ಆರಂಭಗೊಂಡು 3 ವರ್ಷಗಳಾದರೂ ಲೋಕಪಾಲ ವ್ಯವಸ್ಥೆ ಇನ್ನೂ ನಿಷ್ಕ್ರಿಯ

Source: VB | By I.G. Bhatkali | Published on 12th January 2022, 10:26 PM | National News |

ಹೊಸದಿಲ್ಲಿ: ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಭಾರೀ ಅಬ್ಬರದೊಂದಿಗೆ ಹೋರಾಡಲು ಲೋಕಪಾಲ ವ್ಯವಸ್ಥೆ ಸ್ಥಾಪನೆಗೊಂಡು ಮೂರು ವರ್ಷಗಳು ಕಳೆದಿದ್ದರೂ, ಅದು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ ಮಾತ್ರವಲ್ಲ, ಅದು ಪಡೆದಿದ್ದ ಪ್ರಚಾರವೂ ಅಸಮರ್ಥನೀಯವಾಗಿತ್ತು ಎಂಬಂತೆ ಕಂಡುಬರುತ್ತಿದೆ ಮತ್ತು ಲೋಕಪಾಲ ನಿಜಕ್ಕೂ ಮಹಾನ್ ಪರಿಕಲ್ಪನೆಯಾಗಿತ್ತೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಾಚರಿಸುವ, ನಾಲ್ವರು ನ್ಯಾಯಾಂಗ ಮತ್ತು ನಾಲ್ವರು ನ್ಯಾಯಾಂಗೇತರ ಸದಸ್ಯರನ್ನೊಳಗೊಂಡ ಲೋಕಪಾಲ್ ಅನ್ನು ಹಾಲಿ ಮತ್ತು ಮಾಜಿ ಪ್ರಧಾನಿಗಳು,ಕೇಂದ್ರ ಸಚಿವರು,ಮಾಜಿ ಸಂಸದರು ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿಯ ಅಧಿಕಾರಸ್ಥರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಚಾರಣೆಗಾಗಿ ಸ್ಥಾಪಿಸಲಾಗಿದೆ. ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗಿದ್ದರೂ ಲೋಕಪಾಲ್ ವ್ಯವಸ್ಥೆಯು ಕೈಗೆತ್ತಿಕೊಂಡ ಒಂದಾದರೂ ಪ್ರಮುಖ ಭ್ರಷ್ಟಾಚಾರ ಪ್ರಕರಣವನ್ನು ನೆನಪಿಸಿಕೊಳ್ಳುವುದೂ ಕಷ್ಟವಾಗಿದೆ.

ಲೋಕಪಾಲ್ ವೆಬ್‌ಸೈಟ್‌ನಲ್ಲಿ ಲಭ್ಯ ಅಂಕಿ-ಅಂಶಗಳಂತೆ ಈವರೆಗಿನ ಹೆಚ್ಚಿನ ದೂರುಗಳು ಕ್ಷುಲ್ಲಕವಾಗಿ ಅಥವಾ ಅದರ ವ್ಯಾಪ್ತಿಯಿಂದ ಹೊರಗಿವೆ. ಈ ಎಲ್ಲ ವರ್ಷಗಳಲ್ಲಿ ದೂರುಗಳ ಕ್ಷುಲ್ಲಕ ದೂರುಗಳ ಸಂಖ್ಯೆಯೂ ತೀವ್ರ ಇಳಿಕೆಯಾಗಿದೆ. ಮಾಹಿತಿಗಳು ಲಭ್ಯವಿರುವ ಇತ್ತೀಚಿನ ಅವಧಿಯಾದ 2021ರ ಮೊದಲ ಏಳು ತಿಂಗಳುಗಳಲ್ಲಿ ಕೇವಲ 30 ದೂರುಗಳು ದಾಖಲಾಗಿವೆ ಮತ್ತು ಲೋಕಪಾಲ್‌ನ ಹಲವಾರು ಪ್ರಮುಖ ಹುದ್ದೆಗಳು ಖಾಲಿಯಾಗಿಯೇ ಇವೆ. ದೂರುಗಳು ಕಡಿಮೆಯಾಗಿವೆ ಎಂದರೆ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದರ್ಥವಲ್ಲ,ಜನರು ಲೋಕಪಾಲ್‌ನಲ್ಲಿ ವಿಶ್ವಾಸ ಕಳೆದುಕೊಂಡಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಮಾಧವ ಗೋಡಬೋಲೆ.

ಲೋಕಪಾಲ್‌ನ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಮುಖ ದೋಷಾರೋಪವನ್ನು ಖುದ್ದು ಅದರ ಸದಸ್ಯರೋರ್ವರೇ ಮಾಡಿದ್ದರು. 2019, ಮಾರ್ಚ್‌ನಲ್ಲಿ ನಾಲ್ವರು ನ್ಯಾಯಾಂಗ ಸದಸ್ಯರ ಪೈಕಿ ಓರ್ವರಾಗಿ ನೇಮಕಗೊಂಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ದಿಲೀಪ್ ಬಿ.ಭೋಸಲೆ ಅವರು ಪ್ರಮಾಣ ವಚನ ಸ್ವೀಕರಿಸಿದ ಒಂಭತ್ತೇ ತಿಂಗಳಲ್ಲಿ 2020, ಜ.6ರಂದು ವೈಯಕ್ತಿಕ ಕಾರಣಗಳನ್ನು ಮತ್ತು ಮಾಡಲು ಸಾಕಷ್ಟು ಕೆಲಸದ ಕೊರತೆಯನ್ನು ಉಲ್ಲೇಖಿಸಿ ರಾಜೀನಾಮೆಯನ್ನು ನೀಡಿದ್ದರು.

Read These Next

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ...

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ...