ಬನ್ನಿ, ಮತಚಲಾಯಿಸೋಣ; ಇಂದು ಮತದಾನಕ್ಕೆ ಸಜ್ಜಾಗಿರುವ 5.30 ಕೋಟಿ ಮತದಾರರು

Source: Vb | By I.G. Bhatkali | Published on 10th May 2023, 7:01 AM | State News |

ಬೆಂಗಳೂರು: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ರಾಜ್ಯದ ಒಟ್ಟು 5,30,85,566 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ ಸೇರಿದಂತೆ ಚುನಾವಣಾ ಸಾಮಗ್ರಿಗಳೊಂದಿಗೆ ಮೇ 9ರ ರಾತ್ರಿಯೇ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದು, ಮೇ 10 ಬೆಳಗ್ಗೆ 6ಗಂಟೆಯಿಂದಲೇ ಸುಗಮ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದ್ದಾರೆ.

ಒಟ್ಟಾರೆ ಮತದಾರರ ಪೈಕಿ ಪುರುಷ ಮತದಾರರು 2,66,82,156, ಮಹಿಳಾ ಮತದಾರರು 2,63,98,483, ಇತರ ಮತದಾರರು 4,927 ಮಂದಿ ಇದ್ದಾರೆ. 11,71,558 ಮಂದಿ ಮೊದಲ ಬಾರಿ ಮತದಾನ ಮಾಡಲಿದ್ದು, 80ವರ್ಷ ಮೇಲ್ಪಟ್ಟ 12,15,920 ಮಂದಿ, 5,71,281 ಮಂದಿ ವಿಶೇಷ ಚೇತನ ಮತದಾರರು ಇದ್ದಾರೆ.

4 ಲಕ್ಷ ಸಿಬ್ಬಂದಿ ನಿಯೋಜನೆ: ಚುನಾವಣಾ ಕಾರ್ಯ ಕ್ಕಾಗಿ ಸುಮಾರು 4 ಲಕ್ಷ ಸಿಬ್ಬಂದಿಯನ್ನು ನೇಮಿಸಲಾಗಿದ್ದು, 58,545 ಮತಗಟ್ಟೆಗಳಿಗೆ 62,988 ಬ್ಯಾಲೆಟ್ ಯೂನಿಟ್ (ಬಿಯು) ಹಾಗೂ 58,545 ವಿವಿ ಪ್ಯಾಟ್ ಗಳನ್ನು ಹಂಚಿಕೆ ಮಾಡಲಾಗಿದೆ. 1,15,709 ಬ್ಯಾಲೆಟ್ ಯೂನಿಟ್‌ಗಳು, 82,543 ಸಿಯು ಹಾಗೂ 89,379 ವಿವಿಪ್ಯಾಟ್‌ಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ. ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ 84,119 ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಪೈಕಿ 304 ಡಿವೈಎಸ್ಪಿ, 991 ಪೊಲೀಸ್ ಇನ್‌ಸ್ಪೆಕ್ಟರ್, 2,610 ಪಿಎಸೈ, 5,803 ಎಎಸೈ, 46,421 ಪೊಲೀಸ್ ಕಾನ್‌ಸ್ಟೇಬಲ್‌ಗಳು, 27,990 ಗೃಹ ರಕ್ಷಕ ದಳದ ಸಿಬ್ಬಂದಿ ಒಳಗೊಂಡಿದ್ದಾರೆ.

