ಕಾರವಾರ: ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ

Source: S.O. News Service | By S O News | Published on 26th October 2021, 1:58 PM | Coastal News |

ಕಾರವಾರ : ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಅವಕಾಶವನ್ನು  ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸ್ವ ಉದ್ಯೋಗಿನಿಯರಾಗಿ ಎಂದು ಜಿಲ್ಲಾಪಂಚಾಯತ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಪ್ರೀಯಾಂಗಾ ಎಮ್ ಹೇಳಿದರು.

ಜಿಲ್ಲಾ ಪಂಚಾಯತ್ ಹೊರ ಆವರಣದಲ್ಲಿ ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ  ಸ್ವ ಸಹಾಯ ಸಂಘದ ಮಹಿಳಾ ಸದಸ್ಯೆಯರ ಕೈಚಳಕದಿಂದ ತಯಾರಿಸಿದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿ ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ   ಸಿಇಒ ಹಣತೆ ಮಾರಾಟ ಮಾಡುವ ಮಹಿಳೆಯರಿಗೆ ಮಳೆಯಿಂದ ತೊಂದರೆಯಾಗದಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕುಂಬಾರಿಕೆ  ನಮ್ಮ ಮೂಲ ಕಸುಬು ಆಗಿದ್ದು,   ತೀರಾ  ಸಣ್ಣ  ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿತ್ತು ಅಲ್ಲದೇ ಮಾರುಕಟ್ಟೆಯ ಸಮಸ್ಯೆ ಇತ್ತು.  2 ತಿಂಗಳ ಹಿಂದೆ  ನಮ್ಮ ಸಂಘಕ್ಕೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ  75 ಸಾವಿರ ಪ್ರೋತ್ಸಾಹ ಧನ ದೊರಕಿದ್ದು, ನಾವು ದೀಪದ ಹಣತೆಗಳನ್ನು ತಯಾರಿಸಿದ್ದೆವೆ. ಇಂದು ವ್ಯಾಪರಕ್ಕಾಗಿ ಇಲ್ಲಿಗೆ ಬಂದಿದ್ದು ಚೆನ್ನಾಗಿ ವ್ಯಾಪಾರ ವಾಗುತ್ತಿದೆ. ಇನ್ನೂ ಹೆಚ್ಚಿನ ವ್ಯಾಪಾರ ಆಗುವ ನಿರಿಕ್ಷೇಯಲ್ಲಿದ್ದೆವೆ -

ಶೋಭಾ ಸದು ಕುಂಬಾರ್ ,  ಜೋಯಿಡಾ ತಾಲೂಕಿನ ಲಕ್ಷ್ಮೀ ಸ್ವ-ಸಹಾರ ಸಂಘದ ಸದಸ್ಯೆ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ :
ಬಡ ಗ್ರಾಮೀಣ ಮಹಿಳೆಯರ ಸಬಲಿಕರಣ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಅಭಿಯಾನದ ಮುಖ್ಯ ಉದ್ದೇಶ. 

ಮಣ್ಣಿನಿಂದ ತಯಾರಿಸಲಾಗುವ ಹಣತೆಗೆ ದೀಪಾವಳಿ ಸಂದರ್ಭದಲ್ಲಿ ಬೇಡಿಕೆ ಇರುವುದರಿಂದ ಕೆಲವು ಸ್ವ-ಸಹಾಯ ಸಂಘಗಳ/ಸದಸ್ಯರುಗಳನ್ನು ಹಣತೆ ತಯಾರಿಸುವ ಕಾರ್ಯಕ್ಕೆ ಪ್ರೋತ್ಸಾಹಿಸಿ, ಇವರ ತಯಾರಿಸುವ  ಹಣತೆಯನ್ನು ಮಾರುಕಟ್ಟೆಗೆ  ಪರಿಚಯಿಸುವ ನಿಟ್ಟಿನಿನಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...