ಫೆ.2 ರಿಂದ 11; ಯಕ್ಷ ಕಲಾ ಪ್ರತಿಷ್ಠಾನದಿಂದ ಯಕ್ಷದಶಾಹ ಕಾರ್ಯಕ್ರಮ

Source: SOnews | By Staff Correspondent | Published on 30th January 2024, 5:21 PM | Coastal News |

ಭಟ್ಕಳ: ಯಕ್ಷಕಲಾ ಪ್ರತಿಷ್ಠಾನದ ದಶಮಾನೋತ್ಸವ ವರ್ಷದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದೊಂದಿಗೆ ಫೆ.2 ರಿಂದ 11ರ ತನಕ ‘ಯಕ್ಷದಶಾಹ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಫೆ.2ರಂದು ಬಸ್ತಿಮಕ್ಕಿಯಲ್ಲಿರುವ ಶ್ರೀ ರಾಘವೇಶ್ವರ ಹವ್ಯಕ ಸಭಾ ಭವನದ ಆವರಣದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. 

ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಸಿಗಂದೂರಿನ ಪ್ರಧಾನ ಅರ್ಚಕ ಎಸ್.ಪಿ. ಶೇಷಗಿರಿ ಭಟ್ಟ, ಯಕ್ಷಕಲಾ ಪೋಷಕ ವೇ.ಮೂ.ಕೃಷ್ಣಾನಂದ ಭಟ್ಟ ಬಲ್ಸೆ, ಸಂಕಲ್ಪ ಯಲ್ಲಾಪುರದ ಪ್ರಮೋದ ಹೆಗಡೆ, ಉಧ್ಯಮಿ ನಾಗರಾಜ ಭಟ್ಟ ಬೇಂಗ್ರೆ, ಉಧ್ಯಮಿ ನಿರಂಜನ ಜೈನ್ ಬೆಂಗಳೂರು, ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಾ ನಾಯ್ಕ, ವಿಶ್ವಹಿಂದೂ ಪರಿಷತ್‌ನ ಶಶಿಕಾಂತ ಶರ್ಮಾ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಯಕ್ಷಗಾನ ಕಲೆಯು ದಕ್ಷಿಣೋತ್ತರ ಕನ್ನಡದ ಜೀವಾಳ, ಯಕ್ಷಗಾನವಿಲ್ಲದೇ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡವಿಲ್ಲ, ಈ ಮೂರೂ ಜಿಲ್ಲೆಗಳಲ್ಲದೇ ಯಕ್ಷಗಾನವೇ ಇಲ್ಲ ಎನ್ನುವಂತಹ ಒಂದು ಪರಿಸ್ಥಿತಿ ಇಂದಿನ ಯಕ್ಷಗಾನದ್ದಾಗಿದೆ. ಹಿಂದೆ ಅನೇಕ ಯಕ್ಷಗಾನ ಮೇಳಗಳು ತಮ್ಮ ದಿನದ ಆಟವನ್ನು ಆಡಿ ಜನ ಮೆಚ್ಚುಗೆಗಳಿಸತ್ತಾ ಇದ್ದವಲ್ಲದೇ ಅನೇಕ ಸಂದರ್ಭದಲ್ಲಿ ಯಕ್ಷಗಾನಕ್ಕೆ ಟಿಕೆಟ್ ದೊರೆಯುವುದೇ ಇಲ್ಲವಾಗಿತ್ತು ಎಂದರೆ ಯಕ್ಷಗಾನಕ್ಕಿರುವ ಮಹತ್ವವನ್ನು ಇದು ಸಾರಿ ಸಾರಿ ಹೇಳುತ್ತಲೇ ಇರುತ್ತದೆ. 

