ಕಾರವಾರ: ರಾಜ್ಯದಲ್ಲಿ 500 ಕಾಲು ಸಂಕಗಳ ನಿರ್ಮಾಣ : ಸಚಿವ ಸತೀಶ್ ಜಾರಕಿಹೊಳಿ

Source: S O News | By I.G. Bhatkali | Published on 3rd December 2023, 4:45 PM | Coastal News |

ಕಾರವಾರ: ರಾಜ್ಯದಲ್ಲಿ ಈ ವರ್ಷ 12 ಜಿಲ್ಲೆಗಳಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ 100 ಕಾಲುಸಂಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 400 ಕಾಲುಸಂಕಗಳ ನಿರ್ಮಾಣ ಮಾಡುವ ಮೂಲಕ ರಾಜ್ಯದ ಗ್ರಾಮಂತರ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅಪಾಯಕಾರಿ ಸ್ಥಳಗಳಲ್ಲಿ , ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಅವರು ಇಂದು, ಶಿರಸಿ ತಾಲ್ಲೂಕಿನ ಶಿವಳ್ಳಿ ಗ್ರಾಮ ಪಂಚಾಯತನ ಹೆಗ್ಗಾರ ಗ್ರಾಮದಲ್ಲಿ ಗ್ರಾಮಬಂಧು ಸೇತುವೆ ನಿರ್ಮಾಣ ಅಡಿ, ನಿರ್ಮಾಣಗೊಂಡ ಕಾಲುಸಂಕ ಉದ್ಘಾಟನೆ ಮತ್ತು ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕಾಗಿ ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಇಂದು ರಾಜ್ಯದಲ್ಲಿ ಏಕಕಾಲದಲ್ಲಿ ಚಾಮರಾಜನಗರದಿಂದ ಬೆಳಗಾವಿ ವರೆಗೂ 100 ಕಾಲುಸಂಕಗಳನ್ನು ಉದ್ಘಾಟನೆ ಮಾಡಲಾಗುತ್ತಿದ್ದು, ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸಾರ್ವಜನಿಕರು ಮಳೆಗಾಲದಲ್ಲಿ ರಭಸದಿಂಧ ಹರಿಯುವ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾವಂತೆ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಮೂಲಕ ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ವಿಶೇಷÀವಾಗಿ 28 ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ ಎಂದರು. 

ಪ್ರಸ್ತುತ ರಾಜ್ಯದ್ಯಂತ ಕಾಲುಸಂಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿರುವ ಕಾಮಗಾರಿಗಳನ್ನು ಮುಂದಿನ ಮಳೆಗಾಲದೊಳಗೆ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ತರ ಕನ್ನಡ ಜಿಲ್ಲೆ ಮಲೆನಾಡು, ಪಶ್ಚಿಮ ಘಟ್ಟ ಹಾಗೂ ಕರಾವಳಿ ಪ್ರದೇಶಗಳಿಂದ ಕೂಡಿದ್ದು, ಮಳೆಗಾಲದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಹಳ್ಳ ಮತ್ತು ತೊರೆಗಳನ್ನು ದಾಟಲು ಮರದ ತುಂಡು, ಹಗ್ಗ ಬಳಸಿಕೊಂಡು ದಾಟುತ್ತಿದ್ದು ದುರ್ಘಟನೆಗಳು ನಡೆಯುವ ಸಂಭವ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು ಇರುವ ಕಡೆ ಪ್ರಥಮ ಆದ್ಯತೆ ಮೇಲೆ ಕಾಲು ಸಂಕಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಶಿವಳ್ಳಿ ಗ್ರಾಮ ಪಂಚಾಯತಿಯ ಹೆಗ್ಗಾರ ಗ್ರಾಮದಲ್ಲಿ ಕಾಲು ಸಂಕ ನಿರ್ಮಾಣದಿಂದ ಹೆಗ್ಗಾರ, ಬೈಲಕೊಪ್ಪ, ಕಂಚಿಮನೆ, ಕಲ್ಮನೆ, ಚಿಂಚಳಿಕೆ ಸೇರಿದಂತೆ ಸುಮಾರು 560 ಗ್ರಾಮಸ್ಥರಿಗೆ ಹಾಗೂ 60 ವಿದ್ಯಾರ್ಥಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲ ಹಾಗೂ ಈ ಗ್ರಾಮಗಳ ದೈನಂದಿನ ಸಂಚಾರದಲ್ಲಿ 2.5 ಕಿ.ಮೀ ನಷ್ಟು ದೂರ ಕಡಿಮೆಯಾಗಿದೆ ಎಂದರು.

ಶಿರಸಿ ತಾಲೂಕಿನ ಹೆಗ್ಗಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ 4 ಕೊಠಡಿ ನಿರ್ಮಾಣ ಮಾಡಿ ಕೊಡಲಾಗುವುದು ಎಂದರು.

