ಡಿ.1ರಂದು ಬೇಂಗ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

Source: sonews | By Staff Correspondent | Published on 29th November 2019, 5:46 PM | Coastal News |

ಭಟ್ಕಳ: ಮಹಾನಸ ಆಯುರ್ವೇದ ಚಿಕಿತ್ಸಾ ಕೇಂದ್ರ ಬೆಂಗಳೂರು, ಆರೋಗ್ಯ ಭಾರತಿ ಭಟ್ಕಳ ,ಉಸಿರಾ ಇಂಡಸ್ಟ್ರೀಸ್ ಬೆಂಗ್ರೆ , ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಲಿ ಕಾರವಾರ ಮತ್ತು ಸಾಧನಾ ಮಹಿಳಾ ಒಕ್ಕೂಟ ಬೆಂಗ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ನುರಿತ ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಡಿ.1 ರಂದು ರವಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಸಿರಾ ಇಂಡಸ್ಟ್ರಿಸ್ ಬೆಂಗ್ರೆ ಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶಿಬಿರದಲ್ಲಿ ಕ್ಯಾನ್ಸರ್, ಮೂಲವ್ಯಾದಿ,   ಗಂಟು ನೋವು ಕೀಲುನೋವು ಕಾಮಾಲೆ ಕಿಡ್ನಿ ಕಲ್ಲು ರಕ್ತಹೀನತೆ ಮೂತ್ರ ಉರಿ,  ಉಬ್ಬಸ,  ಕೆಮ್ಮು , ಸಕ್ಕರೆ ಕಾಯಿಲೆ, ರಕ್ತ ಪರೀಕ್ಷೆ, ರಕ್ತ ಒತ್ತಡ ಪರೀಕ್ಷೆ , ತಜ್ಞವೈದ್ಯರಿಂದ ಉಚಿತ ಸಮಾಲೋಚನೆ ಸಲಹೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಘಟಕರಾದ ಕೆ. ಮರಿಸ್ವಾಮಿ (9448235284), ಎಂ ಡಿ ಮ್ಯಾಥ್ಯೂ (9448629439) ಮತ್ತು ಫೆಲಿಕ್ಸ್ ಫನಾರ್ಂಡಿಸ್ (9972050728) ಇವರನ್ನ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Read These Next

ಐಸಿಎಸ್‍ಇ 10ನೇತರಗತಿ ಫಲಿತಾಂಶ; ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷವೂ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ...