ಕೋಲಾರ: ರಾಜ್ಯಮಟ್ಟದ ಟಿ-20 ಫೈನಲ್ ಕ್ರಿಕೆಟ್- ಈ-ಜೋನ್ ಕ್ರಿಕೆಟ್ ತಂಡ ಚಾಂಪಿಯನ್ಸ್

Source: shabbir | By Arshad Koppa | Published on 14th June 2017, 7:35 AM | Sports News |

ಕೋಲಾರ,ಜೂ.13: ತಮಿಳುನಾಡಿನ ವೆಲ್ಲೂರು ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಟಿ-20 ಫೈನಲ್ ಪಂದ್ಯದಲ್ಲಿ ಈ-ಜೋನ್ ಇನ್ಸ್‍ಟಿಟ್ಯೂಟ್ ಆಫ್ ಕ್ರಿಕೆಟ್ ಕೋಲಾರ ತಂಡವು ಗೆಲುವು ಸಾಧಿಸಿ ಚಾಂಪಿಯನ್ಸ್ ಆಗಿ ಹೊರಹೊಮ್ಮುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಲ್ಲದೆ 50,000/- ರೂ.ಗಳ ನಗದು ಬಹುಮಾನವನ್ನು ಪಡೆದಿದೆ. 


    ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನೈ ಜಾಲಿ ಕ್ರಿಕೆಟರ್ಸ್ 20 ಓವರ್‍ಗಳಲ್ಲಿ 167 ರನ್ ಕಲೆಹಾಕಿತ್ತು. ಇದಕುತ್ತರವಾಗಿ ಬ್ಯಾಟ್ ಮಾಡಿದ ಈ ಜೋನ್ ತಂಡ 19.1 ಓವರುಗಳಲ್ಲಿ 168 ರನ್ ಜಯಗಳಿಸಿದರು. ಸಪ್ತ ಪಂದ್ಯ ಪುರುಷೋತ್ತಮ ಹಾಗೂ ನಾರಾಯಣಸ್ವಾಮಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 
    ತಂಡದ ಸದಸ್ಯರಾದ ಉಲ್ಲಾಸ್, ಶಿವು, ಷರೀಫ್, ವಿನೋದ್, ವೆಂಕಿ, ಕೃಷ್ಣಸಿಂಗ್, ಜಯಕಿರಣ್ ಮತ್ತು ಮದಿ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಚಾಂಪಿಯನ್ಸ್ ಆದ ಈ ಜೋನ್ ತಂಡವನ್ನು ಈ-ಜೋನ್ ಮಂಜುನಾಥರೆಡ್ಡಿ, ವಾಸುದೇವಮೂರ್ತಿ, ಓಂಶಕ್ತಿ ಚಲಪತಿ, ಶಶಿಧರ್, ಮುದುವಾಡಿ ವೇಣು, ಉದಯ್‍ಕುಮಾರ್, ತ್ಯಾಗರಾಜ್ ಅಭಿನಂದಿಸಿದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್