ಅಂಕೋಲಾ ಪಿಎಸ್ಐ ಸಂಪತ್ ನೇತೃತ್ವದ ಕಾರ್ಯಾಚರಣೆಯಲ್ಲಿ ನಾಲ್ವರು ಕಳ್ಳರು ಅಂದರ್

Source: SO News | By Laxmi Tanaya | Published on 17th October 2020, 10:11 PM | Coastal News | Don't Miss |

ಅಂಕೋಲಾ : ಮನೆ ಮತ್ತು ಕೇಬಲ್ ಕಚೇರಿ ಕಳ್ಳತನ ನಡೆಸಿ ಪರಾರಿಯಾಗಿದ್ದ ನಾಲ್ವರನ್ನು ಅಂಕೋಲಾ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ಅಂಕೋಲಾ  ಪಿಎಸ್ಐ ಸಂಪತ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಹಾವೇರಿ ಮೂಲದ ಇಮ್ರಾನ್ (೨೩),ಮುಬಾರಕ್ ಶಾರು (೨೧),ಬಸವರಾಜ್ (೨೩),ಮಲ್ಲಿಕ್ ಜಾನ್ (೧೯) ಬಂಧಿತರಾಗಿದ್ದಾರೆ.

ಅಂಕೋಲಾದ ಹುಲಿದೇವರವಾಡದ ರಾಜು ನಾಯ್ಕ ಎಂಬುವವರ ಟಿವಿ ಕೇಬಲ್ ಕಚೇರಿ ಮತ್ತು ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.

 ಕಳ್ಳರಿಂದ ಜಿಯೋ ವೈಫೈ, 20,500 ರು ನಗದು ಹಣ,ಹುಂಡೈ ಕಾರು,ಫೈರ್ ಹೋಲ್ ಮಷಿನ್ ಸೇರಿದಂತೆ ಒಟ್ಟು  3,72,100 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಎ.ಎಸ್.ಐ ಅಶೋಕ್ ತಳದಪ್ಪನವರ್,ಸಿ.ಪಿಸಿ ಮಂಜುನಾಥ್ , ಶ್ರೀಕಾಂತ್ ,  ಮನೋಜ್.ಡಿ, ಸಂತೋಷ್ ಕುಮಾರ್, ಜಗದೀಶ್ ನಾಯ್ಕ,ಆಸೀಪ್,ಸುರೇಶ್.ಬಿ, ಸಿಹೆಚ್ ಸಿ ಮಹ್ಮದ್ ಶಫಿ ಶೇಖ್ ಯಲ್ಲಾಪುರ ಠಾಣೆ,ಸಿಪಿಸಿ ಕೋಟೇಶ್ ಶಿರಸಿನಗರ ಠಾಣೆ ಸಿಬ್ಬಂದಿಗಳು ಭಾಗವಹಿಸಿದ್ದರು. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Read These Next

ಜೂನ್ 29ರಿಂದ ಜುಲೈ 9 ರವರೆಗೆ  ಅಳ್ವೆಕೋಡಿ  ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ

ಭಟ್ಕಳ: ಜಿಲ್ಲೆಯ ಪ್ರಸಿದ್ಧ ಅಲ್ವೇಕೋಡಿ  ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಜೂನ್ 29ರಿಂದ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...