ಕಾರವಾರ: ಅತಿ ಸುರಕ್ಷಿತ ನೊಂದಣಿ ಫಲಕ ಅಳವಡಿಸುವ ಅವಧಿ ವಿಸ್ತರಣೆ

Source: S O News | By I.G. Bhatkali | Published on 25th November 2023, 1:16 PM | Coastal News |

ಕಾರವಾರ: ರಾಜ್ಯದಲ್ಲಿ 1 ನೇ ಏಪ್ರೀಲ್ 2019 ಕಿಂತ ಮೊದಲು ನೊಂದಾಯಿಸಲ್ಪಟ್ಟಿರುವರ ಹಳೆಯ ಎಲ್ಲಾ ಅಸ್ತಿತ್ವದಲ್ಲಿರುವ ವಾಹನಗಳು, ದ್ವಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಟ್ರೇಕ್ಟರ್, ಟ್ರೇಲರ್, ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್. ಎಸ್. ಆರ್. ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಅರ್ಜಿ ಸಲ್ಲಿಸಲು 17.2.2024 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಹಳೆಯ ವಾಹನಗಳ ಮೇಲೆ ಹೆಚ್.ಎಸ್.ಆರ್.ಪಿ ಅಳವಡಿಕೆಯ ಕಾರ್ಯ ವಿಧಾನಗಳು: https://transport.Karnataka.Gov.in ಅಥವಾ www.siam.in ಗೆ ಭೇಟಿ ನೀಡಿ ಮತ್ತು ಬುಕ್ ಹೆಚ್. ಎಸ್. ಆರ್. ಪಿ ನ್ನು ಕ್ಲಿಕ್ ಮಾಡಿ, ತಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ, ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ, ಹೆಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ, ಹೆಚ್‌ಎಸ್‌ಆರ್‌ಪಿ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಿ, (ನಗದು ರೂಪದಲ್ಲಿ ಮಾಡುವಂತಿಲ್ಲ)

ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಪಿ.ಡಿ ರವಾನಿಸಲಾಗುವುದು, ತಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್.ಎಸ್.ಆರ್.ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ, ತಮ್ಮ ವಾಹನದ ಯಾವುದೇ ತಯಾರಕ ಡೀಲರ್ ಸಂಸ್ಥೆಗೆ ಬೇಟಿ ನೀಡಿ, ವಾಹನ ಮಾಲೀಕರ ಕಛೇರಿ ಆವರಣ ಮನೆಯ ಸ್ಥಳದಲ್ಲಿ ಹೆಚ್.ಎಸ್.ಆರ್.ಪಿ ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

https://transport.Karnataka.Gov.in ಅಥವಾ www.siam.in ಮೂಲಕ ಹೆಚ್‌ಎಸ್‌ಆರ್‌ಪಿ ಮಾತ್ರ ಅಳವಡಿಕೆಗೆ ಕಾಯ್ದಿರಿಸಿಕೊಳ್ಳಬೇಕು. ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೋಲೋಗ್ರಾಮ್/ಐಎನ್ಡಿ ಮಾರ್ಕ,/ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ ಹೆಚ್‌ಎಸ್‌ಆರ್‌ಪಿ/ಒಂದೇ ರೀತಿಯ ಪ್ಲೇಟ್ಗಳು ಸ್ಮಾರ್ಟ್ ನಂಬರ್ ಪ್ಲೇಟ್ಗಳನ್ನು ಅಳವಡಿಸುವಂತಿಲ್ಲ ಅವುಗಳ ಹೆಚ್‌ಎಸ್‌ಆರ್‌ಪಿ ಫಲಕಗಳಾಗಿರುವುದಿಲ್ಲ. ಹೆಚ್. ಎಸ್. ಆರ್. ಪಿ ಅಳವಡಿಸದ ಹೊರತು, ವಾಹನ ಮಾಲೀಕತ್ವ, ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು ರದ್ಧತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ.

ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗಧಿತ ದಿನಾಂಕದಿAದ 30 ದಿನದೊಳವರೆಗೆ ಮಾನ್ಯವಾದ ಹೆಚ್‌ಎಸ್‌ಆರ್‌ಪಿ ರಶೀದಿಯನ್ನು ಪ್ರಸ್ತುತ ಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9449863429, 9449863426 ಗೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next