ಬ್ರಿಜ್‌ಭೂಷಣ ಸಿಂಗ್‌ರನು ತಕ್ಷಣ ಬಂಧಿಸಿ; 1,150ಕ್ಕೂ ಹೆಚ್ಚು ಗಣ್ಯರ ಆಗ್ರಹ

Source: Vb | By I.G. Bhatkali | Published on 30th May 2023, 11:35 AM | National News |

ಹೊಸದಿಲ್ಲಿ: ರವಿವಾರ ದಿಲ್ಲಿ ಪೊಲೀಸರು ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ನಡೆಸಿದ ದೌರ್ಜನ್ಯವನ್ನು 1,150ಕ್ಕೂ ಅಧಿಕ ಮಾನವ ಹಕ್ಕುಗಳ ಕಾರ್ಯಕರ್ತರು, ಮಾಜಿ ಸರಕಾರಿ ಅಧಿಕಾರಿಗಳು, ವಕೀಲರು, ಲೇಖಕರು ಮತ್ತು ಇತರರನ್ನೊಳಗೊಂಡ ಗುಂಪೊಂದು ಖಂಡಿಸಿದೆ.

ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮುಖ್ಯಸ್ಥ ಬ್ರಿಜ್ ಭೂಷಣ ಶರಣ್ ಸಿಂಗ್ ಅವರನ್ನು ತಕ್ಷಣ ಬಂಧಿಸುವಂತೆ ಮತ್ತು ಪೊಲೀಸರ ವಶದಲ್ಲಿರುವ ಎಲ್ಲ ಕುಸ್ತಿಪಟುಗಳು ಮತ್ತು ಕಾರ್ಯಕರ್ತರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಅದು ಹೇಳಿಕೆಯಲ್ಲಿ ಆಗ್ರಹಿಸಿದೆ.

ಸಂಸದ ಜವಾಹರ ಸರ್ಕಾರ್, ಮಾಜಿ ಸಂಸದರಾದ ಹನ್ನನ್ ಮುಲ್ಲಾ ಮತ್ತು ಸುಭಾಷಿಣಿ ಅಲಿ, ಮಾಜಿ ಹಿರಿಯ ಸರಕಾರಿ ಅಧಿಕಾರಿಗಳಾದ ಅದಿತಿ ಮೆಸ್ತಾ ಮತ್ತು ಅಭಿಜಿತ್‌ ಸೇನಗುಪ್ತಾ, ವಕೀಲರಾದ ಇಂದಿರಾ ಜೈಸಿಂಗ್, ವೃಂದಾ ಗೋವರ್ ಮತ್ತು ಪ್ರಶಾಂತ್ ಭೂಷಣ್, ಕಲಾವಿದರಾದ ಮಾಯಾ ರಾವ್, ಮಲ್ಲಿಕಾ ಸಾರಾಭಾಯಿ ಮತ್ತು ಶೀಬಾ ಚಚ್ಚಿ, ಶಿಕ್ಷಣತಜ್ಞರಾದ ಮೇರಿ ಜಾನ್, ಜಯತಿ ಘೋಷ್, ಪ್ರಭಾತ್ ಪಟ್ನಾಯಕ್ ಮತ್ತು ಚಿತ್ರಾ ಜೋಶಿ, ಮಾನವ ಹಕ್ಕುಗಳ ಕಾರ್ಯಕರ್ತರಾದ ಅನ್ನಿ ರಾಜಾ,ಶಬನಮ್ ಹಾಶಿ, ಮರಿಯಂ ಧಾವಳೆ,ಮೀರಾ ಸಂಘಮಿತ್ರ, ಜಗತಿ ಸಂಗ್ವಾನ್, ಅರುಂಧತಿ ಧುರು ಮತ್ತು ಕವಿತಾ ಶ್ರೀವಾಸ್ತವ ಹೇಳಿಕೆಗೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

'ಕಳೆದೊಂದು ದಶಕದಿಂದಲೂ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪವನ್ನು ಹೊತ್ತಿರುವ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್‌ ಭೂಷಣ ಶರಣ್ ಸಿಂಗ್ ವಿರುದ್ಧ ನಮ್ಮ ಕುಸ್ತಿಪಟುಗಳ ಹೋರಾಟ ಮತ್ತು ಅವರಿಗೆ ಪ್ರಬಲ ತಳಮಟ್ಟದ ಬೆಂಬಲವನ್ನು ದಮನಿಸಲು ಸರಕಾರ ಮತ್ತು ಪೊಲೀಸರು ಇಂದು ನಡೆಸಿದ ಹಿಂಸಾಚಾರವನ್ನು ಕಂಡು ನಾವು ಸಂಪೂರ್ಣವಾಗಿ ಭಯಭೀತರಾಗಿದ್ದೇವೆ. ಕುಸ್ತಿಪಟುಗಳು 2023,ಜ.18ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಇಂದು (ಮೇ 28) ನೂತನ ಸಂಸತ್ ಕಟ್ಟಡದ ಹೊರಗೆ ಮಹಿಳಾ ಸಮ್ಮಾನ್ ಮಹಪಂಚಾಯತ್ ನಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಮಹಿಳಾ ಸಂಘಟನೆಗಳು, ಕಾರ್ಯಕರ್ತರು ಮತ್ತು ಇತರ ಎಲ್ಲ ನಾಗರಿಕ ಸಮಾಜದ ಸಂಸ್ಥೆಗಳಿಗೆ ಕರೆ ನೀಡಿದ್ದರು. ದಿಲ್ಲಿ ಮತ್ತು ಸಮೀಪದ ರಾಜ್ಯಗಳ ಸಾವಿರಾರು ಮಹಿಳೆಯರು ಈ ಕರೆಗೆ ಸ್ಪಂದಿಸಿದ್ದರು. ಭಾರತೀಯ ಮಹಿಳೆಯರ ಸಾಮೂಹಿಕ ಶಕ್ತಿಗೆ ಹೆದರಿದ ಪೊಲೀಸರು ಪೂರ್ವಭಾವಿಯಾಗಿ ಎಲ್ಲ ಗಡಿ ರಸ್ತೆಗಳನ್ನು ನಿರ್ಬಂಧಿಸಿದ್ದರು,ಸಮೀಪದ ಮೆಟ್ರೋ ನಿಲ್ದಾಣಗಳನ್ನು ಮುಚ್ಚಿಸಿದ್ದರು ಮತ್ತು ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದರು. ಭಾರತದ ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಂತಿರುವುದನ್ನು ಕಂಡು ಈ ಪುರುಷ ಪ್ರಧಾನ ಸರಕಾರವು ಎಷ್ಟೊಂದು ಹೆದರಿಕೊಂಡಿದೆ ಎನ್ನುವುದನ್ನು ಇದು ತೋರಿಸುತ್ತಿದೆ. ಈ ದಾಳಿಯ ಹೊರತಾಗಿಯೂ ಒಗ್ಗಟ್ಟಿನ ಮಹಾಪೂರವನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಕಾರ್ಯಕರ್ತರು ಮತ್ತು ಕಾಳಜಿಬದ್ಧ ನಾಗರಿಕರು ಪ್ರತಿಭಟನಾ ಸ್ಥಳವನ್ನು ತಲುಪಲು ಪ್ರಯತ್ನಿಸಿದ್ದರು ಎಂದು ಹೇಳಿಕೆಯು ತಿಳಿಸಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...