ತ್ಯಾಜ್ಯ ವಿಲೆವಾರಿ ಘಟಕವಾಗಿ ಮಾರ್ಪಟ್ಟಿರುವ ಭಟ್ಕಳದ ಐತಿಹಾಸಿಕ ಶರಾಬಿ ನದಿ

Source: S O News | By Staff Correspondent | Published on 8th June 2023, 10:22 PM | Coastal News |

ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಮಾಂಕಾಳ್ ವೈದ್ಯ ಇತ್ತ ಗಮನ ಹರಿಸುವರೇ?

                                                                                                                     ಎಂ.ಆರ್.ಮಾನ್ವಿ
ಭಟ್ಕಳ: ಒಂದು ಸಾವಿರ ವರ್ಷರಗಳ ಹಿಂದೆ ಅರಬ್ ವ್ಯಾಪಾರಿಗಳನ್ನು ಆಕರ್ಷಿಸಿದ್ದ ಮತ್ತು ಅವರೊಂದಿಗೆ ದೀರ್ಘಕಾಲದ ವ್ಯಾಪಾರ ಮತ್ತು ಸಾಮಾಜಿಕ-ಧಾರ್ಮಿಕ ಸಂರ್ಪಕ್ಕೆ ಸೇತುವೆಯಾಗಿದ್ದ ಶರಾಬಿ ನದಿ ಅವಸಾನದ ಅಂಚಿಗೆ ಬಂದು ನಿಂತುಕೊಂನಿಂತುಕೊಂಡಿದೆ.

ಭಟ್ಕಳ ಪುರಸಭೆಯ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ಇಂದು ಅದು ಕೊಳಚೆ ಮತ್ತು ತ್ಯಾಜ್ಯ ವಿಲೆವಾರಿ ಘಟಕವಾಗಿ ಮಾರ್ಪಟ್ಟಿದೆ. 

ರಾಣಿ ಚೆನ್ನಭೈರಾದೇವಿ, ಹೈದರ್ ಅಲಿ, ಟಿಪ್ಪು ಸುಲ್ತಾನ್ ನಡೆದಾಡಿಕೊಂಡಿದ್ದ ಭಟ್ಕಳದ ಪ್ರಾಚೀನ ಬೀದಿ ಗೌಸೀಯಾ ಸ್ಟ್ರೀಟ್ ನಿವಾಸಿಗಳು ಈಗ ಕೊಳೆತು ನಾರುವ ಉಸಿರು ಗಟ್ಟುವ ವಾತವರಣದಲ್ಲಿ ಆತಂಕದ ಬದುಕು ನಡೆಸುವಂತಾಗಿದೆ. 

ಭಟ್ಕಳ ಪುರಸಭೆ ವ್ಯಾಪ್ತಿಯ ಗೌಸಿಯಾ ಬೀದಿಯಲ್ಲಿ ಹರಿಯುವ ಶರಾಬಿ ನದಿ ಸಮೀಪದ ಪಂಪಿಂಗ್ ಸ್ಟೇಷನ್‌ನಿಂದ ಪದೇ ಪದೇ ಚರಂಡಿ ನೀರು ಹರಿಯಬಿಡುತ್ತಿದ್ದು ನದಿ ಈಗ ಚರಂಡಿಯಾಗಿ ಮರ‍್ಪಟ್ಟಿದೆ. ನದಿಯಿಂದ ದರ‍್ವಾಸನೆ ಬರುತ್ತಿರುವುದರಿಂದ ಈ ಭಾಗದ ಜನರು ಕಂಗಾಲಾಗಿದ್ದಾರೆ. ಮುಂಡಳ್ಳಿ ಕಡೆಗೆ ಇದೇ ಮರ‍್ಗವಾಗಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

ಒಂದು ಕಾಲದಲ್ಲಿ ಅರಬರು ತಮ್ಮ ಹಡಗುಗಳನ್ನು ಅರಬ್ಬಿ ಸಮುದ್ರದಲ್ಲಿ ಲಂಗರು ಹಾಕಿ  ಭಟ್ಕಳದ ಬಂದರ್ ನಿಂದ  ದೋಣಿಗಳಲ್ಲಿ ಶರಾಬಿ ನದಿಯ ಮೂಲಕ ಗೌಸಿಯಾ ಸ್ಟ್ರೀಟ್ ಗೆ ಬಂದು ಅಲ್ಲಿಂದ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು ಎಂಬುದು ಇತಿಹಾಸ. ಅರಬ್ ಮತ್ತು ಭಟ್ಕಳದ ಜನರ ನಡುವೆ ಸಂಬಂಧಗಳನ್ನು ಬೆಸೆಯುವಲ್ಲಿ ಸಾಕ್ಷಿಯಾಗಿದ್ದ ಶರಾಬಿ ನದಿ ಈಗ ತನ್ನತನವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಕಾರಣ ಯಾರು? ಎಂಬ ಪ್ರಶ್ನೆಗೆ ಬಹುಷ ಇಡಿ ವ್ಯವಸ್ಥೆಯೇ ಇದಕ್ಕೆ ಕಾರಣ ಆಗಿರಬಹುದು ಎಂಬುದು ನನ್ನ ಉತ್ತರ. 

