ಭಾರೀ ಮಳೆಗೆ ಉತ್ತರ ಕನ್ನಡ, ದ.ಕ., ಉಡುಪಿ ತತ್ತರ; ಉಡುಪಿಯಲ್ಲಿ ಇಬ್ಬರು ಬಲಿ, ಓರ್ವ ನಾಪತ್ತೆ; ಕರಾವಳಿಗೆ ರೆಡ್ ಅಲರ್ಟ್‌ ಘೋಷಣೆ

Source: SO/VB/KM | By I.G. Bhatkali | Published on 25th July 2023, 12:14 PM | Coastal News | State News |

ಭಟ್ಕಳ: ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮೂರು ಜಿಲ್ಲೆಗಳಲ್ಲಿ ರೆಡ್‌ ಸಂಬಂಧಿಸಿದ ದುರಂತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದಾನೆ. 50ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಕಳೆದ ಎರಡು ದಿನಗಳಿಂದ ನೆರೆ ಹಾವಳಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಮಳೆ ಆರ್ಭಟ ಮುಂದುವರಿದಿದೆ. ಭಾಗಮಂಡಲ, ತಲಕಾವೇರಿ ಸಹಿತ ವಿವಿಧೆಡೆ ದಾಖಲೆಯ ಮಳೆಯಾಗಿದ್ದು, ತತ್ತರಿಸಿವೆ. ನೆರೆಹಾವಳಿಯಿಂದ

ದ.ಕ.ಜಿಲ್ಲೆಯಲ್ಲಿ ಸೋಮವಾರ ಭಾರೀ ಗಾಳಿ ಮಳೆಯಾಗಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿವೆ.

ಎಡೆಬಿಡದೆ ಸತತವಾಗಿ ಸುರಿದ ಭಾರೀ ಮಳೆಗೆ ಜನತೆ ನಲುಗಿದ್ದು, ಕಡಲ್ಗೊಂತ ಭೀತಿಯ ಪ್ರದೇಶದಲ್ಲಿ ಜನರು ಆತಂಕಕ್ಕೀಡಾಗಿದ್ದಾರೆ. ಭಾರೀ ಗಾಳಿ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ದ.ಕ. ಜಿಲ್ಲೆಯಲ್ಲಿ ಜು.25ರಂದು ಭಾರೀ ಮಳೆಯ (200 ಮಿ.ಮೀ. ಗೂ ಅಧಿಕ) ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿವೆ.

ಹಾಗಾಗಿ ಮೀನುಗಾರರ ಸಹಿತ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಜು.26, 27ರಂದು ಜಿಲ್ಲೆಗೆ ಭಾರಿ ಮಳೆಯ ಆರೇಂಜ್ ಅಲರ್ಟ್ ನೀಡಲಾಗಿದೆ. ಜು.28,29ರಂದು ಹಳದಿ ಅಲರ್ಟ್ ನೀಡಲಾಗಿದೆ.ಆ ಬಳಿಕ ಮಳೆ ಇಳಿಮುಖವಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ.

ಧಾರಾಕಾರ ಮಳೆಗೆ ತತ್ತರಿಸಿದ ಉಡುಪಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿ ರುವ ಮಳೆ ಇಂದೂ ತನ್ನ ಪ್ರತಾಪ ಮುಂದುವರಿಸಿದೆ. ಹವಾಮಾನ ಇಲಾಖೆ ಮಂಗಳವಾರ ಮುಂಜಾನೆಯವರೆಗೆ ಕರಾವಳಿಯಲ್ಲಿರೆಡ್ ಅಲರ್ಟ್ (204.4ಮಿ.ಮೀ ಅಧಿಕ ಮಳೆ) ಘೋಷಿಸಿದ್ದರೆ, ನಂತರ ಎರಡು ದಿನಗಳಿಗೆ ಆರೆಂಜ್ ಅಲರ್ಟ್ (115.6ರಿಂದ 204.4ಮಿ. ಮೀ)ನ್ನು ನೀಡಿದೆ.

ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಹಳ್ಳಾಡಿ-ಹರ್ಕಾಡಿಯ ಗೋಕುಲದಾಸ್ ಪ್ರಭು ಇಂದು ಮುಂಜಾನೆ ರಸ್ತೆ-ಚರಂಡಿ ಅರಿಯದೇ ನೀರು ತುಂಬಿದ ಚರಂಡಿಗೆ ಬಿದ್ದು ಮೃತಪಟ್ಟರೆ, ರಚನಾ ಎಂಬ 13ರ ಹರೆಯದ ಬಾಲಕಿ ರವಿವಾರ ದನ ಮೇಯಿಸಲು ಹೋಗಿ ಹೊಳೆ ನೀರಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ.