ಅನೇಕ ಹಿರಿಯ ಜೀವಗಳು ಯಕ್ಷಗಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ, ವೃತ್ತಿ ರಂಗದಲ್ಲಿ ಉತ್ತುಂಗಕ್ಕೇರಿದವರಿದ್ದಾರೆ. ಹಲವರು ವೃತ್ತಿರಂಗದಲ್ಲಿದ್ದುಕೊAಡು ಅನೇಕ ಉತ್ತಮ ವೇಷಭೂಷಣಗಳನ್ನು ಹೊಂದಿದ್ದರೂ ಸಹ ಜನ ಅವರನ್ನು ಬೆಂಬಲಿಸಿದ್ದು ಕಡಿಮೆಯೇ ಎಂದರೆ ಅತಿಶಯವಾಗಲಾರದು. ಯಕ್ಷಗಾನವನ್ನೊಂದು ಪ್ರವೃತ್ತಿಯನ್ನಾಗಿ ಸ್ವೀಕರಿಸಿದವರಲ್ಲಿ ನಮ್ಮ ಗೋಳಿಕುಂಬ್ರಿ ನಾಗರಾಜ ಕೆ. ಮಧ್ಯಸ್ಥ ಕೂಡಾ ಒಬ್ಬರು. 

ಯಕ್ಷಗಾನವನ್ನೇ ಪ್ರವೃತ್ತಿಯನ್ನಾಗಿಸಿಕೊಂಡ ಇವರು ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನವನ್ನು ಸ್ಥಾಪಿಸಿಕೊಂಡು 2014ರಿಂದ ಅನೇಕ ಯಕ್ಷಗಾನ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಯಕ್ಷಗಾನದಿಂದಲೇ ಜನಮೆಚ್ಚುಗೆಯನ್ನು ಪಡೆದ ಇವರು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಸಪ್ತಾಹವನ್ನು ಆಚರಿಸಿಕೊಂಡು ಬಂದಿದ್ದಾರೆ. ಇವರ ಯಕ್ಷಗಾನ ಸಪ್ತಾಹಕ್ಕೆ ಈ ಬಾರಿ ದಶಮಾನೋತ್ಸವ ಸಂಭ್ರಮವಾಗಿದ್ದು, ಯಕ್ಷಗಾನ ಪಯಣದಲ್ಲಿ ಇಲ್ಲಿಯ ತನಕ ಕಳೆದ ಒಂಬತ್ತು ವರ್ಷದಲ್ಲಿ ಪೌರಾಣಿಕ ಪ್ರಸಂಗಗಳನ್ನೇ ಆಡಿಸಿದ ಕೀರ್ತಿ ಇವರದ್ದಾದರೆ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇವರ ಕೊಡುಗೆ ಅಪಾರವಾದ್ದು. ಯಕ್ಷಗಾನ ಕ್ಷೇತ್ರದಲ್ಲಿಯೇ ಉತ್ತಮ ಹೆಸರು ಮಾಡಿದ್ದ ಶ್ರೇಷ್ಟ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷೆÆÃತ್ಸವ, ಯಕ್ಷಗಾನ ಸಪ್ತಾಹಗಳನ್ನು ಹಮ್ಮೊಕೊಳ್ಳುವುದರೊಂದಿಗೆ ಇವರದ್ದೇ ಯಕ್ಷಗಾನ ಕಲಾ ಪ್ರತಿಷ್ಟಾನದ ಮೂಲಕ ಅನೇಕ ಯಕ್ಷಗಾನವನ್ನು ಏರ್ಪಸುತ್ತಾ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಕಲೆಯ ಪ್ರಾವಿತ್ರö್ಯತೆಯನ್ನು ಕಾಪಾಡಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ತಮ್ಮ ಯಕ್ಷಗಾನ ಸಪ್ತಾಹದಲ್ಲಿ ಪ್ರತಿ ವರ್ಷವೂ ಕೂಡಾ ಯಕ್ಷಗಾನದ ಹಿಮ್ಮೇಳ, ಮುಮ್ಮೇಳ, ವೇಷ ಭೂಷಣ ತಯಾರಕರು, ಕಲಾ ಪೋಷಕರುಗಳನ್ನು ಗುರುತಿಸಿ ಗೌರವಿಸುತ್ತಿರುವುದು ಕೂಡಾ ಶ್ಲಾಘನೀಯ ಕಾರ್ಯವಾಗಿದೆ. 

Read These Next