ಧಾರವಾಡ: ಗಡಿ ನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕ್ರತಿಕ ಸಂಭ್ರಮ

Source: Press Release | By I.G. Bhatkali | Published on 24th February 2024, 5:37 PM | State News | Don't Miss |

ಧಾರವಾಡ: ಕನ್ನಡ ನಾಡಿನಲ್ಲಿ ಕನ್ನಡದ ಜಾಗೃತಿ ಮಾಡುವ ಅನಿವಾರ್ಯತೆ ಒದಗಿ ಬರುತ್ತಿರುವದು ವಿಷಾದನೀಯವೆಂದು ಅಥಣಿಯ ವಿಶ್ರಾಂತ ಉಪನ್ಯಾಸಕ ಹಾಗೂ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪೂರ  ಹೇಳಿದರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಸುಕ್ಷೇತ್ರ ಗಚ್ಚಿನಮಠ, ಮೋಟಗಿಮಠ, ವಿಮೋಚನಾ ಸಂಸ್ಥೆ, ಕಸಾಪ ಹಾಗೂ ಸಾಹಿತ್ಯ ಸಂಸ್ಕೃತಿಕ ಸಂಘ ಅಥಣಿ ಇವರ ಸಹಯೋಗದಲ್ಲಿ  ಬೆಳಗಾವಿ ಜಿಲ್ಲೆಯ ಅಥಣಿಯ ಸುಕ್ಷೇತ್ರ ಗಚ್ಚಿನ ಮಠದಲ್ಲಿ ಆಯೋಜಿಸಿದ್ದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕ್ರತಿಕ ಸಂಭ್ರಮ ಎರಡು ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು ಜನ ಸಾಮಾನ್ಯರಿಗೆ ಬೇಡವಾಗಿರುವ ಗಡಿ ಮತ್ತು ಭಾಷಾ ವಿವಾದ ರಾಜಕೀಯ ಹಿತಾಸಕ್ತಿಯಾಗಿ ಕೆಲವರ ಚಿತಾವಣೆಯಿಂದ ಜೀವಂತವಾಗಿಡಲು ಪ್ರಯತ್ನಿಸಲಾಗುತ್ತಿದ್ದು ಇದಕ್ಕೊಂದು ಅಂತ್ಯ ಹಾಡಬೇಕಾದರೆ ಪ್ರತಿಯೊಬ್ಬರಲ್ಲಿ ಅಖಂಡ ಕರ್ನಾಟಕದ ಪರಿಕಲ್ಪನೆ ಮೂಡಬೇಕಾಗಿದೆ.

ಕರ್ನಾಟಕದ ಗಡಿ ಭಾಗದ ಹದಿನೇಳು ಜಿಲ್ಲೆಗಳ ಜನರು ಗಡಿ ವಿವಾದ, ಭಾಷಾ ವಿವಾದಗಳಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಕಾಲ ಕಳೆಯುವಂತಾಗಿದೆ , ರಾಜ್ಯದ ಅನೇಕ ಗ್ರಾಮಗಳು ಈಗಾಗಲೇ ಪಕ್ಕದ ರಾಜ್ಯಗಳನ್ನು ಸೇರಿವೆ ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲವೆಂದು ಹೇಳಿದ ಲೋಕಾಪೂರ ಅವರು ಮಹಾರಾಷ್ಟ್ರ, ಆಂದ್ರ, ಕೇರಳ, ಗೋವಾದಲ್ಲಿ ದೊರೆತಿರುವ ಬಹುತೇಕ ಶಾಸನಗಳು ಕನ್ನಡದಲ್ಲಿವೆ. ಇವುಗಳನ್ನು ಗಮನಿಸಿದಾಗ ಅಂತಹ ಸ್ಥಳಗಳು ಮೂಲತ ಕರ್ನಾಟಕದ್ದಾಗಿದ್ದವು ಎಂದು ಅರಿತುಕೊಳ್ಳಬಹುದಾಗಿದೆ, ಗಡಿ ನಾಡಿನಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಮತ್ತು ಕನ್ನಡ ಕಲೆ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಅವಿರತ ಪರಿಶ್ರಮ ಅವಶ್ಯವಿದ್ದು ಕನ್ನಡ ಅಭಿವೃದ್ದಿ ಮತ್ತು ಗಡಿ ಅಭಿವೃದ್ದಿ ಪ್ರಾಧಿಕಾರಗಳು ಶ್ರಮಿಸಬೇಕಾಗಿದೆ, ಜೊತೆಗೆ ಗಡಿ ನಾಡಿನಲ್ಲಿ ಗಡಿನಾಡು ಸಾಂಸ್ಕೃತಿಕ ಪ್ರಾಧಿಕಾರ ರಚನೆ, ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ಗಡಿ ಕನ್ನಡಿಗರ ಆರ್ಥಿಕ ಸಭಲತೆಗೆ ಸಹಕರಿಸಬೇಕು ಹಾಗೂ ಪ್ರತಿಯೊಬ್ಬ ಸರಕಾರಿ ನೌಕರರು ಕನಿಷ್ಠ ಮೂರು ವರ್ಷ ಗಡಿ ನಾಡಿನಲ್ಲಿ ಸೇವೆ ಸಲ್ಲಿಸುವದನ್ನು ಸರ್ಕಾರ ಕಡ್ಡಾಯ ಮಾಡಬೇಕು ಎಂದು ಸಾಹಿತಿ ಲೋಕಾಪೂರ ಅವರು ಸರಕಾರವನ್ನು ಆಗ್ರಹಿಸಿದರು.

