ಮಾಸ್ಕ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ. ಭಟ್ಕಳ ಮೂಲದ ವ್ಯಕ್ತಿ ಆರೆಸ್ಟ್.

Source: SO News | By Laxmi Tanaya | Published on 30th September 2020, 6:42 PM | National News |

ತಿರುವನಂತಪುರಂ : ಮಾಸ್ಕ್ ನಲ್ಲಿ ಕದ್ದು ಮುಚ್ಚಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನ ಏರ್ ಇಂಟಲಿಜೆನ್ಸ್ ಘಟಕದವರು ಬಂಧಿಸಿದ್ದಾರೆ.

ಕೋಳಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಂಧಿತ ಭಟ್ಕಳ ಮೂಲದವನಾಗಿದ್ದಾನೆಂಬ ಮಾಹಿತಿ ಲಭಿಸಿದೆ. ಬಂಧಿತ ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ 40ಗ್ರಾಂ ಬಂಗಾರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ.

ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅಕ್ರಮ ಬಂಗಾರ ಸಾಗಾಟ ಘಟನೆಗಳು ಮುಂದುವರಿದಿದೆ.  ಸಪ್ಟೆಂಬರ್ ಆರಂಭದಲ್ಲಿ ವಿದೇಶದಿಂದ ಕರಿಪುರಕ್ಕೆಬಂದ ಪ್ರಯಾಣಿಕನೊಬ್ಬ ಕುಕ್ಕರ್ ನಲ್ಲಿರಿಸಿ ಒಯ್ಯುತ್ತಿದ್ದ 30ಲಕ್ಷ ಬೆಲೆ ಬಾಳುವ ಬಂಗಾರ ವಶಪಡಿಸಿಕೊಳ್ಳಲಾಗಿತ್ತು. ಅದಾದ ಒಂದು ದಿನ ಬಿಟ್ಟು ಒಂದು ಕೆಜಿ ಚಿನ್ನ ಪತ್ತೆ ಹಚ್ಚಲಾಗಿತ್ತು.
ಮತ್ತೊಂದು ಘಟನೆಯಲ್ಲಿ 653 ಗ್ರಾಂ ಚಿನ್ನ ಮತ್ರು ಸಿಗರೆಟ್ ವಶಪಡಿಸಿಕೊಳ್ಳಲಾಗಿತ್ತು. ಇದೀಗ ಮಾಸ್ಕ್ ನಲ್ಲಿಯೂ ಬಂಗಾರ ಸಾಗಿಸಲು ಮುಂದಾಗಿರುವುದು ದುರಂತ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...