ಇದಲ್ಲದೆ, ಕೇಂದ್ರ ಸಶಸ್ತ್ರ ಪಡೆಯ 58,500 ಸಿಬ್ಬಂದಿ, 650 ಸಿಆರ್ ಪಿಎಫ್ ತುಕಡಿ, ಆಂಧ್ರದಿಂದ ತಲಾ 1ಸಾವಿರ ಪೊಲೀಸ್‌ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ, ತೆಲಂಗಾಣದಿಂದ 516 ಪೊಲೀಸ್, 684 ಗೃಹ ರಕ್ಷಕ ದಳದ ಸಿಬ್ಬಂದಿ, ಮಹಾರಾಷ್ಟ್ರದಿಂದ 3ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿ, ಕೇರಳದಿಂದ 600 ಪೊಲೀಸ್, ಗೋವಾದಿಂದ ತಲಾ 100 ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ವಿಶೇಷ ಘಟಕ ನಿಯೋಜನೆ: ಚುನಾವಣೆ ಕಾರ್ಯಕ್ಕೆ 19 ಎಸ್ಪಿ, 107 ಡಿಎಸ್ಪಿ, 189 ಪೊಲೀಸ್ ಇನ್‌ಸ್ಪೆಕ್ಟರ್, 130 ಎಎಸ್ಸಿ, 2,274 ಪೊಲೀಸ್ ಕಾನ್‌ಸ್ಟೇಬಲ್‌ ಸೇರಿದಂತೆ ಒಟ್ಟು 2,959 ಮಂದಿಯನ್ನು ಒಳಗೊಂಡ ವಿಶೇಷ ಘಟಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

185 ಗಡಿ ಚೆಕ್‌ಪೋಸ್ಟ್‌ಗಳು: 185 ಅಂತರ್‌ರಾಜ್ಯ ಗಡಿ ಚೆಕ್‌ ಪೋಸ್ಟ್‌ಗಳು, 100 ಅಬಕಾರಿ ಅಂತರ್‌ರಾಜ್ಯ ಗಡಿ ಚೆಕ್‌ ಪೋಸ್ಟ್ ಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. 185 ಚೆಕ್‌ಪೋಸ್ಟ್‌ ಗಳಲ್ಲೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ನೆರೆ ರಾಜ್ಯಗಳಲ್ಲಿನ ಗಡಿಗಳಲ್ಲೂ 190 ಪೊಲೀಸ್, 18 ಅಬಕಾರಿ ಹಾಗೂ 33 ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್‌ಗಳು ಸಕ್ರಿಯವಾಗಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಿವೆ.

ನೆರೆ ರಾಜ್ಯಗಳಲ್ಲಿ ಚೆಕ್‌ ಪೋಸ್ಟ್‌ಗಳ ಸ್ಥಾಪನೆ: ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ನೆರೆ ರಾಜ್ಯಗಳು ಕೈ ಜೋಡಿಸಿದ್ದು, ಮಹಾರಾಷ್ಟ್ರ ರಾಜ್ಯವು 53 ಪೊಲೀಸ್ ಚೆಕ್‌ ಪೋಸ್ಟ್, ಗೋವಾ ರಾಜ್ಯವು 5 ಪೊಲೀಸ್, ತಲಾ ಮೂರು ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ಚೆಕ್‌ ಪೋಸ್ಟ್‌ಗಳನ್ನು ಆರಂಭಿಸಿದೆ.

ಆಂಧ್ರಪ್ರದೇಶವು 57 ಪೊಲೀಸ್ ಚೆಕ್‌ ಪೋಸ್ಟ್, ತೆಲಂಗಾಣ 30 ಪೊಲೀಸ್, 5 ಅಬಕಾರಿ ಹಾಗೂ 11 ವಾಣಿಜ್ಯ ತೆರಿಗೆ ಚೆಕ್‌ ಪೋಸ್ಟ್ ಗಳನ್ನು ಸ್ಥಾಪಿಸಿದೆ. ತಮಿಳುನಾಡು ರಾಜ್ಯವು 25 ಪೊಲೀಸ್, 2 ಅಬಕಾರಿ ಹಾಗೂ 5 ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್‌ಗಳು, ಕೇರಳ ರಾಜ್ಯವು 20 ಪೊಲೀಸ್, 8 ಅಬಕಾರಿ ಹಾಗೂ 14 ವಾಣಿಜ್ಯ ತೆರಿಗೆ ಚೆಕ್‌ ಪೋಸ್ಟ್ ಗಳನ್ನು ಆರಂಭಿಸಿದೆ.