ಮಳೆಗಾಲ ಹೊರತು ಪಡಿಸಿ ಎಲ್ಲ ಋತುಗಳಲ್ಲಿ ಕಸ, ಕೊಳಕು, ಹೂಳು, ಮಲೀನ ತ್ಯಾಜ್ಯಗಳಿಂದ ತುಂಬಿಕೊಳ್ಳುವ ಈ ನದಿ ರ‍್ಕಾರ, ಸ್ಥಳಿಯ ಆಡಳಿತ ಮತ್ತು ಸರ‍್ವಜನಿಕರಿಗೆ ದೊಡ್ಡ ಸವಲಾಗಿ ಪರಿಣಮಿಸುತ್ತಿದೆ. ಪುಣ್ಯಕ್ಕೆ ಎಂಬಂತೆ ಭಟ್ಕಳದ ಶಾಸಕ ಮಾಂಕಾಳ್ ವೈದ್ಯರಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಮಂತ್ರಿಗಿರಿ ದಕ್ಕಿದೆ. ಅವಸಾನದ ಅಂಚಿನಲ್ಲಿರುವ ಇಂತಹ ನದಿಗಳು, ಬಂದರು ಪ್ರದೇಶಗಳನ್ನು ಅಭವೃದ್ಧಿ ಪಡಿಸುವುದು ಬಹುಶ ಇವರ ಇಲಾಖೆಗೆ ಒಳಪಡುತ್ತದೆ. ಒಂದು ವೇಳೆ ಇದು ಅವರ ಇಲಾಖೆಗೆ ಒಳಪಡದೆ ಇದ್ದರೂ ಕೂಡ ಸಚಿವರು ಎಂಬ ನೆಲೆಯಲ್ಲಿ ಸರ‍್ವಜನಿಕ ಅತಿ ದೊಡ್ಡ ಸಮಸ್ಯೆಯನ್ನು ನಿವಾರಿಸುವುದು ರ‍್ವ ಶಾಸಕನಾಗಿ, ಸಚಿವನಾಗಿ ಅಧಿಕಾರ ಹೊಂದಿರುವ ಮಾಂಕಾಳ್ ವೈದ್ಯರ ಮೇಲೆ ಕಡ್ಡಾಯವಾಗುತ್ತದೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಅವರಿಗೆ ಬಿಟ್ಟ ವಿಷಯ. 

ನದಿ ದಡದಲ್ಲಿ ಕಸದ ರಾಶಿ, ಮಲೀನ ತ್ಯಾಜ್ಯ ಬಂದು ಬಿದ್ದಿರುವುದು ಸ್ಥಳೀಯ ನಿವಾಸಿಗಳು ಹಾಗೂ ಇಲ್ಲಿನ ಮುಖಂಡರ ನಿದ್ದೆಗೆಡಿಸಿದೆ. ಬೇರೆ ಬೇರೆ ಪ್ರದೇಶದ ಜನರು ತಮ್ಮ ಕಸವನ್ನು ನಗರಸಭೆ ವಾಹನಗಳ ಮೂಲಕ ಕಸ ವಿಲೇವಾರಿ ಮಾಡುವ ಬದಲು ನದಿಗೆ ಎಸೆಯುತ್ತಿದ್ದಾರೆ ಎಂಬುದು ಅವರ ಆರೋಪವಾಗಿದೆ. ಶರಾಬಿ ನದಿಯು ವಿವಿಧ ಪ್ರದೇಶಗಳಲ್ಲಿ ಹರಿಯುತ್ತದೆ ಮತ್ತು ನದಿಗೆ ಬಿಡುವ ಕೊಳಚೆಯಿಂದ ಹೆಚ್ಚಿನ ಪ್ರಮಾಣದ ಹೂಳು ತುಂಬಿದೆ. ನದಿಗೆ ಎಸೆಯುವ ಯಾವುದೇ ಕಸವು ನೀರಿನ ಮಟ್ಟ ಅಸಮವಾಗಿರುವ ಗೌಸಿಯಾ ಸ್ಟ್ರೀಟ್ ಸೇತುವೆಯಲ್ಲಿ ಸಂಗ್ರಹವಾಗುತ್ತದೆ ಎಂದು ಸ್ಥಳೀಯರು ದೂರುತ್ತಾರೆ. 

