ಕಾರವಾರ: ನೌಕಾನೆಲೆ ಭೂಸ್ವಾಧೀನವಾದ ಜಮೀನಿನ ಪರಿಹಾರ ಧನ ಸ್ಪಸ್ಟೀಕರಣ

Source: S O News Service | By I.G. Bhatkali | Published on 31st May 2019, 3:11 PM | Coastal News |

ಕಾರವಾರ: ನೌಕಾನೆಲೆ ಯೋಜನೆಯಡಿ ಭೂಸ್ವಾಧೀನವಾದ ಜಮೀನಿಗೆ ಸಂಬಂಧಪಟ್ಟಂತೆ, ಭೂಸ್ವಾಧೀನ ಕಾಯ್ದೆ 1894 ಕಲಂ 28(ಅ) ರಡಿ ಹೆಚ್ಚುವರಿ ಪರಿಹಾರ ಧನ ಕುರಿತು ಈ ಹಿಂದೆ  ಅರ್ಜಿ ಸಲ್ಲಿಸಿದವರಿಗೆ  ಭೂಕೋರಿಕೆ ಸಂಸ್ಥೆಯವರು ಹೆಚ್ಚುವರಿ ಪರಿಹಾರ ಹಣವನ್ನು ಈಗಾಗಲೇ ಈ ಹಿಂದೆ ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಸುಮಾರು 98% ಪ್ರತಿಶತ ಪರಿಹಾರ ಬಟವಡೆ ಮಾಡಲಾಗಿರುತ್ತದೆ. 

ಬಿಡುಗಡೆಯಾದ ಪರಿಹಾರ ಹಣ ವಿತರಣೆಗೆ ಬಾಕಿ ಇರುವ ಕಡತಗಳಲ್ಲಿನ ಕೆಲವು ಫಲಾನುಭವಿಗಳು ಈ ಹಿಂದೆ ಹಲವು ಬಾರಿ ನೋಟಿಸು ಜಾರಿ ಮಾಡಿದರೂ ಕೂಡ ಇದುವರೆಗೂ ದಾಖಲೆಗಳನ್ನು ಹಾಜರುಪಡಿಸಿರುವದಿಲ್ಲ. ಕಾರಣ ಸದರಿ ಫಲಾನುಭವಿಗಳು ಮಾತ್ರ ಪರಿಹಾರ ಪಡೆಯಲು ಅವಶ್ಯಕ ದಾಖಲೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿ, ನೌಕನೆಲೆ ಕಾರವಾರ ರವರ ಕಚೇರಿಗೆ ಹಾಜರು ಪಡಿಸಿ ಪರಿಹಾರ ಸ್ವೀಕರಿಸುವಂತೆ ವಿಶೇಷ ಭೂಸ್ವಾಧೀನಾಧಿಕಾರಿ,  ನೌಕನೆಲೆ ಕಾರವಾರ  ಇವರು ಸ್ಪಷ್ಟೀಕರಣ ನೀಡಿ, ಪ್ರಕಟಣೆ ಹೊರಡಿಸಿರುತ್ತಾರೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...