ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಗುರುತು ಬಹಿರಂಗ ಪಡಿಸದೇ ಇರುವಂತೆ ಜಿಲ್ಲಾಧಿಕಾರಿ ಮನವಿ

Source: SOnews | By Staff Correspondent | Published on 13th June 2024, 8:02 PM | Coastal News |

 

ಕಾರವಾರ: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015. ತಿದ್ದುಪಡಿ ಕಾಯ್ದೆ 2021, ಹಾಗೂ ಮಾದರಿ ನಿಯಮ 2016, ತಿದ್ದುಪಡಿ ನಿಯಮಗಳು 2022. ಸೆಕ್ಷನ್ 74(1) (Prohibitaion on disclosure of Identity of Children)2012, 23(4) ಪ್ರಕಾರ ಯಾವುದೇ ವೃತ್ತ ಪತ್ರಿಕೆಯಲ್ಲಿ ನಿಯತಕಾಲಿಕವಾಗಲಿ ಅಥವಾ ದೃಶ್ಯ ಶ್ರವಣ ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲ ತಾಣಗಳಲ್ಲಿ ಅಥವಾ ಸಂವಹನದ ಇನ್ನಿತರ ವಿಧಗಳಲ್ಲಿ ಯಾವುದೇ ವಿಚಾರಣೆ ಅಥವಾ ತನಿಖೆ ಅಥವಾ ನ್ಯಾಯಿಕ ನಡವಳಿಗಳ ಕುರಿತಂತೆ ಕಾಯ್ದೆಯೊಂದಿಗೆ ಸಂಘರ್ಷದಲ್ಲಿರುವAತಹ ಮಗುವಿನಅಥವಾ ಪಾಲನೆ ಮತ್ತು ಸಂರಕ್ಷಣೆಯ ಅಗತ್ಯವಿರುವಂತಹ ಮಗುವಿನ ಅಥವಾ ಸಂತ್ರಸ್ಥ ಮಗುವಿನ ಅಥವಾಯಾವುದೇ ಅಪರಾದಧ ಸಂಬA ಸಾಕ್ಷಿಯಾಗಿರುವಂತಹ ಮಗುವಿನ ಗುರುತನ್ನು ತಿಳಿಸಬಹುದಾದಹೆಸರು/ವಿಳಾಸ/ಶಾಲೆ/ಇನ್ನಿತರ ವಿವರಗಳು ಅಥವಾ ಮಗುವಿನ ಭಾವಚಿತ್ರವನ್ನು ಪ್ರಕಟಿಸುವಂತಿಲ್ಲ.

ಒಂದು ವೇಳೆ ಪ್ರಕಟವಾದಲ್ಲಿ, ಪ್ರಕಟಿ ಪಡಿಸಿದವರ ವಿರುದ್ಧ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ 2021, ಹಾಗೂ ಮಾದರಿ ನಿಯಮ 2016. ತಿದ್ದುಪಡಿ ನಿಯಮಗಳು 2022, ಸೆಕ್ಷನ್ 74(3) ಉಪಪ್ರಕರಣ (1) ನ್ನು ಉಲ್ಲಂಘಿಸುವAತಹ ಯಾರೇ ವ್ಯಕ್ತಿಯು ಆರು ತಿಂಗಳವರೆಗೆ ವಿಸ್ತರಿಸಲ್ಪಡಬಹುದಾದ ಕಾರಾಗೃಹ ದಂಡನೆ ಅಥವಾ 2 ಲಕ್ಷ ರೂ ವಿಸ್ತರಿಸಲ್ಪಡಬಹುದಾದ ಜುಲ್ತಾನೆ ಅಥವಾ ಉಭಯ ಶಿಕ್ಷೆಗಳಿಗೂ ಸಹ ದಂಡನೀಯವಾಗಿದೆ.

ಇತ್ತಿಚಿನ ದಿನಗಳಲ್ಲಿ ಕೆಲವೊಂದು ದಿನಪತ್ರಿಕೆಗಳಲ್ಲಿರುವ ವರದಿಯನ್ನು ಗಮನಿಸಿದಾಗ , ನೇರವಾಗಿ ಮಗುವಿನ ಹೆಸರನ್ನು ಹಾಗೂ ಇತರೆ ವಿಷಯವನ್ನು ಪ್ರಸ್ಥಾಪಿಸದಿದ್ದರೂ ಶಾಲೆಯ ಹೆಸರು ವರದಿಯಲ್ಲಿ ಕಂಡು ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವರದಿಯಾಗುವ ಎಲ್ಲಾ ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಮೇಲ್ಕಾಣಿಸಿದ ಮಕ್ಕಳಿಗೆ ಸಂಬAಧಿಸಿದ ಮಾಹಿತಿಯನ್ನು ಬಹಿರಂಗ ಪಡಿಸದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದೆ.

 

Read These Next

ಜು.21 ರಿಂದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಿಂದ ಚಾತುರ್ಮಾಸ್ಯ ವೃತಾಚರಣೆ ಆರಂಭ

ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ...

ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ‌ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು 

ಭಟ್ಕಳ ಕರಾವಳಿ ಭಾಗದಲ್ಲಿ ಮಳೆಯು  ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿದ್ದು ತಾಲೂಕಿನ ...