ಕಣದಲ್ಲಿರುವ 2,615 ಅಭ್ಯರ್ಥಿಗಳು: 224 ಕ್ಷೇತ್ರಗಳಲ್ಲಿ ಅಂತಿಮವಾಗಿ 2,615 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಈ ಪೈಕಿ 2,430 ಪುರುಷ, 184 ಮಹಿಳೆ ಹಾಗೂ ಓರ್ವ ತೃತೀಯ ಲಿಂಗಿ ಅಭ್ಯರ್ಥಿಯಿದ್ದಾರೆ. ಬಿಜೆಪಿಯ 224, ಕಾಂಗ್ರೆಸ್ ಪಕ್ಷದ 223, ಆಮ್ ಆದ್ಮ ಪಕ್ಷದ 209, ಸಿಪಿಎಂ ಪಕ್ಷದ 4, ಬಹುಜನ ಸಮಾಜ ಪಾರ್ಟಿಯ 133, ಜೆಡಿಎಸ್ ಪಕ್ಷದ 209, ಕರ್ನಾಟಕ ರಾಷ್ಟ್ರ ಸಮಿತಿಯ 195, ಉತ್ತಮ ಪ್ರಜಾಕೀಯ ಪಕ್ಷದ 110 ಅಭ್ಯರ್ಥಿಗಳು, 918 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 2,615 ಮಂದಿ ಕಣದಲ್ಲಿದ್ದಾರೆ.

ಬೆಟ್ಟಿಂಗ್ ಮೇಲೆ ನಿಗಾ: ಮತದಾನ ಮುಗಿದ ನಂತರ ಮೇ 13ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಸೂಕ್ಷ್ಮನಿಗಾ ಇರಿಸುವಂತೆ ಸಿಸಿಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಚುನಾವಣೆಯಲ್ಲಿ ರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ನಡೆಯುವ ಸಾಧ್ಯತೆಯಿದೆ. ವಿಶೇಷ ಚೇತನ ಮತದಾರರಿಗೆ ಸೌಲಭ್ಯಗಳು

5,71,281 ಗುರುತಿಸಲಾದ ವಿಶೇಷ ಚೇತನ ಮತದಾರರಿಗೆ ಅನುಕೂಲ ಕಲ್ಪಿಸಲು 58,545 ಮತಗಟ್ಟೆಗಳಲ್ಲಿ 45,872 ಗಾಲಿಕುರ್ಚಿಗಳು, 46,872 ಭೂತಕನ್ನಡಿ, 1,068 ಸಂಜ್ಞಾ ಭಾಷಾಂತರಕಾರರು ಹಾಗೂ 54,950 ಸಹಾಯಕರನ್ನು ನೇಮಿಸಲಾಗಿದೆ.

2,298 ಮಾದರಿ ಮತಗಟ್ಟೆ ಕೇಂದ್ರಗಳು:996 ಸಖಿ, 239 ವಿಶೇಷ ಚೇತನರು, 286 ಯುವ ಸಿಬ್ಬಂದಿ, 737 ಸ್ಥಳೀಯ ವಿಷಯ ಆಧರಿತ ಹಾಗೂ 40 ಬುಡಕಟ್ಟು ಜನಾಂಗದವರಿಗೆ ಸಾಂಪ್ರದಾಯಿಕ ಮತಗಟ್ಟೆ ಸೇರಿದಂತೆ ಒಟ್ಟು 2,298 ಮಾದರಿ ಮತಗಟ್ಟೆ ಕೇಂದ್ರಗಳನ್ನು ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ.

11,617 ಸೂಕ್ಷ್ಮ ಮತಗಟ್ಟೆಗಳು:: 11,617 ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಗಾ ವಹಿಸಲು ಸೂಕ್ತ ವೀಕ್ಷಕರು, ವೆಬ್ ಕಾಸ್ಟಿಂಗ್, ಸಿಸಿಟಿವಿ ಇತ್ಯಾದಿ ಸೇರಿದಂತೆ ವಿವಿಧ ರಕ್ಷಣಾ ಪಡೆಗಳು ಮತಗಟ್ಟೆಯನ್ನು ಒಳಗೊಂಡಿರುತ್ತವೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...