ಕಾರ್ಮಿಕರಿಗೆ ಲಾಕ್ಡೌನ್ ಪರಿಹಾರ; ದಿನಾಂಕ ವಿಸ್ತರಿಸುವಂತೆ ಕಾರ್ಮಿಕ ಮುಖಂಡ ರೇವಣಕರ್ ಆಗ್ರಹ

Source: sonews | By Staff Correspondent | Published on 1st August 2020, 5:58 PM | Coastal News |

ಭಟ್ಕಳ: ಕೊರೋನ ವೈರಸ್ ನಿಂದಾಗಿ ಲಕ್ಡೌನ್ ಹೇರಿದ್ದು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರಿಗೆ ಸರ್ಕಾರ 5ಸಾವಿರ ಪರಿಹಾರ ಘೋಷಿಸಿದ್ದು ಇದರ ದಿನಾಂಕವನ್ನು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ರಿ), (ಎ.ಐ.ಟಿ.ಯು.ಸಿ) ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎನ್. ರೇವಣಕರ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಮುಖ್ಯಮಂತ್ರಿಗಳು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾದ ಫಲಾನುಭವಿಗಳಿಗೆ 5 ಸಾವಿರ ಸಹಾಯಧನ ನೀಡಲು ಘೋಷಣೆ ಮಾಡಿರುತ್ತಾರೆ. ಆದರೆ ಆ ಸಮಯದಲ್ಲಿ ಕಾರ್ಮಿಕರು ಅನಿವಾರ್ಯವಾಗಿ ವಾಟ್ಸಪ್ ಮೂಲಕ ಆಧಾರ್ ಗುರುತಿನ ಚೀಟಿ. ಬ್ಯಾಂಕ್ ಪಾಸ್ ಬುಕ್ ಫೆÇೀಟೋ. ಕಾರ್ಮಿಕರ ಗುರುತಿನ ಚೀಟಿ ಫೆÇೀಟೋ ವನ್ನು ಸಲ್ಲಿಸಲು ತಿಳಿಸಿರುತ್ತಾರೆ. ರಾಜ್ಯದ ಎಲ್ಲಾ ಫಲಾನುಭವಿಗಳಲ್ಲಿ ಸ್ಮಾರ್ಟ ಫೆÇೀನ್ ಲಭ್ಯವಿರುವುದಿಲ್ಲ. ಲಭ್ಯವಿದ್ದ ಕಾರ್ಮಿಕರು ವಾಟ್ಸಪ್ ಮೂಲಕ ದಾಖಲೆ ರವಾನಿಸಿದರೂ ಕೂಡ ಕೆಲವು ಕಾರ್ಮಿಕರ ದಾಖಲೆಯು ಸ್ವಷ್ಟವಾಗಿ ಕಾಣದೆ ಇರುವುದರಿಂದ. ನಿರೀಕ್ಷಕರ ಕಚೇರಿಯಲ್ಲಿ ಸಂಪರ್ಕ ಮಾಡಿ ದಾಖಲೆ ನೀಡಲು ಆಗದೇ ಇರುವುದರಿಂದ. ಒಟ್ಟಾರೆ ರಾಜ್ಯಾದ್ಯಂತ ಈ ಪರಿಹಾರ ಧನ ಎಲ್ಲರಿಗೂ  ಸಿಗದೇ ಕಾರ್ಮಿಕರು ವಂಚಿತರಾಗಿದ್ದಾರೆ.  

