ಜ.31 ರಂದು ಮಣ್ಕುಳಿ ಹನುಮಂತ ದೇವಾಲಯದ ನಿಧಿಕುಂಭ ಸ್ಥಾಪನೆ

Source: SOnews | By Staff Correspondent | Published on 30th January 2024, 5:17 PM | Coastal News |

ಭಟ್ಕಳ: ಜ.31 ರಂದು ಮಣ್ಕುಳಿಯ ಶ್ರೀ ಹನುಮಂತ ದೇವಾಲಯದ ನಿಧಿ ಕುಂಭ ಸ್ಥಾಪನೆಯನ್ನು ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರು ನೆರವೇರಿಸಲಿದ್ದು, ನಿಧಿಕುಂಭ ಸ್ಥಾಪನೆಯ ಧಾರ್ಮಿಕ ಕಾರ್ಯಕ್ರಮಗಳನ್ನು ವೇ.ಮೂ. ಷಡಕ್ಷರಿ ಸಾಂಬಾ ಭಟ್ಟ ಹಿರೇಗಂಗೆ ಗೋಕರ್ಣ ಇವರು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗ್ರಾಮ ದೇವತೆ ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನಕ್ಕೆ ಸಂಬAಧ ಪಟ್ಟಂತ ಅಷ್ಟದಿಕ್ಕುಗಳಲ್ಲಿರುವ ಹನುಮಂತ ದೇವಾಲಯಗಳಲ್ಲಿ ಮಣ್ಕುಳಿ ಶ್ರೀ ಹನುಮಂತ ದೇವಾಲಯವೂ ಒಂದು. ರಾಷ್ಟಿçÃಯ ಹೆದ್ದಾರಿ ಅಗಲೀಕರಣಕ್ಕೆ ತೊಂದರೆಯಾಗುವ ಕಾರಣದಿಂದ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದು ಜ.೩೧ರಂದು ನಿಧಿ ಕುಂಭ ಸ್ಥಾಪನೆ ಮಾಡಲಾಗುತ್ತಿದೆ. 

ಪುರಾತನ ಇತಿಹಾಸವಿರುವ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಹನುಮಂತ ದೇವಾಲಯ ಹಾಗೂ  ಶ್ರೀ ಲಕ್ಷಿö್ಮÃನಾರಾಯಣ ದೇವಸ್ಥಾನ ಗಾಣಿಗ ಸಮಾಜದವರು ಆರಾಧಿಸಿಕೊಂಡು ಬಂದಿರುವ ದೇವಾಲಯಗಳಾಗಿದ್ದು ಸಮಸ್ತ ಹಿಂದೂ ಸಮಾಜದವರು ನಂಬಿದ ಕ್ಷೇತ್ರವಾಗಿದೆ. ದೇವಸ್ಥಾನದಲ್ಲಿ ಪ್ರತಿ ನಿತ್ಯ ತ್ರಿಕಾಲ ಪೂಜೆ, ಮಹಾ ನವರಾತ್ರಿ, ಶ್ರಾವಣ ಮಾಸ ಹಾಗೂ ವಿಶೇಷ ಹಬ್ಬ ಹರಿದಿನಗಳಲ್ಲಿ ಉತ್ಸವಾದಿಗಳು ನಡೆಯುತ್ತವೆಯಲ್ಲದೇ ವರ್ಧಂತ್ಯುತ್ಸವವನ್ನು ಆಚರಿಸಲಾಗುತ್ತದೆ. 

ಕೇರಳದ ಪ್ರಸಿದ್ದ ಜ್ಯೋತಿಷ್ಯರನ್ನು ಕರೆಯಿಸಿ ಅಷ್ಟಮಂಗಲ ಪ್ರಶ್ನೆ ಕೇಳಲಾಗಿ, ದೇವಸ್ಥಾನದ ಹನುಮಂತನ ವಿಗ್ರಹವು ಕುಬೇರ ಸದೃಶ, ಕುಂಡಲಿ ಹನುಮಂತನಾಗಿದ್ದು, ಭಕ್ತಿ ಶ್ರೃದ್ಧೆಯಿಂದ ಆರಾಧಿಸಿ ಅರ್ಚಿಸಿದವರಿಗೆ ಅತೀ ಶೀಘ್ರದಲ್ಲಿ ಅವರ ಮನೋಭಿಲಾಷೆ ಈಡೇರುತ್ತದೆ ಮತ್ತು ಆರ್ಥಿಕ ಸಂಪತ್ತು ವೃದ್ಧಿಸುತ್ತದೆ. ಈ ದೇವಸ್ಥಾನವನ್ನು ಸ್ಥಳಾಂತರಿಸುವಾಗ ಇದರ ಜೊತೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ಸಹ ಇದರೊಂದಿಗೆ ಸ್ಥಳಾಂತರಿಸಿ ಪುನರ್ ನಿರ್ಮಾಣ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ತಿಳಿಸಿದಂತೆ ಎಲ್ಲ ಜಾನಂಗದವರನ್ನು ಒಟ್ಟುಗೂಡಿಸಿ ಸುಮಾರು ೨ ಕೋಟಿ ವೆಚ್ಚದಲ್ಲಿ ನೂತನ ದೇವಸ್ಥಾನವನ್ನು ಅತ್ಯಂತ ಶಾಸ್ತೊçÃಕ್ತವಾಗಿ ನಿರ್ಮಾಣ ಮಾಡಲು ದೇವಾಲಯದ ಸಮಿತಿ ತೀರ್ಮಾನಿಸಿದೆ. 

ಶ್ರೀ ಹನುಮಂತ ದೇವಸ್ಥಾನ ಮತ್ತು ಶ್ರೀ ಲಕ್ಷ್ಮೀನಾರಾಯಣ ದೇವಾಲಯವು ಶಿಲಾಮಯವಾದ, ತಾಮ್ರದ ಹೊದಿಕೆಯ ಗರ್ಭಗುಡಿ ಹಾಗೂ ಮೇಲಿನ ಪ್ರಾಕಾರ, ಎದುರುಗಡೆಯ ಸಭಾಂಗಣ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ನೋಡುವ ಹಾಗೆ ಸಿಮೆಂಟಿನಿAದ ನಿರ್ಮಾಣ ಮಾಡುವ ಹನುಮಂತ ದೇವರ ಮೂರ್ತಿ ಇತ್ಯಾದಿ  ನಿರ್ಮಾಣ ಕಾರ್ಯದಲ್ಲಿ ಸೇರಿದೆ ಎನ್ನಲಾಗಿದೆ. 


 

Read These Next