ಪರಸ್ಪರ ಹೊದಾಣಿಕೆಯಿಂದ ಬಾಳುವುದೇ ಮಾನವ ಧರ್ಮ-ದೀಪಕ ಶೆಣೈ

Source: sonews | By Staff Correspondent | Published on 21st August 2019, 12:17 AM | Coastal News |

ಕಾರವಾರ: ಭಾರತ ದೇಶವು ವೈವಿದ್ಯತೆಯಿಂದ ಕೂಡಿದ ದೇಶ. ಇಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಸಹಕರಿಸುತ್ತಾ ಸಹಾಯ ಹಸ್ತ ನೀಡುತ್ತಾ ಜೀವನ ನಡೆಸುತ್ತಿರುವುದು ಪ್ರಶಂಸನೀಯ. ಜೀವನದಲ್ಲಿ ಒಳ್ಳೆಯ ಭಾವನೆಗಳನ್ನು ಸದಾ ಬೆಳೆಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಸ್ವಚ್ಛ ಮನಸ್ಸಿನಿಂದ ಬಾಳಬೇಕು. ಅದೇ ಮಾನವನ ನಿಜವಾದ ಧರ್ಮ ಎಂದು ಕಡಲವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ದೀಪಕ ಕುಮಾರ ಶೆಣೈ ತಿಳಿಸಿದರು.

ಅವರು ಆಝಾದ್ ಯುಥ್ ಕ್ಲಬ್ ಕಾರವಾರ ನೆಹರೂ ಯುವ ಕೇಂದ್ರ ಕಾರವಾರ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ ಮತ್ತು ಲಯನ್ಸ್ ಕ್ಲಬ್ ಕಾರವಾರರವರು ಸಂಯುಕ್ತವಾಗಿ ‘ರಾಷ್ಟ್ರೀಯ ಸದ್ಭಾವನಾ ದಿನಾಚರಣೆ’ಯ ನಿಮಿತ್ತ ಕಾರವಾರದ ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವಿ.ಎಮ್.ಹೆಗಡೆ  ಮಾತನಾಡಿ ಭಾರತವು ಹಲವು ಜಾತಿ ಧರ್ಮಗಳ ದೇಶವಾದರೂ ಏಕತೆಯನ್ನು ಸಾಧಿಸುವಲ್ಲಿ ಮಂಚೂಣಿಯಲ್ಲಿದೆ. ಅದನ್ನೇ ನಾವು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ ಹರಪನಹಳ್ಳಿ ಮಾತನಾಡಿ ನಮ್ಮ ದೇಶವು ವೈವಿದ್ಯಮಯ ಸಂಸ್ಕøತಿಯನ್ನು ಹೊಂದಿದೆ. ಇದೊಂದು ವಿಶೇಷತೆಯನ್ನು ಹೊಂದಿದ ದೇಶವಾಗಿದೆ. ಬೇರೆ ಬೇರೆ ಭಾಷೆ ಹಾಗೂ ಬೇರೆ ಬೇರೆ ಸಮುದಾಯದ ಜನರನ್ನು ನಾವು ಕಾಣುತ್ತೇವೆ. ನಮ್ಮೆಲ್ಲರಲ್ಲಿ ಒಗ್ಗಟ್ಟು ಇದೆ. ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕೋಣ ಎಂದು ಹೇಳಿದರು. ವೇದಿಕೆಯಲ್ಲಿ ರಾಷ್ಟ್ರ ಮತ್ತು ರಾಜ್ಯೋತ್ಸ ಪ್ರಶÀಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್, ಲಯನ್ಸ್ ಕ್ಲಬ್ ಕಾರವಾರದ ಅಧ್ಯಕ್ಷ ಲ.ಸಾಧಿಕ್ ಖಾನ್, ಕಾರ್ಯದರ್ಶಿ ಲ.ವಿನಯ ನಾಯ್ಕ, ಹಿರಿಯ ಸದಸ್ಯ ಲ.ಕೆ.ಎಸ್.ಕಿನ್ನರ್‍ಕರ್, ಶಾಲೆಯ ಮೇಲ್ವಿಚಾರಕಿ ಸಿಸ್ಟರ್ ಎಲಿಜಾ, ನೆಹರೂ ಯುವ ಕೇಂದ್ರದ ಲೆಕ್ಕಾಧಿಕಾರಿ ಮೀರಾ ನಾಯ್ಕ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಸದ್ಭಾವನೆಗೆ ಸಂಬಂಧಿಸಿದ್ದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಹಾಗೂ ತ್ರೋಬಾಲ್, ವಾಲಿಬಾಲ್ ಫುಟ್‍ಬಾಲ್, ನೆಟ್‍ಗಳು  ಮತ್ತು ನೆಹರೂ ಯುವ ಕೇಂದ್ರದಿಂದ ಕೇರಂ ಮತ್ತಿತರ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ಈ ಕಾರ್ಯಕ್ರಮವನ್ನು ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಸಂಘಟಿಸಿದ್ದರು. ಪ್ರಾರಂಭದಲ್ಲಿ ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಶೇಖ್ ಪ್ರಾಸ್ತವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್ ವಂದಿಸಿದರು. ಮಕ್ಕಳಿಗೆ ಸಿಹಿ ಮತ್ತು ತಿಂಡಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ನೆಹರೂ ಯುವ ಕೇಂದ್ರದ ಪ್ರೊಗ್ರಾಂ ಕೋರ್ಡಿನೇಟರ್ ವಿಪಿನ್ ಕುಮಾರ್, ಮೊಹಮ್ಮದ್ ಅಸಿಫ್ ಶೇಖ್, ಪ್ರಕಾಶ ಭೋವಿ, ಪರಸಪ್ಪ ಮತ್ತಿತರರು ಉಪಸ್ಥಿತರಿದ್ದರು
 

Read These Next