ಭಾರತ ಹೊಗಳಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ!

Source: PTI | By MV Bhatkal | Published on 21st August 2022, 12:26 AM | National News |

ಲಾಹೋರ್: ಈ ಹಿಂದೆ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಂಧನ ಭೀತಿ ಎದುರಾಗಿದ್ದು, ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ನೀಡಿದ್ದ ಎರಡೂ ನೋಟಿಸ್ ಗೆ ಉತ್ತರಿಸಿದ ಕಾರಣ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು.. ನಿಷೇಧಿತ ನಿಧಿ ಪ್ರಕರಣದಲ್ಲಿ ಸತತ ನೋಟಿಸ್ ಹೊರತಾಗಿಯೂ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಬಂಧಿಸುವ ಸಾಧ್ಯತೆ ಇದೆ. ಶುಕ್ರವಾರ ಈ ಸಂಸ್ಥೆ ಇಮ್ರಾನ್ ಖಾನ್ ಅವರಿಗೆ 2ನೇ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಉತ್ತರಿಸದೇ ಇದ್ದರೆ ಇಮ್ರಾನ್ ಖಾನ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ರಿಕೆಟಿಗ-ರಾಜಕಾರಣಿಯಾಗಿರುವ ಖಾನ್ ಅವರು ಕಳೆದ ಬುಧವಾರ ಮೊದಲ ನೋಟಿಸ್ ಸ್ವೀಕರಿಸಿದ್ದರು. ಆದರೆ ಅವರು ಎಫ್‌ಐಎ ತನಿಖಾ ತಂಡದ ಮುಂದೆ ಹಾಜರಾಗಲು ನಿರಾಕರಿಸಿದರು ಎಂದು ಹೇಳಲಾಗಿದೆ. ಇಮ್ರಾನ್ ಖಾನ್ ಅವರನ್ನು ಬಂಧಿಸುವ ಅಂತಿಮ ನಿರ್ಧಾರವನ್ನು ಮೂರು ನೋಟಿಸ್‌ಗಳನ್ನು ನೀಡಿದ ನಂತರ ತೆಗೆದುಕೊಳ್ಳಬಹುದು ಎಂದು ಎಫ್‌ಐಎಯಲ್ಲಿನ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಬಂಧನ ಭೀತಿ ಏಕೆ?
ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮತ್ತು ಬೆಲ್ಜಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಸಂಬಂಧಿಸಿದ ಐದು ಕಂಪನಿಗಳನ್ನು ಎಫ್ಐಎ ಪತ್ತೆಹಚ್ಚಿದ್ದು, ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ಇಸಿಪಿ) ಸಲ್ಲಿಸಿದ ವರದಿಗಳಲ್ಲಿ ಅವುಗಳನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ಇದು ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಬರುತ್ತದೆ ಎನ್ನಲಾಗಿದೆ. ನಿಷೇಧಿತ ಧನಸಹಾಯ ಪ್ರಕರಣದಲ್ಲಿ ತನಗೆ ಕಳುಹಿಸಲಾದ ನೋಟಿಸ್ ಅನ್ನು ಎರಡು ದಿನಗಳಲ್ಲಿ ಹಿಂಪಡೆಯುವಂತೆ ಖಾನ್ ಬುಧವಾರ ಎಫ್‌ಐಎಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ನಿಮಗೆ ಉತ್ತರಿಸಲು ನಾನು ಜವಾಬ್ದಾರನಲ್ಲ ಅಥವಾ ನಿಮಗೆ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆ ನನ್ನದಲ್ಲ. ಎರಡು ದಿನಗಳಲ್ಲಿ ನೋಟಿಸ್ ವಾಪಸ್ ಪಡೆಯದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಉನ್ನತ ತನಿಖಾ ಸಂಸ್ಥೆಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಇಸಿಪಿಯಿಂದ ವಾಸ್ತವಿಕ ಸ್ಥಾನವನ್ನು ಮರೆಮಾಚಿದ್ದಕ್ಕಾಗಿ ಇಮ್ರಾನ್ ಖಾನ್ ತಪ್ಪಿತಸ್ಥನೆಂದು ಸಾಬೀತುಪಡಿಸಲು ಎಫ್‌ಐಎ ಸಮಿತಿಯು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಮೂರನೇ ಮತ್ತು ಬಹುಶಃ ಅಂತಿಮ ಸೂಚನೆಯನ್ನು ಮುಂದಿನ ವಾರ ನೀಡಲಾಗುವುದು ಎಂದು ವರದಿ ಹೇಳಿದೆ.

ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಚುನಾವಣಾ ಆಯೋಗವು ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಭಾರತೀಯ ಮೂಲದ ಉದ್ಯಮಿ ಸೇರಿದಂತೆ 34 ವಿದೇಶಿ ಪ್ರಜೆಗಳಿಂದ ನಿಯಮಗಳಿಗೆ ವಿರುದ್ಧವಾಗಿ ಹಣವನ್ನು ಪಡೆದಿದೆ ಎನ್ನಲಾಗಿದ್ದು, ಇದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ದೊಡ್ಡ ಹಿನ್ನಡೆಯಾಗಿದೆ. ಇಸಿಪಿಯ ತ್ರಿಸದಸ್ಯ ಪೀಠವು ವಿದೇಶಿ ಪ್ರಜೆಗಳು ಮತ್ತು ವಿದೇಶಿ ಮೂಲದ ಕಂಪನಿಗಳಿಂದ ನಿಷೇಧಿತ ಹಣವನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ಅದನ್ನು ಮುಚ್ಚಿಟ್ಟಿದ್ದಕ್ಕಾಗಿ ಖಾನ್ ಅವರ ಪಕ್ಷಕ್ಕೆ ಶೋಕಾಸ್ ನೋಟಿಸ್ ನೀಡಿತ್ತು. 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...