ಪಂಪಿಂಗ್ ಸ್ಟೇಷನ್‌ನಿಂದ ಕೊಳಕು ನೀರನ್ನು ಪದೇ ಪದೇ ಹೊರಹಾಕುವುದರಿಂದ ನದಿಯು ಹೆಚ್ಚು ಹೂಳು ತುಂಬಿದ್ದು, ಶುದ್ಧ ಸಮುದ್ರದ ನೀರು ಈ ಪ್ರದೇಶವನ್ನು ತಲುಪುವುದನ್ನು ತಡೆಯುತ್ತದೆ. ಹೆಚ್ಚಿನ ಮಟ್ಟದ ಮಣ್ಣು ಮತ್ತು ಹೂಳು ನದಿಯ ಮಟ್ಟದಲ್ಲಿ ಗಮನಾರ್ಹ ಕುಸಿತವನ್ನು ಉಂಟುಮಾಡಿದೆ, ಈ ಪ್ರದೇಶಗಳಿಗೆ ಶುದ್ಧ ಸಮುದ್ರದ ನೀರಿನ ಹರಿವಿಗೆ ಅಡ್ಡಿಯಾಗಿದೆ.

ಶರಾಬಿನದಿಯಿಂದಾಗಿ ಸ್ಥಳೀಯರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೊಳಕು ನೀರಿನಿಂದ ರ‍್ಮ ರೋಗಗಳು ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ, ನದಿ ಪರಿಸರ ವ್ಯವಸ್ಥೆಗೆ ಕೊಳಚೆನೀರು ಮಾಡುತ್ತಿರುವ ಹಾನಿಯ ಬಗ್ಗೆಯೂ ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ ಮತ್ತು ಬಂದರು ಸಚಿವರಾಗಿರುವ ಭಟ್ಕಳ ಶಾಸಕ ಮಾಂಕಾಳ್ ವೈದ್ಯ ಅವರು ನದಿಯಲ್ಲಿನ ಮಣ್ಣು, ಹೂಳು ತೆಗೆದು ಆಳಗೊಳಿಸುವತ್ತ ಗಮನಹರಿಸಬೇಕು, ನದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆಗೆ ಮುಂದಾಗಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ. 

ನದಿಯ ದಡದಲ್ಲಿ ರಾಶಿ ಬಿದ್ದಿರುವ ಕಸದ ಬಗ್ಗೆ ಇಲ್ಲಿನ ಪಾಲಿಕೆ ಸದಸ್ಯ ಫಯಾಜ್ ಮುಲ್ಲಾ, ನದಿಯಿಂದ ಕಸ ತೆಗೆಯುವ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆ ಮೇಲಿದೆಯೇ ಹೊರತು ನಗರಸಭೆಯದ್ದಲ್ಲ. ಈ ಹಿಂದೆ ಹೆಚ್ಚಿನ ಕಸ ಇರಲಿಲ್ಲ, ಆದರೆ ಈ ಬಾರಿ ನದಿ ದಡದಲ್ಲಿ ಗಮನರ‍್ಹ ರಾಶಿ ತ್ಯಾಜ್ಯ ಬಿದ್ದುಕೊಂಡಿದೆ. ಈ ಕುರಿತು ನೀರಾವರಿ ಇಲಾಖೆಗೆ  ಮನವಿಪತ್ರ ಸಲ್ಲಿಸಲಾಗಿದೆ. ಸಚಿವ ಮಾಂಕಾಳ್ ವೈದ್ಯ ಅವರನ್ನು ಸಂರ‍್ಕಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮತ್ತೊಬ್ಬ ಸ್ಥಳೀಯ ಕೌನ್ಸಿಲರ್ ಖೈಸರ್ ಮೊಹ್ತೆಶಮ್ ಅವರು,  ಪಂಪಿಂಗ್ ಸ್ಟೇಷನ್ ನರ‍್ವಾಹಣೆ ಸರಿಯಾಗಬೇಕು, ಮೋಟಾರುಗಳನ್ನು ದುರಸ್ತಿ ಮಾಡಿಸಿ ಕೊಳಚೆ ನೀರು ಸರಿಯಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಭಟ್ಕಳ ಪರಿಸರಕ್ಕೆ ಶರಾಬಿ ನದಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಇದು ಸ್ಥಳೀಯ ನಿವಾಸಿಗಳಿಗೆ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಅದರ ಉದ್ದೇಶಿತ ಕಾರ್ಯವನ್ನು ಪುನಃಸ್ಥಾಪಿಸಲು ನದಿಯನ್ನು ಸ್ವಚ್ಛಗೊಳಿಸುವುದು ಅತಿಅಗತ್ಯ ಎಂದು ಅವರು ಒತ್ತಿ ಹೇಳಿದರು. 

Read These Next