ಕೈಗಾರಿಕೆಗಳ ಪುನಶ್ಚೇತನಕ್ಕಾಗಿ “Guaranteed Emergency Credit Line” ಯೋಜನೆ           

Source: sonews | By Staff Correspondent | Published on 16th July 2020, 5:06 PM | Coastal News |

ಕಾರವಾರ: ಕೋವಿಡ್-19ನಿಂದ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯು ಕುಂಠಿತಗೊಂಡಿದ್ದು, ಕೈಗಾರಿಕೆಗಳು ನಷ್ಟವನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರೂ. 3 ಲಕ್ಷ ಕೋಟಿ ಪ್ಯಾಕೇಜನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ “Guaranteed Emergency Credit Line”ಯೋಜನೆಯನ್ನು ಘೋಷಿಸಿದೆ. 

ಸದರಿ ಯೋಜನೆಯಡಿ ಈಗಾಗಲೇ ಅಸ್ಥಿತ್ವದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು 2020ರ ಫೆಬ್ರವರಿ 29ರ ಅಂತ್ಯಕ್ಕೆ ಸಾಲ ಬಾಕಿ ಇರುವ ಮೊತ್ತದ ಮೇಲೆ ಗರಿಷ್ಠ ಶೇ.20 ರಷ್ಟು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಈ ಕುರಿತು ಸಂಬಂಧಿಸಿದ ಬ್ಯಾಂಕ್‍ಗಳು ಅರ್ಹ ಕೈಗಾರಿಕೋದ್ಯಮಿಗಳಿಗೆ ಮಾಹಿತಿ ನೀಡಿರುತ್ತಾರೆ. 

ಸಾಲ ಸೌಲಭ್ಯ ಪಡೆಯಲು ತೊಂದರೆ ಇದ್ದಲ್ಲಿ ಈ ಕುರಿತು ಯಾವುದೇ ಅಹವಾಲುಗಳನ್ನು ಸಲ್ಲಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಹೆಲ್ಪ್‍ಲೈನ್ ನಂಬರ್: 080-23090500ನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಅಥವಾ ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕೋದ್ಯಮಿಗಳು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರವಾರರವರ ಮೊಬೈಲ್ ನಂ. 9481372678 ಅಥವಾ ಜಿಲ್ಲಾ ಅಗ್ರಣೀಯ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಪ್ರಾದೇಶಿಕ ಕಛೇರಿ, ಕಾರವಾರರವರ ಮೊಬೈಲ್ ನಂ. 9449860353 ಗೆ ವ್ಯಾಟ್ಸ್‍ಪ್ ಮೂಲಕ ಮನವಿ ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.                              
 

Read These Next

ಕೋಸ್ಟಲ್ ಎಕನಾಮಿಕ್ ಝೋನ್ ಮಾಡುವ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ-ಅನಂತ್ ಕುಮಾರ್ ಹೆಗಡೆ

ಭಟ್ಕಳ: ಕರಾವಳಿಯ ತಾಲೂಕುಗಳ ಅಭಿವೃದ್ಧಿಯು ಬಂದರ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಾಗುವುದು. ಈಗಾಗಲೇ ಕೋಸ್ಟಲ್ ಎಕನಾಮಿಕ್ ಝೋನ್ ...

ವಾರದ ಏಳು ದಿನ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ ಸಚಿವ ಶಿವರಾಮ ಹೆಬ್ಬಾರ

ಮುಂಡಗೋಡ: ಪ್ರಕೃತಿಯ ಮುನಿಸು  ತಗ್ಗಿ ಶಾಂತವಾಗಿ  ಸಹಜ  ಸ್ಥಿತಿಗೆ ಮರಳುವವರೆಗೂ ವಾರದ ಏಳುದಿನ ಎಲ್ಲ ಇಲಾಖೆಯ ಅಧಿಕಾರಿಗಳು ...

ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ; ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿಧಿ ಹೆಗಡೆಯ ಮನದಿಂಗಿತ

ಭಟ್ಕಳ: ಕೊರೋನಾ ಲಾಕ್ಡೌನ್ ಸದೂಪಯೋಗಗೊಂಡಿದ್ದು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ ಎಂದು 625/625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ...

ಗುಳ್ಳಾಪುರ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಆಗ್ರಹ. ಜಿಲ್ಲಾದ್ಯಂತ ಹೋರಾಟಕ್ಕೆ ಎಚ್ಚರಿಕೆ

ಭಟ್ಕಳ: ಸಾಂಕ್ರಾಂಮಿಕ ರೋಗ ಕೋರೋನಾ ಕೋವೀಡ್ ಹಾಗೂ ತೀವೃ ಅತೀವೃಷ್ಟಿಯ ಸಂದರ್ಭದಲ್ಲಿ ಯಲ್ಲಾಪುರ ತಾಲೂಕ ಗುಳ್ಳಾಪುರ ಗ್ರಾಮದಲ್ಲಿ ...