ಶಾಲೆ ಪ್ರಾರಂಭ ದಿನದಿಂದಲೇ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಬೇಕು : ಚೈತ್ರಾ ಕೋಠಾರಕರ

Source: S O News Service | By I.G. Bhatkali | Published on 31st May 2019, 2:44 PM | Coastal News |

ಕಾರವಾರ: ಶಾಲೆ ಪ್ರಾರಂಭವಾದ ದಿನದಿಂದಲೇ ಅಂದಿನ ಪಾಠವನ್ನು ಅಂದೇ ಓದುವ ಹವ್ಯಾಸವನ್ನು ವಿಧ್ಯಾರ್ಥಿಗಳು ಬೆಳಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ ಹೇಳಿದರು. 

ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈಗಿನಿಂದಲೇ ಅಭ್ಯಾಸ ಮಾಡುವ ರೂಢಿ ಬೆಳಸಿಕೊಂಡರೆ ಪರೀಕ್ಷಾ ಸಮಯದಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ., ಇದು ಮುಂದೆ ಸಾಕಷ್ಟ ಸಹಕಾರಿಯಾಗುತ್ತದೆ. ಶಾಲಾ ಶಿಕ್ಷಕರು ಕೂಡಾ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಓದಲು ಪ್ರೋತ್ಸಾಹಿಸಬೇಕು ಎಂದರು. 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಮಾತನಾಡಿ ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ. ಈ ಬಾರಿ ನೀರಿನ ಸಮಸ್ಯೆ ಉಂಟಾಗಿದ್ದರೂ ಕೂಡಾ ಶಾಲಾ ಮಕ್ಕಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 2019-2010ನೇ ಶೈಕ್ಷಣಿಕ ವರ್ಷದಲ್ಲಿ  1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗುತ್ತಿದ್ದು, ಬಡವರಿಗೆ ಇದು ಸಹಕಾರಿಯಾಗಲಿದೆ ಮತ್ತು ಸಮಾಜದಲ್ಲಿನ ತಾರತಮ್ಯ ನಿವಾರಿಸಲು ನಾಂದಿ ಹಾಡಲಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೆ, ಇತರೆ ಇತರೆ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿ ಉತ್ತಮ ಭವಿಷ್ಯ ರೂಪಿಸಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ವಿನೂತನವಾಗಿ ಸ್ವಾಗತಿಸಲಾಯಿತು ಮತ್ತು ಸರಕಾರದಿಂದ ನೀಡಲಾಗುವ ಶಾಲಾ ಪಠ್ಯ ಪುಸ್ತಕಗಳನ್ನು 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿರರಿಸಲಾಯಿತು. ಶಿಕ್ಷಣಾಧಿಕಾರಿ ಲತಾ ನಾಯಕ, ಕಾರವಾರ ತಾಲೂಕು ಕಸಾಪ ಅಧ್ಯಕ್ಷರು ಹಾಗೂ  ಪತ್ರಕರ್ತ ನಾಗರಾಜ ಹರಪನಹಳ್ಳಿ,  ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ  ಪುರುಷೋತ್ತಮಗೌq ಹಾಗೂ ನಗರಸಭೆ ಮಾಜಿ ಸದಸ್ಯ ಪ್ರೇಮಾನಂದ ಗುನಗಿ ವೇಧಿಕೆ ಮೇಲೆ ಉಪಸ್ಥಿತರಿದ್ದರು, 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...