ಕಾರವಾರ: ಮತಗಟ್ಟೆ ಸಿಬ್ಬಂದಿಗೆ ಏಪ್ರಿಲ್ 16 ರಂದು ತರಬೇತಿ : ಜಿಲ್ಲಾಧಿಕಾರಿ
ಕಾರವಾರ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು,ಮತದಾನದ ಕರ್ತವ್ಯ ನಿರ್ವಹಣೆಗೆ ಈಗಾಗಲೇ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮತಗಟ್ಟೆ ಕರ್ತವ್ಯ ಕ್ಕೆ ನಿಯೋಜಿಸಿರುವ ಎಲ್ಲಾ ಪಿ.ಆರ್. ಓ ಗಳು ಮತ್ತು ಎ.ಪಿ.ಆರ್.ಓ ಗಳಿಗೆ ಏಪ್ರಿಲ್ 16 ರಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ.
ಈಗಾಗಲೇ ಮತದಾನದ ಕರ್ತವ್ಯ ನಿಯೋಜನೆಯ ಆದೇಶ ಪಡೆದಿರುವ ಎಲ್ಲಾ ಪಿ.ಆರ್. ಓ ಗಳು ಮತ್ತು ಎ.ಪಿ.ಆರ್.ಓ ಗಳು ತರಬೇತಿಗೆ ತಪ್ಪದೇ ಹಾಜರಾಗಬೇಕು.
ತರಬೇತಿಗೆ ಗೈರು ಹಾಜರಾಗುವವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಚ್ಚರಿಕೆ ನೀಡಿದ್ದಾರೆ.