ಮುಂದಿನ ಚುನಾವಣೆಯಲ್ಲಿ ಶಾಬಂದ್ರಿಯನ್ನು ಗೆಲ್ಲಿಸುತ್ತೇವೆ: ನೂರ್ ಅಹ್ಮದ್

Source: S O News Service | By I.G. Bhatkali | Published on 20th September 2020, 12:01 AM | Coastal News |

 ಭಟ್ಕಳ: ಹಿಂದೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇನಾಯಿತುಲ್ಲಾ ಶಾಬಂದ್ರಿಯವರು ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತರಾಗಿ ಹೋರಾಡಿ ಶಾಬಂದ್ರಿಯವರನ್ನು ಗೆಲ್ಲಿಸುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಮ್.ನೂರ್ ಅಹ್ಮದ್ ಹೇಳಿದರು.

ಅವರು ಶನಿವಾರ ಸಂಜೆ ಭಟ್ಕಳದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಿ ಲಕ್ಷಾಂತರ ರೈತರಿಗೆ ನೆರವಾಗಿದ್ದಾರೆ. ಇತರೇ ಹಿಂದುಳಿದ ವರ್ಗದವರಿಗೆ ಗರಿಷ್ಠ

 ನಪರವಾಗಿ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿಯವರನ್ನು ವಾಮಮಾರ್ಗದಿಂದ ಅಧಿಕಾರದಿಂದ ಕೆಳಗಿಳಿಸಿರುವುದನ್ನು ಜನತೆ ನೋಡಿದೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್‍ನ್ನು ಬಿಜೆಪಿಯ `ಬಿ' ಟೀಮ್ ಎಂದು ಬಿಂಬಿಸಿರುವದು ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಈಗ ಕಾಲ ಬದಲಾಗಿದ್ದು, ಪಕ್ಷದ ಕಾರ್ಯಕರ್ತರು ಒಟ್ಟಾಗಿ ಪಕ್ಷದ ಏಳಿಗೆಗೆ ಶ್ರಮಿಸಲಿದ್ದಾರೆ.

ಮೀಸಲಾತಿಯನ್ನು ಒದಗಿಸಲು ದೇವೇಗೌಡರು ಶ್ರಮಿಸಿದ್ದು ಎಲ್ಲರಿಗೂ ನೆನಪಿದೆ, ಇಂದಿನ ಕಾಂಗ್ರೆಸ್ ಪಕ್ಷದಲ್ಲಿ ಇರುವ ಬಹುತೇಕ ಮುಖಂಡರು ಜೆಡಿಎಸ್ ಪಕ್ಷದಿಂದಲೇ ಬೆಳೆದು ನಾಯಕರಾಗಿದ್ದಾರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಇದರಿಂದ ಹೊರತಾಗಿಲ್ಲ ಎಂದರು. ಜನಪರವಾಗಿ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿಯವರನ್ನು ವಾಮಮಾರ್ಗದಿಂದ ಅಧಿಕಾರದಿಂದ ಕೆಳಗಿಳಿಸಿರುವುದನ್ನು ಜನತೆ ನೋಡಿದೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್‍ನ್ನು ಬಿಜೆಪಿಯ `ಬಿ' ಟೀಮ್ ಎಂದು ಬಿಂಬಿಸಿರುವದು ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಈಗ ಕಾಲ ಬದಲಾಗಿದ್ದು, ಪಕ್ಷದ ಕಾರ್ಯಕರ್ತರು ಒಟ್ಟಾಗಿ ಪಕ್ಷದ ಏಳಿಗೆಗೆ ಶ್ರಮಿಸಲಿದ್ದಾರೆ ಎಂದು ವಿವರಿಸಿದರು. ಜೆಡಿಎಸ್ ಭಟ್ಕಳ ಘಟಕದ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ, ಕೊರೊನಾ ಕಾಲದಲ್ಲಿ ಜೆಡಿಎಸ್ ಪಕ್ಷ ಜನಸಾಮಾನ್ಯರ ಪರವಾಗಿ ಕೆಲಸ ಮಾಡಿದೆ. ಕೊರೊನಾ ಪೀಡಿತರಾಗಿ ನಿಧನರಾದವರ ಶವವನ್ನು, ಅವರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲು ಜಿಲ್ಲಾಡಳಿತ ಒಪ್ಪಿದ್ದು, ಇದು ಜೆಡಿಎಸ್ ಹೋರಾಟ ಮತ್ತು ನಿರಂತರ ಪ್ರಯತ್ನಕ್ಕೆ ಸಿಕ್ಕ ಫಲವಾಗಿದೆ ಎಂದು ವಿವರಿಸಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪಾಂಡು ನಾಯ್ಕ, ಕೃಷ್ಣಾನಂದ ಪೈ, ಜೈನುಲ್ಲಾಬಿದ್ದೀನ್, ಗಣೇಶ ಹಳ್ಳೇರ, ಗೋವಿಂದ ದೇವಡಿಗ ಮೊದಲಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...