ಕಾರವಾರ:ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯ ಆಚರಣೆ

Source: so news | By MV Bhatkal | Published on 23rd August 2021, 7:39 PM | Coastal News |

ಕಾರವಾರ:ದಕ್ಷಿಣ ಭಾರತದ ಅಭಿವೃದ್ಧಿಯಲ್ಲಿ ನಾರಾಯಣ ಗುರುಗಳಂತಹ ಸಮಾಜ ಸುಧಾರಕರ ಕಾರ್ಯ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜವು ಉತ್ತಮ ಶಿಕ್ಷಣ ಹಾಗೂ ಸುಧಾರಣೆಯಿಂದ ಅಭಿವೃದ್ಧಿ ಹೊಂದಲು ಸಾದ್ಯ ಎಂದರು. ಅದಕ್ಕೆ 50 ವರ್ಷಗಳ ಹಿಂದಿನ ಆಭಿವೃದ್ಧಿ ಕುಂಟಿತ ದಕ್ಷಿಣ ಭಾರತ ಹಾಗೂ ಇಂದಿನ ಆಭಿವೃದ್ಧಿಯುತ ದಕ್ಷಿಣ ಭಾರತವನ್ನ ಉದಾಹರಣೆ ನೀಡಿದರು.
ಅಪರ ಜಿಲ್ಲಾಧಿಕಾರಿ ಹೆಚ್ ಕೆ ಕೃಷ್ಣಮೂರ್ತಿ ಮಾತನಾಡಿ ನಾರಾಯಣ ಗುರುಗಳಂತಹ ದಾರ್ಷನಿಕರಿಂದಲೇ ಭಾರತ, ಅದರಿಂದಲೇ ಸಂಸ್ಕøತಿ ಉಳಿದಿದೆ. ಸಮಾಜಕ್ಕೆ ವಿದ್ಯೆ, ಸುಶಿಕ್ಷಣದ ಮೂಲಕ ಸ್ವತಂತ್ರರಾಗುತ್ತೀರಿ ಎಂದು ಸಂಘಟಿತ ಬಲದಿಂದ ಎಲ್ಲಾ ವರ್ಗದವರಿಗೂ ದೇವಾಲಯಗಳಿಗೆ ಪ್ರವೇಶ ವದಗಿಸಿದ ನಾರಾಯಣ ಗುರುಗಳ ಚಿಂತನೆಗಳನ್ನು ಅರಿಯುವುದು ಮುಖ್ಯ ಎಂದರು. 
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ್ ಮತ್ತಿತರರು ಉಪಸ್ತಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...