ಕುಮಟಾ: ಕಸ್ತೂರಿ ರಂಗನ್ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ - ರವೀಂದ್ರ ನಾಯ್ಕ.

Source: S O News | By I.G. Bhatkali | Published on 21st November 2023, 6:57 PM | Coastal News | Don't Miss |

ಕುಮಟಾ:  ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಮತ್ತು ಕರಾವಳಿ ಜನ ಜೀವನ ವ್ಯವಸ್ಥೆ ಮೇಲೆ ಪರಿಣಾಮಕಾರಿ ಪ್ರಭಾವ ಬೀರುವುದರಿಂದ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.

 ಅವರು ಇಂದು ದಿ. ೨೧(ಮಂಗಳವಾರ) ರಂದು ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷö್ಮ ಪ್ರದೇಶವೆಂದು ಉಲ್ಲೇಖಿಸಿಲ್ಪಟ್ಟ, ಕುಮಟ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮದಲ್ಲಿ ಸಭೆಯನ್ನು ಉದ್ಧೇಶಿಸಿ ಮೇಲಿನಂತೆ ಮಾತನಾಡುತ್ತಿದ್ದರು.

 ಕಸ್ತೂರಿ ರಂಗನ್ ವರದಿಯನ್ನ ತೀರಸ್ಕರಿಸುವಲ್ಲಿ ರಾಜ್ಯ ಸರಕಾರವು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಬೇಕಾಗಿದ್ದು, ಕೇಂದ್ರ ಸರಕಾರವು ಜನರ ಭಾವನೆಯನ್ನ ಹಾಗೂ ವರದಿಯಿಂದ ಉಂಟಾಗುವ ಪರಿಣಾಮವನ್ನ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕೆಂದು ಅವರು ಹೇಳಿದರು.

 ಸಭೆಯಲ್ಲಿ ಬೀರಾ ಗೌಡ, ಗಣಪತಿ ಮರಾಠಿ, ಮಹಾದೇವ ನಾಯ್ಕ, ಕೃಷ್ಣ ದೇವಪ್ಪ ನಾಯ್ಕ, ತಿಮ್ಮ ಶಿವಪ್ಪ ನಾಯ್ಕ, ಪ್ರಕಾಶ ರಾಮಚಂದ್ರ ಹೆಗಡೆ, ನಾರಾಯಣ ರಾಮಾ ಗೌಡ ಮುಂತಾದವರು ಉಪಸ್ಥಿತರಿದ್ದರು. ಫಿರೋಜ್ ಸಾಬ್ ಸ್ವಾಗತಿಸಿ, ವಂದಿಸಿದರು.

ಇನ್ನೂರಕ್ಕೂ ಮಿಕ್ಕಿ ಜನಜಾಗೃತಿ ಸಭೆ:
 ಕಸ್ತೂರಿ ರಂಗನ್ ವರದಿಯಿಂದ ಉಂಟಾಗುವ ಪರಿಣಾಮದ ಕುರಿತು ಜಿಲ್ಲಾದ್ಯಂತ ಇನ್ನೂರಕ್ಕೂ ಮಿಕ್ಕಿ ಪ್ರದೇಶಗಳಲ್ಲಿ ಕಸ್ತೂರಿ ರಂಗನ್ ವಿರೋಧ ಜಾಗೃತೆ ಸಭೆಗಳನ್ನು ಸಂಘಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
 

Read These Next