ಭಟ್ಕಳ: ನ್ಯೂಶಮ್ಸ್ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿಗಾಗಿ ವಿನೂತನ ಕಾರ್ಯ

Source: SOnews | By Staff Correspondent | Published on 5th June 2023, 8:10 PM | Coastal News |

ಭಟ್ಕಳ: ಹೆಬಳೆ ಪಂಚಾಯತ್ ವ್ಯಾಪ್ತಿಯ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು.

ಶಾಲಾ ಪರಿಸರದಲ್ಲಿರುವ ಪ್ರಮುಖ ಐದು ಮಸೀದಿಗಳಿಗೆ ತೆರಳಿ ನಮಾಝ್ ಮಾಡಲು ಬಂದ ಜನರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ ನಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಸಮತೂಲನವನ್ನು ಕಾಯ್ದುಕೊಂಡು ಹೋಗಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಶಾಲಾ ವ್ಯಾಪ್ತಿಗೆ ಒಳಪಡುವ ಮುನೀರಿ ಮಸೀದಿ, ಫಿರ್ದೋಸ್ ಮಸೀದಿ ಹಾಗೂ ಫಾತಿಮಾ ಮಸೀದಿಯ ಸುಮಾರು ೬೦ ಜನರಿಗೆ ವಿವಿಧ ಸಸಿಗಳನ್ನು ವಿತರಿಸಿ ಇದನ್ನು ಮರವಾಗಿ ಬೆಳೆಸುವಲ್ಲಿ ಸಹಕರಿಸಬೇಕೆಂದು ಕೋರಿಕೊಂಡರು.

ಮುನಿರಿ ಮಸೀದಿಯಲ್ಲಿ ಗಿತ್ರೀಫ್ ರಿದಾ ಮಾನ್ವಿ, ಫಾತಿಮಾ ಮಸೀದಿಯಲ್ಲಿ ಆಹ್ಮದ್ ದಾಮ್ದಾ ಹಾಗೂ ಫೀರ‍್ದೋಸ್ ಮಸೀದಿಯಲ್ಲಿ ಜಯ್ಯಾನ್ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಲಿಯಾಖತ್ ಅಲಿ, ಶಿಕ್ಷಕರಾದ ಸುಭಾನ್ ನದ್ವಿ, ಅಬ್ದುಲ್ಲಾ ಖಲಿಫಾ, ಮಂಜುನಾಥ್ ಹೆಬ್ಬಾರ್, ಎಂ.ಆರ್.ಮಾನ್ವಿ ಉಪಸ್ತಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...