ಅವರು ರಾಜ್ಯ ವಿಧಾನ ಸಭೆಯ ಉಪ ಸ್ಪೀಕರ್ ನರಹರಿ ಝಿಲ್ವಾಲ್‌ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ರವಾನಿಸಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...