ತೆಂಗಿನಗುಂಡಿ ಗ್ರಾಮದಲ್ಲಿ ಧ್ವಜ ವಿವಾದ:ನಾಮಫಲಕ ಅಳವಡಿಸಲು ಮುಂದಾದ ಬಿಜೆಪಿಗರು ಪೊಲೀಸರಿಂದ ತಡೆ

Source: SO News | By MV Bhatkal | Published on 30th January 2024, 11:58 PM | Coastal News |

ಭಟ್ಕಳ: ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ಧ್ವಜ  ವಿವಾದ ಮುಂದುವರೆದಿದ್ದು, ಸಂಘಪರಿವಾರದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ.

ಧ್ವಜ ಕಟ್ಟೆ ಇದ್ದ ಸ್ಥಳದಲ್ಲೇ ಇದೀಗ ಕೇವಲ 20 ನಿಮಿಷದಲ್ಲಿ ಧ್ವಜ ಕಟ್ಟೆಯನ್ನು ಸಂಘಪರಿವಾರದ ಕಾರ್ಯಕರ್ತರು ನಿರ್ಮಾಣ ಮಾಡಿದ್ದಾರೆ. ಧ್ವಜ ಕಟ್ಟೆ ನಿರ್ಮಾಣಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ನಾವು ಕಟ್ಟೆಯನ್ನು ಕಟ್ಟಿ ಧ್ವಜವನ್ನ ಹಾರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಪೊಲೀಸರ ವಿರೋಧದ ನಡುವೆಯೂ ತೆಂಗಿನಗುಂಡಿಯಲ್ಲಿ ಧ್ವಜಕಟ್ಟೆ‌ ನಿರ್ಮಾಣ ಮಾಡಲಾಗಿದ್ದು ಇದು ಯಾವ ಹಂತಕ್ಕೆ ತಲುಪುತ್ತದೋ ಎನ್ನುವುದು ಚರ್ಚೆಯ ವಿಷಯವಾಗಿದೆ.

ಸ್ಥಳದಲ್ಲಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು, ಸ್ಥಳೀಯರಿಗೆ ವಾಗ್ವಾದ ಉಂಟಾಗಿದೆ. ಸ್ಥಳದಲ್ಲಿದ್ದ ಪಿಡಿಒರನ್ನು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದು, ಸ್ಥಳಕ್ಕೆ ತಹಶೀಲ್ದಾರ್ ತಿಪ್ಪೇಸ್ವಾಮಿ ಭೇಟಿ ನೀಡಿ ಶಾಂತಿ ಕದಡದಂತೆ ಜನರಲ್ಲಿ ಮನವಿ ಮಾಡಿದರು. 

ಭಟ್ಕಳದ ತೆಂಗಿನಗುಂಡಿ ಬೀಚ್‌ನಲ್ಲಿ  ಸಾವರ್ಕರ್ ವೃತ್ತದ ನಾಮಫಲಕ ಮತ್ತು ಭಗವಾಧ್ವಜ ಕಟ್ಟೆ ತೆರವುಗೊಳಿಸಲಾಗಿತ್ತು. ಬಿಜೆಪಿ ಮುಖಂಡರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ನೇತೃತ್ವದಲ್ಲಿ ಇಂದು ತೆಂಗಿನಗುಂಡಿ ಗ್ರಾಮ ಪಂಚಾಯ್ತಿ ಮುಂದೆ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಗೋವಿಂದ್ ನಾಯ್ಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ ಹಾಗೂ ಪಂಚಾಯತ್ ಸದಸ್ಯರಿಂದ ಪ್ರತಿಭಟನೆ ಮಾಡಲಾಗಿದೆ.

Read These Next