ಮುಂಡಗೋಡ: ಡಾ. ಅಂಬೇಡ್ಕರ ಅಸ್ಪøಶ್ಯರಿಗೆ ಪ್ರತ್ಯೇಕವಾದ ಮತದಾನದ ಹಕ್ಕು ಹಾಗೂ ಪ್ರತ್ಯೇಕ ಮತಕ್ಷೇತ್ರ ಕೇಳಿದ್ದರು

Source: Nazeer Tadapatri | By JD Bhatkali | Published on 20th January 2021, 1:01 PM | Coastal News |

ಮುಂಡಗೋಡ: ಜನ ಸಂಖ್ಯಾಧಾರಿತ ಮೇಲೆ ಮೀಸಲಾತಿಯನ್ನು ಹೆಚ್ಚಿಸಬೇಕು. ಮೀಸಲಾತಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಪ್ರಮುಖ ಹುದ್ದೆಯಲ್ಲಿರುವವರು ಜಾರಿಗೆ ತರಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹೆಣ್ಣೂರ ಶ್ರೀನಿವಾಸ ಹೇಳಿದರು.

ಅವರು ಮಂಗಳವಾರ ಪಟ್ಟಣದ ಟೌನ್‍ಹಾಲ್ ನಲ್ಲಿ ಏರ್ಪಡಿಸಿದ್ದ ಅಹಿಂದ ವರ್ಗಗಳ ಜನಸಂಖ್ಯಾಧಾರಿತ ಮಿಸಲಾತಿ ಮತ್ತು ಒಳಮಿಸಲಾತಿ ವರ್ಗೀಕರಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರಕಾರ ಚುಕ್ಕಾಣಿ ಹಿಡಿದವರು ಮೇಲ್ಜಾತಿಯವರು ಇರುವುದರಿಂದ ಮೇಲ್ಜಾತಿ ಬಡವರು ಯಾವುದೇ ಪ್ರತಿಭಟನೆ ನಡಿಸದೇ ಇದ್ದರೂ ಶೇ.10 ರಷ್ಟು ಮೀಸಲಾತಿ ಕೇಂದ್ರ ಸರಕಾರ ನೀಡಿದೆ ಪ್ರತಿಭಟನೆ ನಡೆಸಿದರೂ ಸಹಿತ ಜನ ಸಂಖ್ಯಾಧಾರಿತ ಮೇಲೆ ಪರಿಶೀಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡಕ್ಕೆ ಶೇ.25 ಮೀಸಲಾತಿ ನೀಡಿ ಎಂದರೆ ಸರಕಾರಗಳು ಮೀಸಲಾತಿ ಏರುಸುತ್ತಿಲ್ಲ ಮೀಸಲಾತಿ ಏರಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುವುದು ಎಂದರು.

ಡಾ. ಬಾಬಾ ಸಾಹೇಬ ಅಂಬೇಡ್ಕರ ಮಿಸಲಾತಿ ಯಾವತ್ತು ಕೇಳಿರಲಿಲ್ಲ. ನಾವು ಒಳಮೀಸಲಾತಿ ಕೇಳುತ್ತಿದ್ದೇವೆ. ಡಾ. ಅಂಬೇಡ್ಕರ ರವರು ಕೇಳಿದ್ದು ಪತ್ಯೇಕವಾದ ಮತದಾನದ ಹಕ್ಕು, ಪ್ರತ್ಯೇಕವಾದ ಮತಕ್ಷೇತ್ರ ಬೇಕು ಎಂದು ಕೇಳಿದ್ದರು ಸಮಾಜವು ನಮಗೆ ನಾಯಿ ಬೆಕ್ಕು ಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಿದೆ ನಿಮ್ಮ ಸಹವಾಸವೇ ಸಾಕು ನಮಗೆ ನಿಮ್ಮ ಕೂಡ ಇರಲು ಸಾಧ್ಯವಿಲ್ಲ.

ಆದ್ದರಿಂದ ನಮಗೆ ಪ್ರತ್ಯೇಕ ಮತದಾನದ ಹಕ್ಕು ನಮ್ಮದೇ ಆದಂತಹ ಪ್ರತ್ಯೇಕ ಮತಕ್ಷೇತ್ರ ಬೇಕು ಬೇಕೆಂದು ಪ್ರತಿಪಾದಿಸಿದ್ದರು ಅಂಬೇಡ್ಕರರವರ ಪ್ರತಿಪಾದನೆ ನೋಡಿ ದೇಶದ ಮೇಲ್ಜಾತಿಯ ವರ್ಗದ ಪ್ರಮುಖರು ಸೇರಿ ಕುತಂತ್ರಮಾಡಿದ ಫಲವೇ ಮೀಸಲಾತಿ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಮರೀಶ ನಾಗಣ್ಣವರ(ಧಾರವಾಡ), ಕೆ.ಮಂಜಪ್ಪ(ಹಾವೇರಿ), ಬ್ಲೂಮಿಂಗ್ ಬರ್ಡ್ ನಿರ್ದೇಶಕ ಪಿ.ಟಿ.ಸಾಮಸನ್ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ಶರೀಫ ಮುಗಳಕಟ್ಟಿ, ಪಿಎಸ್‍ಐ ಬಸವರಾಜ ಮಬನೂರ. ಪ.ಪಂ ಸದಸ್ಯ ಅಶೋಕ ಚಲವಾದಿ, ರವಿ ಭಜಂತ್ರಿ ವೇದಿಕೆ ಮೇಲಿದ್ದರು.

ಪ್ರಸ್ತಾವಿಕವಾಗಿ ಕ.ದ.ಸಂ.ಸ ಉತ್ತರಕನ್ನಡ ಜಿಲ್ಲಾ ಸಂಚಾಲಕ ಎಸ್.ಫಕ್ಕಿರಪ್ಪ ಮಾತನಾಡಿ ಅಹಿಂದ ವರ್ಗಗಳ ಜನಸಂಖ್ಯಾಧಾರಿತ ಮಿಸಲಾತಿ ಮತ್ತು ಒಳಮಿಸಲಾತಿ ವರ್ಗೀಕರಣ ಕೂಗು ಈ ಕಾರ್ಯಕ್ರಮದಿಂದಲೇ ಮೋದಲುಗೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಬಸವರಾಜ ಸಂಗಮೇಶ್ವರ ನಿರೂಪಣೆ ಮಾಡಿದರು.

ಎಸ್.ಡಿ. ಮುಡೇಣ್ಣವರ ಸ್ವಾಗತಿಸಿದರು ರವಿ ಭಜಂತ್ರಿ ವಂದರ್ನಾಪಣೆ ಮಾಡಿದರು.

Read These Next