ಕೊಲ್ಲೂರು ಸಮೀಪದ ಅರಸಿನಗುಂಡಿ ಜಲಪಾತ ನೋಡಲು ರವಿವಾರ ಸ್ನೇಹಿತನೊಂದಿಗೆ ಬಂದ ಭದ್ರಾವತಿಯ ಶರತ್ ಕುಮಾರ್ (23) ಬಂಡೆಯ ಮೇಲೆ ನಿಂತಿದ್ದಾಗ, ಕಾಲುಜಾರಿ ಆಯತಪ್ಪಿಸೌಪರ್ಣಿಕ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಾಡಿ ಹರ್ಕಾಡಿ ನಿವಾಸಿ ಗೋಕುಲದಾಸ್ ಪ್ರಭು (54) ಇಂದು ಮುಂಜಾನೆ 7ರ ಸುಮಾರಿಗೆ ಸಾಮಾನು ತರಲೆಂದು ಹರ್ಕಾಡಿ ಗ್ರಾಮದ ಮಕ್ಕಿಮನೆಯಲ್ಲಿನ ಅಂಗಡಿಗೆ ತೆರಳಿದ್ದು 8:15ಗಂಟೆಯಾದರೂ ಮನೆಗೆ ಮರಳದಿದ್ದಾಗ ಮನೆಯವರು ಹುಡುಕಿದಾಗ ಮಕ್ಕಿಮನೆ ತೋಡಿನಲ್ಲಿ ಅವರ ಶವ ಪತ್ತೆಯಾಯಿತು. ಭಾರೀ ಮಳೆಯಿಂದ ರಸ್ತೆ ಹಾಗೂ ತೋಡು ನೀರಿನಿಂದ ತುಂಬಿ ಹರಿಯುತಿದ್ದು, ಅವರಿಗೆ ರಸ್ತೆ ಹಾಗೂ ಚರಂಡಿ ಯಾವುದೆಂದು ತಿಳಿಯದೇ ನೀರು ತುಂಬಿದ ಚರಂಡಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟ ಪೊಲೀಸರು ತಿಳಿಸಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಶೇಡಿಮನೆ ಗ್ರಾಮದ ದರ್ಖಾಸ್ತು ಎಂಬಲ್ಲಿ ರಚನಾ (13) ತನ್ನ ಅಜ್ಜಿ ಸಾಧನಾ ಶೆಡ್ತಿಯವರೊಂದಿಗೆ ರವಿವಾರ ಬೆಳಗ್ಗೆ 11ರ ಸುಮಾರಿಗೆ ದನಕರುಗಳನ್ನು ಮೇಯಿಸಲು ಹೋದಾಗ ಪಕ್ಕದ ಗಂಗಡಬೈಲು ಹೊಳೆ ಮಳೆಯಿಂದ ತುಂಬಿ ಹರಿಯುತಿದ್ದು, ರಚನಾ ಹೊಳೆಬದಿಗೆ ಹೋದವಳು ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನ ಪ್ರವಾಹ ದಲ್ಲಿ ಕೊಚ್ಚಿಕೊಂಡು ಹೋಗಿದ್ದಳು.ಬಳಿಕ ಆಕೆಯ ಮೃತಶರೀರ 2ಕಿ.ಮೀ. ದೂರದ ಮುಂಡಿಬೈಲು ಎಂಬಲ್ಲಿ ಹೊಳೆ ನೀರಿನಲ್ಲಿ ಮರಕ್ಕೆ ಸಿಕ್ಕಿಹಾಕಿಕೊಂಡು ಅಪರಾಹ್ನ 2:00 ಗಂಟೆಗೆ ಪತ್ತೆಯಾಗಿತ್ತು.

ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯುದ್ದಕ್ಕೂ ಹರಿಯುವ ಎಲ್ಲಾನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ನದಿಯ ಅಕ್ಕಪಕ್ಕದ ತಗ್ಗು ಪ್ರದೇಶಗಳಲ್ಲಿನೆರೆ ಉಂಟಾಗಿದೆ. ಹೀಗಾಗಿ ಜಿಲ್ಲೆಯ ನೂರಾರು ಮನೆಗಳು ನೀರಿನಿಂದ ಆವೃತ್ತವಾಗಿವೆ.