ಉತ್ತರ ಕನ್ನಡ ಜಿಲ್ಲೆಯ 11 ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಒಟ್ಟು 65,371 ಕ್ಕೂ ಅಧಿಕ ಫಲಾನುಭವಿಗಳು ಜುಲೈ 2007ರಿಂದ ಮಾರ್ಚ್ 2020ರ ಒಳಗೆ ನೊಂದಣಿಯಾಗಿರುತ್ತಾರೆ. ಇದರಲ್ಲಿ ಶೇಕಡಾ 40% ಕ್ಕೂ ಅಧಿಕ ಫಲಾನುಭವಿಗಳಿಗೆ ಈ ಸಹಾಯಧನ ಪಡೆಯದೇ ವಂಚಿತರಾಗಿದ್ದಾರೆ. ಅದರಲ್ಲಿಯೂ ಕೂಡ ಕಲ್ಯಾಣ ಮಂಡಳಿಯವರು ದಿನಾಂಕ 30-06- 2020 ರಂದು ಸಹಾಯ ಧನಕ್ಕೆ  ಸಲ್ಲಿಸುವ ಅರ್ಜಿ ಕೊನೆಯ ದಿನಾಂಕ ಎಂದು ಪ್ರಕಟಿಸಿರುತ್ತಾರೆ. ಮಾರ್ಚ್ 2016ರಿಂದ ಮಾರ್ಚ್ 2020ರ ವರೆಗೆ ಆನ್ಲೈನ್ ವ್ಯವಸ್ಥೆಯಲ್ಲಿ ಕಾರ್ಮಿಕರ ಗುರುತಿನ ಚೀಟಿ ಆಗಿರುತ್ತದೆ ಮತ್ತು ಈ ಫಲಾನುಭವಿಗಳ ಆಧಾರ್ ಮತ್ತು ಬ್ಯಾಂಕ್ ಖಾತೆಯ ವಿವರ ಕಲ್ಯಾಣ ಮಂಡಳಿಯಲ್ಲಿ ಇದ್ದುದರಿಂದ ಅಲ್ಪ ಪ್ರಮಾಣದಲ್ಲಿ ಕಾರ್ಮಿಕರಿಗೆ ನೇರವಾಗಿ ಕಲ್ಯಾಣ ಮಂಡಳಿಯವರು ಸಹಾಯಧನ ಜಮಾ ಮಾಡಿರುತ್ತಾರೆ ಎಂಬ ಮಾಹಿತಿ ಇದೆ. ಜುಲೈ 2007 ರಿಂದ ಮಾರ್ಚ್ 2015 ರವರೆಗೆ ನೊಂದಣಿಯಾದ ಫಲಾನುಭವಿಗಳಲ್ಲಿ ಶೇಕಡ 50% ಕ್ಕೂ ಅಧಿಕ ಫಲಾನುಭವಿಗಳಿಗೆ ಸಹಾಯಧನ ಪರಿಹಾರ ಬಂದಿರುವುದಿಲ್ಲ. ಈ  ವ್ಯವಸ್ಥೆಯಲ್ಲಿ ವಿಶೇಷವಾಗಿ ಅನ್ಯಾಯಕ್ಕೆ ಒಳಗಾದವರು ಜುಲೈ 2007ರಿಂದ ಮಾರ್ಚ್ 2015 ರ ಒಳಗೆ ಸದಸ್ಯತ್ವ ಹೊಂದಿರುವ ಫಲಾನುಭವಿಗಳು. ಇಲ್ಲಿ ವಿಶೇಷವಾಗಿ ಗಮನಿಸಬೇಕಾಗಿರುವುದು ಏನೆಂದರೆ 2007ರಿಂದ 2015 ಮಾರ್ಚ್ ಅಂತ್ಯದವರೆಗೆ ಆಯಾ ಕಾರ್ಮಿಕ ಅಧಿಕಾರಿ ಕಚೇರಿಯವರೇ ಸಹಾಯಧನ ಫಲಾನುಭವಿಗಳ ಖಾತೆಗೆ ಹಾಕಿರುವ ಮಾಹಿತಿ ಇದೆ. ಇದರಲ್ಲಿ ವಿಶೇಷವಾಗಿ ಆಯಾ ನಿರೀಕ್ಷಕರ ಕಚೇರಿಯವರು ಕಾರ್ಮಿಕರ ಗುರುತಿನ ಚೀಟಿ ಸಂಖ್ಯೆ. ಆಧಾರ್ ಚೀಟಿ ಸಂಖ್ಯೆ .ಬ್ಯಾಂಕ್ ಖಾತೆಯ ದಾಖಲೆ. ಸರಿಯಾದ ಸಮಯದಲ್ಲಿ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ದಾಖಲೆ ರವಾನೆ ಆಗದಿರುವುದರಿಂದ ಕಾರ್ಮಿಕರು ಸಹಾಯಧನ ಪಡೆಯಲು ವಂಚಿತರಾಗಿದ್ದಾರೆ. 

