ಮುಂಡಗೋಡ : ಕುಂಭದ್ರೋಣ ಮಳೆಗೆ ಅಪಾರ ಬೆಳೆಹಾನಿ ಜನಜೀವನ ಅಸ್ತವ್ಯಸ್ತ

Source: sonews | By Staff Correspondent | Published on 6th August 2019, 8:07 PM | Coastal News |

ಮುಂಡಗೋಡ : ಕುಂಭದ್ರೋಣ ಮಳೆಯಿಂದ ಮುಂಡಗೋಡ ನಲುಗಿಹೋಗಿ ಸಾರ್ವಜನಿಕರ ಬದುಕು ಅಸ್ತವ್ಯಸ್ತವಾಗಿದೆ. ರಸ್ತೆ, ಹೊಲಗದ್ದೆಗಳಲ್ಲಿ  ಎಲ್ಲೇ ನೋಡಿದರು ನೀರೇ ನೀರು. ಆದರೆ ಮಳೆ ಮಾತ್ರ ಬಿಡುವುಕೊಡುವ ಗೋಜಿಗೆ ಹೋಗದೇ ಇರುವುದು ಜನತೆಯನ್ನು ಚಿಂತೆಗೀಡುಮಾಡಿದೆ.

ಪಟ್ಟಣದ ಕಿಲೇ ಓಣಿಯಲ್ಲಿ ಸೋಮವಾರ ಮನೆಕುಸಿದು ಬಿದ್ದಿರೆ ಮಂಗಳವಾರ ಹಠೇಲಸಾಬ ಮತ್ತಿಗಟ್ಟಿ ಎಂಬುವರ ಮನೆ ಕುಸಿದು ಬಿದ್ದಿದೆ. ಅಮ್ಮಾಜಿ ಕೆರೆ ಪಕ್ಕದ ಮುಲ್ಲಾಓಣಿಯಲ್ಲಿ ನಾಲ್ಕಾರು ಕುಟುಂಬಗಳು ವಾಸಿಸುವ ಮನೆಯಲ್ಲಿ ನೀರು ನುಗ್ಗಿ ಕುಟುಂಬ ನಲುಗಿಹೋಗಿವೆ ಮನೆಯ ಸರಂಜಾಮ್‍ಗಳನ್ನು ಸಾಗಿಸುವುದೇ ಕಷ್ಟದಕೆಲಸವಾಗಿದ್ದು ನಿರ್ವಸತಿ ಆದಂತ ಕುಟುಂಬಗಳಿಗೆ ಅಂಗನವಾಡಿಯಲ್ಲಿ ಹಾಗೂ ಕೆಲವಂದು ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಜೋಗಿಶ್ವರ ಹಳ್ಳದ ನೀರು ರಸ್ತೆಯಮೇಲೆ ಬರುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಕಷ್ಟಸಾಧ್ಯವಾಗಿದೆ. ಯಲ್ಲಾಪುರ ರಸ್ತೆಯ ಟಬೇಟ್ ಕ್ಯಾಂಪ್ ಹತ್ತಿರ ಮರವೊಂದು ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಸಂಬಂದಿಸಿದ ಅಧಿಕಾರಿಗಳು ರಸ್ತೆಯಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮಮಾಡಿದರು. ಯಲ್ಲಾಪುರ ರಸ್ತೆಯ ಗುಂಜಾವತಿ ಗ್ರಾಮದ ದಲ್ಲಿ ಗಟಾರಗಳು ತುಂಬಿ ಹರಿದು ಉಕ್ಕಿ ಬರುತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಿಸುತ್ತಿದ್ದಾರೆ. ಪಟ್ಟಣದ ಅಮ್ಮಾಜಿ ಕೆರೆ ತುಂಬಿ ಕೆರೆ ನೀರು ರಸ್ತೆಗೆ ಬಂದಿದೆ. ಕೆರೆಯ ಅಕ್ಕಪಕ್ಕ ಮನೆಗಳಿಗೂ ನೀರು ನುಗ್ಗುವ ಅಪಾಯ ಎದುರಿಸುತ್ತಿದ್ದಾರೆ. ಅಮ್ಮಾಜಿ ಕೆರೆಯ ಒಡ್ಡಿನ ರಸ್ತೆ  ಭಾರಿಗಾತ್ರದ ವಾಹನ ಸಂಚಾರದಿಂದ ಕುಸಿಯುವ ಸಂಭಾವ್ಯವಿದೆ ಎನ್ನಲಾಗುತ್ತಿದೆ. ಅಧಿಕಾರಿಗಳು ಪರಿಶೀಲಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ  ಹುಬ್ಬಳ್ಳಿ- ಶಿರಸಿ ರಸ್ತೆಯ ಸಾಲಗಾಂವ ಕೆರೆ ಹತ್ತಿರ ರಸ್ತೆಯ ಡಾಂಬರಿಕರಣ ರಸ್ತೆಯ ಹೊರತು ಪಡಿಸಿದ ಕಚ್ಚಾ ರಸ್ತೆ ಕುಸಿದಿದೆ. ತಾಲೂಕಿನ ಸಿಂಗನ್ನಳ್ಳಿ ಡ್ಯಾಮ್ ತುಂಬಿ ಕೊಡಿಹರಿದಿರುವುದರಿಂದ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ನಾಲ್ಕು ಮನೆಗಳ ಗೋಡೆಗಳು ಕುಸಿದು  ಎರಡು ಮನೆಗಳು ಹರಗನಹಳ್ಳಿ ಕುಸಿದು ಬಿದ್ದಿರುವುದು ಸಾನವಳ್ಳಿಯಲ್ಲಿ ದನದಕೊಟ್ಟಿಗೆ ಬಿದ್ದಿರುವುದು ವರದಿಯಾಗಿದೆ 

ಯಾವುದೇ ಪ್ರಾಣಹಾನಿ ಜಾನುವಾರು ಪ್ರಾಣಹಾನಿ ಸಂಭವಿಸಿಲ್ಲಾ. ತಾಲೂಕಿನ  ಭತ್ತ, ಗೋವಿನಜೋಳ, ಶುಂಠಿ ಬೆಳೆ ಅಪಾರವಾದ ನಷ್ಟವಾಗಿದೆ. ಮುಖ್ಯ ರಸ್ತೆಯ ಡ್ಯಾಮೇಜ ಏನು ಕಂಡು ಬಂದಿಲ್ಲಾ. ರಸ್ತೆಯ ತುಂಬೆಲ್ಲಾ ನೀರು ಹರಿಯುತ್ತಿದೆ. ಒಳ ರಸ್ತೆಗಳು ಡ್ಯಾಮೇಜ ಕಂಡು ಬಂದಿದೆ.   ತಾಲೂಕಿನ ಬಹುತೇಕ ಕೆರೆಕಟ್ಟೆಗಳು ತುಂಬಿವೆ ಮುಂದಿನ ದಿನಗಳಲ್ಲಿ ತಾಲೂಕಿಗೆ ಕುಡಿಯುವ ನೀರಿನ ಅಭಾವ ಉದ್ಭವಿಸುವುದಿಲ್ಲ.-ಶ್ರೀಧರ ಮುಂದಲಮನಿ ತಹಶೀಲ್ದಾರ ಮುಂಡಗೋಡ

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...