ಬೋರ್ ವೆಲ್ ಪಂಪ್‍ಹೌಸ್ ಗೆ ಬೆಂಕಿ

Source: sonews | By Staff Correspondent | Published on 17th March 2019, 11:24 PM | Coastal News |

ಮುಂಡಗೋಡ : ಶಾರ್ಟ್‍ಸಕ್ರ್ಯೂಟ್ ನಿಂದ ಪಂಪ ಹೌಸ್ ಗೆ ಬೆಂಕಿ ತಗುಲಿ ರೈತನಿಗೆ ನಷ್ಟವುಂಟಾದ ಘಟನೆ ತಾಲೂಕಿನ ಮಳಗನಕೊಪ್ಪ ಗ್ರಾಮದಲ್ಲಿ ನಡೆದಿದೆ.

ದೇವೇಂದ್ರಪ್ಪ ಮಡ್ಲಿ ಎಂಬುವರ ಹೊಲದಲ್ಲಿಯ ಬೋರ್ ವೆಲ್ ಪಂಪ್ ಹೌಸ್‍ಗೆ ವಿದ್ಯುತ್ ಶಾರ್ಟ್‍ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ ಸಾರ್ವಜನಿಕರ ಮಾಹಿತಿ ಯಿಂದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿಗಳಾದ ಕೆ.ಆರ್. ಮಾಳಗಿ, ಬಸವರಾಜ ನಾನಾಪುರ, ಬಸವರಾಜ ಇಂಚಲ, ಚಂದ್ರಪ್ಪ ಲಮಾಣಿ,  ಹರೀಶ ಪಟಗಾರ, ದುರ್ಗಪ್ಪಾ ಹರಿಜನ, ಸ್ವಪ್ನಿಲ್, ಕಾರ್ಯಾಚರಣೆಯಲ್ಲಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...