ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ್ನು ರಕ್ಷಿಸಿದ ಲೈಪಗಾರ್ಡ ಸಿಬ್ಬಂದಿ

Source: sonews | Published on 22nd July 2019, 8:11 PM | Coastal News |

ಭಟ್ಕಳ: ಇಲ್ಲಿನ ಮುರುಡೇಶ್ವರದ ಸಮುದ್ರ ತೀರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿ ಯುವಕನೋರ್ವನನ್ನು ಅಲ್ಲಿನ ಲೈಫ್‍ಗಾರ್ಡಗಳು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಭಾನುವಾರದಂದು ಬೆಳಿಗ್ಗೆ ವರದಿಯಾಗಿದೆ.ನೀರು ಪಾಲಾಗುತ್ತಿದ್ದ ಯುವಕ ಮಂಜುನಾಥ ಆರುಮುಗ(19) ಮಂಡ್ಯ ಮದ್ದೂರಿನ ನಿವಾಸಿ ಎಂದು ತಿಳಿದು ಬಂದಿದೆ. ಮಂಡ್ಯದಿಂದ 7 ಜನ ಕುಟುಂಬ ಸಮೇತರಾಗಿ ಮುರ್ಡೇಶ್ವರಕ್ಕೆ ಆಗಮಿಸಿದ್ದ ಇವರು ಸಮುದ್ರದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಓರ್ವ ನೀರಿನ ಸೆಳೆತಕ್ಕೆ ಸಿಲುಕಿದ್ದು ಆತನನ್ನು ಅಲ್ಲಿನ ಲೈಫ್ ಗಾರ್ಡಗಳು ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೈಪ ಗಾರ್ಡ ಸಿಬ್ಬಂದಿ ಶಶಿಧರ ನಾಯ್ಕ, ಚಂದ್ರಶೇಖರ ದೇವಾಡಿಗ, ಸ್ಥಳಿಯ ಮೀನುಗಾರರಾದ ವಿನೋದ ಹರಿಕಾಂತ, ಉಮೇಶ ಹರಿಕಾಂತ, ಶಂಕರ ಹರಿಕಾಂತ ಪಾಲ್ಗೊಂದಿದ್ದರು. 
ಈ ಕುರಿತು ಮುರ್ಡೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’