ಕಾರವಾರ : ಮಾಜಾಳಿಯಲ್ಲಿ ಮದ್ಯಸಾರ ತುಂಬಿದ ಟ್ಯಾಂಕರ್ ವಶಕ್ಕೆ.

Source: SO News | By Laxmi Tanaya | Published on 7th November 2023, 9:59 PM | Coastal News |

ಕಾರವಾರ : ಅಬಕಾರಿ ಜಂಟಿ  ಆಯುಕ್ತರ ಮಂಗಳೂರ ವಿಭಾಗವು ನಿರ್ದೇಶನದಲ್ಲಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ  ನವೆಂಬರ್ 4  ರಂದು ಮಾಜಾಳಿ ತನಿಖಾ ಠಾಣೆಯಲ್ಲಿ ವಶಪಡಿಸಿಕೊಂಡ ಸ್ಪೀರಿಟ್ ಅಕ್ರಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀದರನಿಂದ  ಗೋವಾ ರಾಜ್ಯದ ಕಡೆಗೆ ಹೋಗುವ ಮದ್ಯಸಾರ ತುಂಬಿದ ಟ್ಯಾಂಕರನ್ನು ಖಚಿತ ಭಾತ್ಮಿ ಮೇರೆಗೆ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಟ್ಯಾಂಕರನಲ್ಲಿ ಸಾಗಾಟ ಮಾಡುತ್ತಿದ್ದ ಮದ್ಯಸಾರ (non potable)ಎಂದು invoice ನಲ್ಲಿ ನಮೂದಾಗಿದ್ದು ಮಿತಾಯ್ಲ ಅಸಿಟೆಟ್ ಉತ್ಪಾದನೆಗೆ ರವಿಂದ್ರ ಆಂಡ್ ಕಂಪನಿ ಮಿರ್ಜಾಪುರ ಬೀದರನಿಂದ ಗೋವಾದ ಗ್ಲೋಬಲ್ ಕೆಮಿಕಲ್ಸ್ ಮರ್ಮಗೋವಾಕ್ಕೆ ಸಾಗಾಟ ಮಾಡಲಾಗಿತ್ತು. 

ಒಟ್ಟು ಮದ್ಯಸಾರ 30 ಸಾವಿರ ಲೀಟರನ್ನು ದುರ್ಬಳಕೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಹಾಗೂ ರಫ್ತು ಮತ್ತು ಆಮದುದಾರ ಇಬ್ಬರು ಮಾನ್ಯ  ಸೂಚನೆಗಳನ್ನು ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.  ವಾಹನ ಚಾಲಕ ಮಗ್ಗರ ಸಿಂಗ್ ತಂದೆ ಮೋಹನ ಸಿಂಗ ಹಾಗೂ ರವಿಂದ್ರ ಆಂಡ್ ಕಂಪನಿ ಮಿರ್ಜಾಪುರ ಬೀದರ ಮತ್ತು ಗ್ಲೋಬಲ್ ಕೆಮಿಕಲ್ಸ್ ಮರ್ಮಗೋವ, ಗೋವ ರಾಜ್ಯ ಹಾಗೂ ವಾಹನ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
 ಒಟ್ಟು 18 ಲಕ್ಷದ ಮದ್ಯಸಾರ ಮತ್ತು 35ಲಕ್ಷ ರೂ ಮೌಲ್ಯದ ವಾಹನ ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆ.

Read These Next