ಜಿ.ಎಸ್.ಬಿ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Source: S.O. News Service | By MV Bhatkal | Published on 4th December 2022, 7:32 PM | Coastal News |

ಭಟ್ಕಳ : ಕ್ಯಾನ್ಸರ್ ಬಗ್ಗೆ ಭಯಬೇಡ, ಮುಂಜಾಗೃತೆ ಅಗತ್ಯ ಎಂದು ಡಾ. ಅಜಯಕುಮಾರ ಹೇಳಿದರು.  
ಅವರು ದಿ. ಕೆ. ಎಂ. ನಾಯಕ ಸ್ಮರಣಾರ್ಥ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಜಿ.ಎಸ್.ಎಸ್, ಜಿ.ಎಸ್.ಬಿ ಮಹಿಳಾ ಸಮಿತಿ ಹಾಗೂ ಭಟ್ಕಳ ತಾಲೂಕಾ ಆಸ್ಪತ್ರೆಯ ಸಹಯೋಗದೊಂದಿಗೆ  ಇಲ್ಲಿನ ಶಾಂತೇರಿ ಕಾಮಾಕ್ಷಿ ಸದನದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. 
ದಿ. ಕೆ.ಎಂ.ನಾಯಕ ರವರ ಪುತ್ರಿ ಯೋಗ ಶಿಕ್ಷಕಿ ವಿಜಯಲಕ್ಷ್ಮೀ ವಿ. ಶಾನಭಾಗ ಬಾಳೇರಿಯವರು ದೀಪಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ತಮ್ಮ ತಂದೆಯವರ ಸಮಾಜ ಸೇವೆಯನ್ನು ಸ್ಮರಿಸಿದರು.
ಇನ್ನೋರ್ವ ಮುಖ್ಯ ಅತಿಥಿ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದು ಆರೋಗ್ಯ ಸೇವೆಯನ್ನು ಪಡೆಯುವಂತೆ ಕರೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಿತಿಯ ಮುಖ್ಯಸ್ಥೆ ನೀತಾ ಕಾಮತ ವಹಿಸಿ ಮಾತನಾಡುತ್ತಾ ವೈದ್ಯೋ ನಾರಾಯಣೋ ಹರಿ ಎನ್ನುವ ಉಕ್ತಿಯಂತೆ ಭಟ್ಕಳ ಹಾಗೂ ಗ್ರಾಮೀಣ ಭಾಗದ ವಿಶೇಷವಾಗಿ ಮಹಿಳೆಯರಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ಭಟ್ಕಳ ತಾಲೂಕಾ ಆಸ್ಪತ್ರೆಯು ನೀಡುತ್ತಿರುವುದು ತಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು ಉತ್ತಮ ಸೇವೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು. 
ತಜ್ಞ ವೈದ್ಯರುಗಳಾದ ಡಾ. ಕ್ಷಿತೀಜ ಶೆಟ್ಟಿ, ಡಾ. ಲಕ್ಷ್ಮೀಶ ನಾಯ್ಕ, ಡಾ. ಸಹನ್ ಕುಮಾರ್, ಡಾ. ಸಂಗೀತಾ ಆರೋಗ್ಯ ತಪಾಸಣೆ ಮಾಡಿದರು. ತಾಲೂಕಾ ಆಸ್ಪತ್ರೆಯ ಸಿಬ್ಬಂದಿಗಳು, ಶುಶ್ರುಕೀಯರು, ಆಶಾ ಕಾರ್ಯಕರ್ತೆಯರು ಸಹಕರಿಸಿದರು. ವನಿತಾ ಮಹಿಳಾ ಸಮಿತಿಯ ವೀಣಾ ಪೈ, ಜಿ.ಎಸ್.ಎಸ್. ಅಧ್ಯಕ್ಷ ಕಲ್ಪೇಶ ಪೈ, ಗೌರವಾಧ್ಯಕ್ಷ ನರೇಂದ್ರ ನಾಯಕ, ಸಮಾಜದ ಪ್ರಮುಖರಾದ ಅಚ್ಚುತ ಕಾಮತ, ರಾಮು ಕಾಮತ, ಶ್ರೀಧರ ನಾಯಕ, ಸಮಿತಿ ಸದಸ್ಯರಾದ ಗಿರಿಧರ ನಾಯಕ, ದೀಪಕ ನಾಯಕ, ಪ್ರವೀಣ ನಾಯಕ, ಕೃಷ್ಣಾನಂದ ಪ್ರಭು, ಉದಯ ಪೈ ಮುಂತಾದವರು ಉಪಸ್ಥಿತರಿದ್ದರು.  ಕಾರ್ಯದರ್ಶಿ ಶ್ರೀನಾಥ ಪೈ ಕಾರ್ಯಕ್ರಮ ನಿರೂಪಿಸಿದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...