ಯುಜಿಡಿ ವೈಜ್ಞಾನಿಕ ಕಾಮಗಾರಿಯಿಂದ ಕಾರ್ಗದ್ದೆ ಗ್ರಾಮಸ್ಥರು ಆಕ್ರೋಶ

Source: so news | By MV Bhatkal | Published on 16th June 2021, 12:10 AM | Coastal News |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಗುಜರಾತಿನ ಅಹಮದಾಬಾದನ ಖಾಸಗಿ ಕಂಪನಿಯಾದ ಎಲ್‌ ಸಿ ಇನ್ಪ್ರಾ ಪ್ರಾಜೇಕ್ಟ ಪ್ರೈವೆಟ್‌ ಲಿಮಿಟೆಡ್‌ ಯುಜಿಡಿ ಕಾಮಗಾರಿಯನ್ನು ನಡೆಸುತ್ತಿದ್ದು ಇವರು ನಡೆಸುತ್ತಿರುವ ಈ ವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ಸಂಕಷ್ಟಕಿಡಾಗಿದ್ದು ತಾಲೂಕಿನ ಕಾರ್ಗದ್ದೆ ಸಾರ್ವಜನಿಕರು ಕಾಮಗಾರಿಯಿಂದ ಆಗಿರುವ ಅದ್ವಾನವನ್ನು ಸರಿಪಡಿಸದಿದ್ದಲ್ಲಿ ಹೊರಾಟದ ಎಚ್ಚರಿಕೆಯನ್ನು ನಿಡಿದ್ದಾರೆ

ಯುಜಿಡಿ ಕಾಮಗಾರಿ ಟೆಂಡರ್‌ ಹಿಡಿದು ಪಟ್ಟಣ ಪಂಚಾಯತ್ತಿನಾಧ್ಯಂತ ಯುಜಿಡಿ ಕಾಮಗಾರಿ ನಡೆಸಲು ಮುಂದಾಗಿದ್ದು ಈ ಕಂಪನಿ ಯಾವುದೆ ವೈಜ್ಞಾನಿಕ ಮಾನದಂಡಗಳಿಲ್ಲದೆ ಕಾಮಗಾರಿ ನಡೆಸುತ್ತಿದ್ದು ಇವರ ಕಾಮಗಾರಿಯ ಕಾರಣ ಮಳೆಗಾಲದಲ್ಲಿ ಸುಸಜ್ಜಿತ ರಸ್ತೆಗಳನ್ನು ಅಗೆದುಹಾಕಿ ರಸ್ತೆಗಳನ್ನು ಕೆಸರಿನ ಗುಂಡಿಗಳನ್ನಾಗಿ ಪರಿವರ್ತಿಸಿದ್ದಲ್ಲದೆ ಇವರು ನಡೆಸುತ್ತಿರುವ ಯುಜಿಡಿ ಕಾಮಗಾರಿ ಅವೈಜ್ಞಾನಿಕತೆಯಿಂದ ಕುಡಿದ್ದು ಯುಜಿಡಿ ಟ್ಯಾಂಕ್‌ ಕಳಪೆ ಮಟ್ಟದ್ದಾಗಿದ್ದು ಈಗಾಗಲೆ ಟ್ಯಾಂಕ್ಗಳಲ್ಲಿ ಲಿಕೆಜ್‌ ಬರುತ್ತಿರುವ ಆರೋಪಗಳು ಕೇಳಿಬರುತ್ತಿದ್ದೆ ಹಾಗು ಈ ಕಂಪನಿಯು ಯುಜಿಡಿ ಕಾಮಗಾರಿಯ ನೆಪವನ್ನು ಮುಂದ್ದಿಟ್ಟುಕೊಂಡು ಕಾರ್ಗದ್ದೆಯಲ್ಲಿ ೧೫ ಲಕ್ಷ ಬೆಲೆಯಲ್ಲಿ ನಿರ್ಮಾಣವಾದ ಕಾಂಕ್ರೇಟ್‌ ರಸ್ತೆಯನ್ನು ಬಿರಿಕು ಬಿಡುವಂತೆ ಹಾನಿಗೊಳಿಸಿದ್ದಾರೆ ಈ ಕಂಪನಿ ಯುಜಿಡಿ ಟ್ಯಾಂಕ್‌ ಪೈಪ್‌ ಲೈನ್ಗಳನ್ನು ಅಳವಡಿಸಿದ ನಂತರವೆ ರಸ್ತೆ ಕಾಮಗಾಗಿ ನಡೆದಿದ್ದು ಇವರ ಅವೈಜ್ಞಾನಿಕ ಕಾಮಗಾರಿಯ ಕಾರಣ ರಸ್ತೆ ಸಂಪೂರ್ಣ ಹಾಳಾಗಿರುವುದಾಗಿ ಕಾರ್ಗದ್ದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .
ಈ ಬಗ್ಗೆ ಕಾರ್ಗದ್ದೆ ಸಾರ್ವಜನಿಕರಾದ ಚಂದ್ರು ನಾಯ್ಕ ಮಾತನಾಡಿ ನಮ್ಮ ಗ್ರಾಮದಲ್ಲಿ ನಡೆಸುತ್ತಿರುವ ಯುಜಿಡಿ ಕಾಮಗಾರಿ ಕಾರಣ ನಾವು ಇಂದು ಸಂಕಷ್ಟಕ್ಕೆ ಒಳಗಾಗಿದ್ದೆವೆ ಈ ಕಾಮಗಾರಿ ಕಾರಣ ೧೫ ಲಕ್ಷದಲ್ಲಿ ನಿರ್ಮಾಣವಾಗಿರು ರಸ್ತೆ ಬಿರುಕುಬಿಟ್ಟು ಹಾಳಾಗುತ್ತಿದೆ ಯುಜಿಡಿ ಟ್ಯಾಂಕ್‌ ಕೂಡ ಲಿಕೆಜ್‌ ಬಂದಿರುತ್ತದೆ ಇದು ಅವೈಜ್ಞಾನಿಕ ಕಾಮಗಾರಿಯಾಗಿದ್ದು ನಾವು ಸಂಕಷ್ಟಕ್ಕೆ ಇಡಾಗಿದ್ದೆವೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು
ತಾಲೂಕಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಗುಜಾರಾತಿನ ಅಹಮದಾಬಾದಿನ ಈ ಖಾಸಗಿ ಕಂಪನಿ ನಡೆಸುವ ಯುಜಿಡಿ ಕಾಮಗಾರಿಕಾರಣ ಅಭಿವೃದ್ದಿಗಿಂತ ತಾಲೂಕ ಸಾರ್ವಜನಿಕರು ಸಂಕಷ್ಟಕ್ಕೆ ಇಡಾಗಿದ್ದಾರೆ ಈ ಬಗ್ಗೆ ಕೂಡಲೆ ಸಂಬಂದಿಸಿದ ಅಧಿಕಾರಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಭಟ್ಕಳ ತಾಲೂಕಿನ ಹೈಕೊರ್ಟಿನ ವಕೀಲರಾದ ದತ್ತಾತ್ರೆಯ ನಾಯ್ಕ ಹೇಳಿದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...