ಇನ್ನೊಂದು ವಿಶೇಷವೇನೆಂದರೆ ಕಲ್ಯಾಣ ಮಂಡಳಿಯವರು ಆಧಾರ್ ಗುರುತಿನ ಚೀಟಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ದಾಖಲೆಯ ಆಧಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ  26,389  ಜನರಿಗೆ   ಸಹಾಯಧನ ಹಾಕಿರುವ ಮಾಹಿತಿ ಇದೆ. ಹಾಗಾದ್ರೆ ಇವರ್ಯಾರು? ಇವರು ಎಲ್ಲಿ ನೊಂದಣಿಯಾಗಿರುತ್ತಾರೆ? ಎಂಬ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯೂ ಯಾರ ಹತ್ತಿರವೂ ಸರಿಯಾದ ಮಾಹಿತಿ ಇಲ್ಲ. ಅವರು ಎಲ್ಲಿ ನೊಂದಣಿ ಆಗಿದ್ದರು? ಅವರ ಕಾರ್ಮಿಕರ ಗುರುತಿನ ಚೀಟಿ ಏಲ್ಲಿದೆ? ಎಂಬ ಮಾಹಿತಿಯು ಯಾರಲ್ಲಿಯೂ ಸರಿಯಾಗಿಲ್ಲ. ಇವರ ಬಗ್ಗೆ ಅಧಿಕೃತ ಕಾರ್ಮಿಕ ಸಂಘಟನೆಯವರ ಗಾಗಲಿ  ಮಾಹಿತಿ ಇಲ್ಲ. ಇದೇ ಯಕ್ಷಪ್ರಶ್ನೆ. 

ಇನ್ನೊಂದು ಸಮಸ್ಯೆಯೇನೆಂದರೆ ಸಾಂಕ್ರಾಮಿಕ ರೋಗ ಹರಡುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಾರ್ಮಿಕ ಫಲಾನುಭವಿಗಳು ತಮ್ಮ ಗುರುತಿನ ಚೀಟಿಯನ್ನು ಸರಿಯಾದ ಸಮಯಕ್ಕೆ ನವೀಕರಣ ಮಾಡಲು ಸಾಧ್ಯವಾಗದೆ ಮತ್ತು ಎಲ್ಲಾ ರೀತಿಯ ಧನಸಹಾಯದ ಅರ್ಜಿಗಳು ಅದರ ಕಾಲಾವಧಿಯೊಳಗೆ ಸಲ್ಲಿಸಲು ಸಾಧ್ಯವಾಗದೆ ರಾಜ್ಯಾದ್ಯಂತ ಕಾರ್ಮಿಕರು ಅನ್ಯಾಯಕ್ಕೆ ಒಳಗಾಗಿ ಯಾವುದೇ ರೀತಿಯ ಧನಸಹಾಯ ಪಡೆಯಲಾಗದೆ ವಂಚಿತರಾಗಿದ್ದಾರೆ. ಒಂದು ಕಡೆ ಈಗಲೂ ಸಾರಿಗೆ ವ್ಯವಸ್ಥೆ ಇಲ್ಲದೇ ಹಳ್ಳಿಯಿಂದ ನಗರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಇನ್ನೊಂದು ಕಡೆ ಎಲ್ಲಾ ಕಾರ್ಮಿಕರಲ್ಲಿ ಸ್ವತಃ ವಾಹನ ವ್ಯವಸ್ಥೆ ಇರುವುದಿಲ್ಲ. ಎಲ್ಲ ಸಮಸ್ಯೆಗಳಿಂದ ಕಾರ್ಮಿಕರು ವಂಚಿತರಾಗಿರುವದ ರಿಂದ ಈ ವರ್ಷದ ಅಂತ್ಯದವರೆಗೆ 31-12 -2020 ರ ಒಳಗೆ ಎಲ್ಲಾ ರೀತಿಯ ಧನಸಹಾಯದ ಅರ್ಜಿಗಳ ಕಾಲಮಿತಿಯನ್ನು ಪರಿಗಣಿಸದೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು  ಮತ್ತು ಕೋವಿಡ್-19  ಸಹಾಯಧನ ಪಡೆಯಲು 60 ದಿನಗಳ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕಾರ್ಮಿಕ ಸಚಿವರಲ್ಲಿ ಮತ್ತು ಕರ್ನಾಟಕ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...