ಕಾರವಾರ: ಕೌಟುಂಬಿಕ ದೌರ್ಜನ್ಯದ ಕಾಯ್ದೆಯ ಬಗ್ಗೆ ಅರಿವಿರಲಿ: ನ್ಯಾಯಾಧೀಶ ರೇಷ್ಮಾ ಜೆ ರೊಡ್ರಿಗಸ್.

Source: S O News | By I.G. Bhatkali | Published on 23rd February 2024, 4:16 PM | Coastal News |

ಕಾರವಾರ: ಕೌಟುಂಬಿಕ ದೌರ್ಜನ್ಯದ ಕಾಯ್ದೆಯು ಸಿವ್ಹಿಲ್ ಸ್ವರೂಪದ ಕಾನೂನು ಆಗಿದ್ದು, ಇದರ ಉಲ್ಲಂಘನೆ ಆದರೆ ಶಿಕ್ಷಾರ್ಹ ಅಪರಾಧ ಆಗಿರುವುದರಿಂದ ಹಾಗೂ ತುರ್ತು ಆದೇಶಗಳ ವ್ಯವಸ್ಥೆ ಇರುವುದರಿಂದ ಮಹಿಳಾ ಸಬಲೀಕರಣಕ್ಕೆ ಇದೊಂದು ದೊಡ್ಡ ಹೆಜ್ಜೆಯಾಗಿದ್ದು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಮಹಿಳೆಯರು ಹಾಗೂ ಸಾರ್ವಜನಿಕರು ತಿಳಿದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಸಿ.ಜೆ.ಎಮ್ ಆದ ರೇಷ್ಮಾ ಜೆ ರೊಡ್ರಿಗಸ್ ತಿಳಿಸಿದರು.

ಅವರು ಇಂದು ಜಿಲ್ಲಾ ಆಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರ ಸಹಯೋಗದಲ್ಲಿ ದಿನಾಂಕ:22-02-2024 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತಿçÃಶಕ್ತಿ ಸಭಾಭವನ ಕಾರವಾರದಲ್ಲಿ “ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣಾ ಕಾಯ್ದೆ”ಅನುಷ್ಟಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ಓರಿಯಂಟೇಷನ್ ತರಬೇತಿ ಉದ್ಘಾಟಿಸಿ ಮಾತನಾಡಿದರು. 

ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಹಾಗೂ ನಿಯಮ 2006 ರಡಿ ಅಕ್ಟೋಬರ್ 26 ರಂದು ಜಾರಿಗೆ ಬಂದಿದ್ದು, ಕರ್ನಾಟಕದಲ್ಲಿ ಜೂನ್ 2017 ರಿಂದ ಜಾರಿಗೆ ಬಂದಿದೆ.. ಕೌಟುಂಬಿಕ ದೌರ್ಜನ್ಯವನ್ನು ವಿಸ್ತರಿಸುತ್ತಾ ಹೋದರೆ ಪತಿ/ಪತ್ನಿಯರ ಮಧ್ಯದಲ್ಲಿ ಅಷ್ಟೇ ಅಲ್ಲದೆ ಗಂಡ, ಅತ್ತೆ, ನಾದಿನಿ ಹಾಗೂ ಇನ್ನಿತರರಿಗೂ ವಿಸ್ತರಣೆಯಾಗುತ್ತದೆ ಎಂದರು. 

ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ದೇವಿದಾಸ ರಾಯ್ಕರ್, ಮಾತನಾಡಿ, ಹೆಚ್ಚಿನ ಪ್ರಕರಣಗಳಲ್ಲಿ ತಾಯಂದಿರೇ ನೊಂದ ಮಹಿಳೆಯಾಗಿರುತ್ತಾರೆ. ಶೇಕಡಾ 40 ರಿಂದ 50 ರಷ್ಟು ಮಹಿಳೆಯರಿಗೆ ಕೋರ್ಟ ಮುಖಾಂತರ ಪರಿಹಾರವನ್ನು ತೆಗೆದುಕೊಳ್ಳಬೇಕೆಂಬ ಪರಿಜ್ಞಾನವು ಇರುವುದಿಲ್ಲ. ಅಂಗನವಾಡಿ ಕಾರ್ಯಕರ್ತೆ/ ಆಶಾ ಕಾರ್ಯಕರ್ತೆಯರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ. ಸಮಾಜದಲ್ಲಿ ಕೌಟುಂಬಿಕ ಸಮಸ್ಯೆಯ ಪ್ರಕರಣಗಳು ಕಂಡುಬAದಲ್ಲಿ ಅಂತಹವರಿಗೆ ಪರಿಹಾರವನ್ನು ಒದಗಿಸಿಕೊಡುವುದು ಕರ್ತವ್ಯವಾಗಿರುತ್ತದೆ ಎಂದು ವಿವರಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಅನ್ನಪೂರ್ಣ ವಸ್ತçದ ಮಾತನಾಡಿ, ಕೌಟುಂಬಿಕ ಸಮಸ್ಯೆಯ ಪ್ರಕರಣಗಳು ದಾಖಲಿಸಿದಾಗ ಅದಕ್ಕೆ ಸಂಬAಧಿಸಿದAತೆ ಸಾಕ್ಷಿಗಳು, ಕೋರ್ಟಿಗೆ ದಾಖಲಿಸಿದ ನಂತರ ವಿಫಲವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ. ಕುಟುಂಬದಲ್ಲಿ ಮಹಿಳೆಯರಿಗೆ ದೌರ್ಜನ್ಯ ಉಂಟಾಗುವ ಸಂದರ್ಭದಲ್ಲಿ ಅದನ್ನು ನಾವು ಗಮನ ಹರಿಸದೇ ಸುಮ್ಮನಿರಬಾರದು. ಅದಕ್ಕೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕಿ ಡಾ. ಹೆಚ್ ಹೆಚ್ ಕುಕುನೂರ ಮಾತನಾಡಿ, ಲಿಂಗ ತಾರತಮ್ಯವನ್ನು ಹೊಗಲಾಡಿಸಬೇಕು ಮತ್ತು ಮಹಿಳಾ ಉದ್ಯೋಗಕ್ಕೆ ಹೆಚ್ಚಿನ ಬೆಂಬಲ ನೀಡಬೇಕು, ಸದರಿ ಕಾಯ್ದೆಯ ಬಗ್ಗೆ ಗ್ರಾಮ ಪಂಚಾಯತ ಮಟ್ಟದಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು. 
ಡಿವೈಎಸ್ಪಿ ವೆಲೆಂಟಿನ್ ಡಿಸೋಜಾ ಹಾಗೂ ವಿವಿಧ ಭಾಗೀದಾರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾ ನಿರೂಪಣಾಧಿಕಾರಿ ವಿರೂಪಾಕ್ಷಗೌಡ ಹಾಗೂ ಹಿರಿಯ ಸಹಾಯಕ ನಿರ್ದೇಶಕಿ ಲಕ್ಷಿö್ಮದೇವಿ ಸ್ವಾಗತಿಸಿದರು.

Read These Next