ತಾವು ವಿಧಾನ ಪರಿಷÀತ್ ಸದಸ್ಯರಾಗಿದ್ದ ವೇಳೆಯಲ್ಲಿ ದಿನಪತ್ರಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿ ಹಗ್ಗದ ಸಹಾಯದಿಂದ ಹಳ್ಳ ದಾಟುತ್ತಿರುವ ಸುದ್ದಿ ಪ್ರಕಟವಾಗಿತ್ತು. ಈ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ತಕ್ಷಣದಲ್ಲಿ ರಾಜ್ಯದಲ್ಲಿ 100 ಕಾಲು ಸಂಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವಿಶೇಷÀವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ 2 ವಷÀðಗಳಲ್ಲಿ ಅವಶ್ಯವಿರುವ ಕಡೆ ಪ್ರಥಮ ಆದ್ಯತೆ ಮೇಲೆ ಕಾಲು ಸಂಕ ನಿರ್ಮಾಣ ಮಾಡಿ ಜಿಲ್ಲೆಯ ವಿದ್ಯಾರ್ಥಿಗಳ ಮತ್ತು ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ರಾಜ್ಯ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈ ಮೊದಲು ರಸ್ತೆ ನಿರ್ವಹಣೆಯನ್ನು ಕೇವಲ ಒಂದು ವಷÀð ಗುತ್ತಿಗೆದಾರರು ಮಾಡುತ್ತಿದ್ದರು ಇನ್ನು ಮುಂದೆ ಗುತ್ತಿಗೆದಾರರು ರಸ್ತೆ ನಿರ್ವಹಣೆಯನ್ನು 5 ªಷÀðಗಳವರೆಗೆ ಮಾಡಲು ಕಾನೂನು ಜಾರಿಗೆ ತರಲು ಚಿಂತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು. 

ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲವೆಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದು, ಗ್ಯಾರಂಟಿ ಯೋಜನೆಗಳಿಗೂ, ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣದ ಕೊರತೆಯಿಲ್ಲ. ಈ ಹಿಂದೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸಲು ಸರ್ಕಾರ ಬದ್ಧವಾಗಿದ್ದು, ಶೀರ್ಘದಲ್ಲೇ ಅವರಿಗೆ ಹಣ ಪಾವತಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮಾತನಾಡಿ ಸ್ವಾತಂತ್ರö್ಯ ಬಂದು 75 ವಷÀðವಾದರೂ ಜಿಲ್ಲೆಯಲ್ಲಿ ಮರದ ಕಾಲುಸಂಕದ ಮೇಲೆ ಜನ ಸಂಚಾರ ಮಾಡುವ ಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಮತ್ತು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿತ್ತು. ಈ ಕಾಲು ಸಂಕ ನಿರ್ಮಾಣದಿಂದ ಸಂಚಾರಕ್ಕೆ ಅನುಕೂಲವಾಗಿದೆ. ಜಿಲ್ಲೆಯಲ್ಲಿ ರಾಜ್ಯದ ಕಾಲು ಸಂಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿರುವುದು ವಿಶೇಷÀವಾಗಿದೆ ಎಂದರು.
 ರಾಜ್ಯದ 100 ಕಾಲು ಸಂಕ ನಿರ್ಮಾಣದ ಕಾಮಗಾರಿಗಳಲ್ಲಿ 28 ಕಾಮಗಾರಿಗಳನ್ನು ಜಿಲ್ಲೆಗೆ ನೀಡಿದ್ದು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸಚಿವರು ಸ್ಪಂದಿಸಿದ್ದು, ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡಲು ಬದ್ಧವಾಗಿದೆ ಎಂದರು.

ಶಾಸಕ ಭೀಮಣ್ಣ ಟಿ ನಾಯ್ಕ ಮಾತನಾಡಿ ಜಿಲ್ಲೆ ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳಿಗೆ, ಜನರಿಗೆ ಮಳೆಗಾಲದಲ್ಲಿ ಹಳ್ಳ ತೋರೆ ದಾಟುವಾಗ ತುಂಬಾ ತೊಂದರೆಯಾಗುತ್ತಿತ್ತು ಈ ಕಾಲು ಸಂಕ ನಿರ್ಮಾಣದಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ. ಶಿರಸಿ ಸಿದ್ದಾಪುರ ಭಾಗದಲ್ಲಿ 10 ಕಾಲುಸಂಕ ಮಾಡಲು ಸಚಿವರು ನೀಡಿದ್ದು ಈ ಭಾಗದ ಬಹು ವಷÀðಗಳ ಬೇಡಿಕೆ ಈಡೇರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಸತೀಶ ಸೈಲ್, ಲೋಕೊಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕಟ್ಟಡ) ಎಚ್ ಸುರೇಶ, ಶಿವಳ್ಳಿ ಗ್ರಾಮ ಪಂಚಾಯತ ಅಧ್ಯ್ಕಕ್ಷೆ ರೇಣುಕಾ ಗಣಪತಿ ಹರಿಜನ ಮತ್ತಿತರರು ಇದ್ದರು.

Read These Next