ಕೊಡಗು: ಹಲವು ಪ್ರದೇಶಗಳು ಜಲಾವೃತ: ಜಿಲ್ಲೆಯಾದ್ಯಂತ 24 ಗಂಟೆಗಳಲ್ಲಿ 5 ಇಂಚಿಗೂ ಅಧಿಕ ಮತ್ತು ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ 9 ಇಂಚಿಗೂ ಅಧಿಕ ಮಳೆಯಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ನದಿ, ತೊರೆ, ಹಳ್ಳ ಕೊಳ್ಳ ಜಲಪಾತಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ವ್ಯಾಪ್ತಿಯಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ನೀರಿನ ಹೊರ ಹರಿವು ನದಿಗೆ 23.937 ಕ್ಯೂಸೆಕ್ ಆಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಜಲಜೀವನ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಧಾರೆ ಮುಂದುವರೆದಿದೆ. ಕಳೆದ ನಾಲ್ಕು ದಿನಗಳಿ೦ದ ಧಾರಾಕಾರವಾಗಿ ಸುರಿವ ಮಳೆ ಮುಂದುವರೆದಿದ್ದು, ಮುಂಗಾರು ಶುರುವಾದ ನಂತರ ಸೋಮವಾರದಂದು ದಾಖಲೆಯ ಅತಿ ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ರವಿವಾರ ಒಟ್ಟೂ 1120 ಮಿ.ಮಿ ಮಳೆ ದಾಖಲಾದರೆ, - ಸೋಮವಾರ 1272.9 ಮಿ.ಮಿ ಮಳೆ ಸುರಿದಿದೆ.

ಕರಾವಳಿ, ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ವಾರವೂ - ಈ * ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿರುವ ಕಾರಣ ಹವಾಮಾನ - ಇಲಾಖೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ. ರ ಅಲ್ಲದೆ ವಾರಪೂರ್ತಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಜು. 25 ರಂದು, 204.5 ಮಿ.ಮೀ ಗಿಂತಲೂ ಹೆಚ್ಚು ಅತೀ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದೆ. | ಬುಧವಾರ ಹಾಗೂ ಗುರುವಾರವೂ ಭಾರೀ ಮಳೆ ಮುಂದುವರಿಯಲಿರುವ ಕಾರಣ ಅರೆಂಚ್ ಅಲರ್ಟ್ ನೀಡಲಾಗಿದೆ.

ಮುನ್ನೆಚ್ಚರಿಕೆ ವಹಿಸಿ ಎಂದ ಸಚಿವ: ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜನ-ಜೀವನ ಹಾಗೂ ಅಸ್ತಿ- ಪಾಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಭರ್ತಿಯಾಗುತ್ತಿರುವ ಜಲಾಶಯ: ಜೊಯಿಡಾ ತಾಲೂಕಿನ ಅಪ್ಪ‌ ಕಾನೇರಿ ಜಲಾಶಯದಿಂದ 3500 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಇದರಿಂದ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಸೇತುವೆ ಸಂಪರ್ಕ ಮುಕ್ತ ಆಗಬಹುದೆಂದು ಸ್ಥಳೀಯರು ಕಾಯುತ್ತಿದ್ದಾರೆ.

ಕಳೆದ ಐದು ದಿನದಿಂದ ಅಪ್ಪ‌ ಕಾನೇರಿ ಜಲಾಶಯ ತುಂಬಿದ್ದರಿಂದ ಕುಂಡಲ ಸೇತುವೆ ಮುಳುಗಿತ್ತು. ಸ್ಥಳೀಯರು ದೋಣಿ ಮೂಲಕ ಸಂಚಾರ ಮಾಡುತಿದ್ದರು. ಸೋಮವಾರ 3500 ಕ್ಯೂಸೆಕ್ ಜಲಾಶಯದ ನೀರು ಹೊರ ಬಿಡಲಾಗಿದೆ. ಕಾಳಿ ನದಿಗೆ ನಿರ್ಮಿಸಿರುವ ಕೊಡಸಳ್ಳಿ ಜಲಾಶಯಕ್ಕೆ ಅಪ್ಪ‌ ಕಾನೇರಿ ನದಿ ಸೇರುತ್ತದೆ. ಇದರಿಂದ ಕೊಡಸಳ್ಳಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...