ಸಮಾರಂಭದ ಅತಿಥಿಗಳಾಗಿದ್ದ ಹಿರಿಯ ವೈದ್ಯ ಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿ ಅಥಣಿ ನಾಡಿಗೆ ಸಾಹಿತ್ಯಿಕ, ಸಂಸ್ಕೃತಿಕ, ಧಾರ್ಮಿಕ ವಾಗಿ ಬಹುದೊಡ್ಡ ಕೊಡುಗೆಯನ್ನು ನೀಡಿದ ಇತಿಹಾಸವಿದೆ ಎಂದರು. ಸಮಾಜದ ಗಣ್ಯರಾದ  ಅರವಿಂದರಾವ ದೇಶಪಾಂಡೆ ಅತಿಥಿಗಳಾಗಿ ಮಾತನಾಡುತ್ತಾ ಧಾರವಾಡಕ್ಕೆಚಮತ್ತು ಅಥಿಣಿಗೆ ಅವಿನಾಭಾವ ಸಂಬಂಧ ಇದೆ. ಅಥಣಿ ಶಿವಯೋಗಿಗಳು  ಧಾರವಾಡದ ಮುರಘಾಮಠ ಸ್ಥಾಪಣೆಗೆ ಪ್ರೇರಣಾ ಶಕ್ತಿಯಾಗಿ ನಿಂತವರು, ಅಥಣಿಗೆ ಬರದೇಇರುವ ಯಾವ ಸಾಹಿತಿಗಳೂ ಇಲ್ಲ. ದ.ರಾ ಬೇಂದ್ರೆಯವರು ಅಥಣಿ ಸಾಹಿತ್ಯ ಸಂಸ್ಕ್ರತಿಕ ಸಂಘವನ್ನು ಉದ್ಘಾಟನೆ ಮಾಡಿದರು. ಅದು ಎಪ್ಪತ್ತೈದು ವರ್ಷಗಳಿಂದ ಕಾರ್ಯಮಾಡುತ್ತಿದೆವೆಂದು ಧಾರವಾಡ ಅಥಣಿ ಸಂಬಂಧಗಳನ್ನು ನೆನಪಿಸಿದರು. ಸಮಾಜದ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಥಣಿಯಲ್ಲಿ ಘಟಕವನ್ನು ಸ್ಥಾಪಿಸುವಂತಾಗಬೇಕು. ಅದಕ್ಕೆ ಎಲ್ಲರೀತಿಯ ಸಹಾಯವನ್ನು ಅಥಣಿ ಜನ ಮಾಡುವರು ಎಂದರು.

ಅಥಣಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ಪ್ರಿಯಂವದಾ ಆಣೆಪ್ಪನವರ ಮಾತಾಡಿದರು.

ಸಮಾರಂಭದ ಸಾನಿದ್ಯವನ್ನು ಅಥಣಿಯ ಸುಕ್ಷೇತ್ರ ಗಚ್ಚಿನಮಠ ಮನಿಪ್ರ ಶಿವಬಸವ ಮಹಾ ಸ್ವಾಮಿಗಳು ವಹಿಸಿದ್ದರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ  ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಸಂಘ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಗೆ ಗಡಿ ನಾಡಿನ ಜನರ ಸಹಕಾರ ಶ್ಲ್ಯಾಘನೀಯವಾಗಿದೆ ಎಂದುರು.

ಸಮಾರಂಭದಲ್ಲಿ ಕವಿವಿ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ,  ಶಿವಾನಂದ ಭಾವಿಕಟ್ಟಿ, ಡಾ. ಸಂಜೀವ ಕುಲಕರ್ಣಿ ಇದ್ದರು.
ಡಾ.ಧನವಂತ ಹಾಜವಗೋಳ ಸ್ವಾಗತಿಸಿದರು ಶಿವಾನಂದ ಟವಳಿ ಕಾರ್ಯಕ್ರಮ ನಿರೂಪಿಸಿದರು, ವೀರಣ್ಣ ವಡ್ಡಿನ ವಂದಿಸಿದರು.

Read These Next

ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದ ಮುನಿರತ್ನ; ರಕ್ಷಣೆ ನೀಡಿದರೆ 'ಸಿಟ್' ಮುಂದೆ ದಾಖಲೆ ಬಿಡುಗಡೆ: ಸಂತ್ರಸ್ತೆ

ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿಸಿ, ಅವರನ್ನು ...

ಚಿಕ್ಕಮಗಳೂರು: ಓವರ್‌ಡೋಸ್ ಇಂಜೆಕ್ಷನ್‌ನಿಂದ ಏಳು ವರ್ಷದ ಬಾಲಕನ ದುರ್ಮರಣ; ಸಾರ್ವಜನಿಕರಿಂದ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಖಾಸಗಿ ಕ್ಲಿನಿಕ್‌ನ ...

ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸುಲಿಗೆ ಆರೋಪ; ಕೇಂದ್ರ ಸಚಿವೆ ನಿರ್ಮಲಾ ವಿರುದ್ಧ ಎಫ್‌ಐಆರ್

ಚುನಾವಣಾ ಬಾಂಡ್ ಮೂಲಕ ಕಾರ್ಪೊರೇಟ್ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ...

ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರ್ಸಿ ತಾಲೂಕಿನ ಮಾರಿಕಾಂಬಾ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ...