ಜಾರ್ಖಂಡ್‌: ಬಿಜೆಪಿ ನಾಯಕರ ರಾತ್ರಿವೇಳೆ ಟೇಕ್‌ಆಫ್‌ಗೆ ಆಕ್ಷೇಪ; ದೇವಘರ ಜಿಲ್ಲಾಧಿಕಾರಿ ವಿರುದ್ಧ ದೇಶದ್ರೋಹ ಪ್ರಕರಣ

Source: Vb | By I.G. Bhatkali | Published on 6th September 2022, 12:05 AM | National News |

ಹೊಸದಿಲ್ಲಿ: ಬಿಜೆಪಿ ಸಂಸದರಾದ ನಿಷಿಕಾಂತ ದುಬೆ ಮತ್ತು ಮನೋಜ್ ತಿವಾರಿ ಅವರು ರಾತ್ರಿ ವೇಳೆಯಲ್ಲಿ ಜಾರ್ಖಂಡ್‌ನ ದೇವಘರ ವಿಮಾನ ನಿಲ್ದಾಣದಿಂದ ತಮ್ಮ ಬಾಡಿಗೆ ವಿಮಾನದ ಟೇಕ್‌ ಆಫ್‌ಗೆ ಬಲವಂತದಿಂದ ಅನುಮತಿಯನ್ನು ಪಡೆದುಕೊಂಡಿದ್ದನ್ನು ಆಕ್ಷೇಪಿಸಿ ಅವರೊಂದಿಗೆ ವಾಗ್ವಾದ ನಡೆಸಿದ್ದ ದೇವಘರ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿಯವರ ವಿರುದ್ಧ ದಿಲ್ಲಿ ಪೊಲೀಸರು ಶನಿವಾರ ದೇಶದ್ರೋಹಕ್ಕಾಗಿ ಮತ್ತು ಐಪಿಸಿಯ ಇತರ ಕಲಮ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಭಜಂತ್ರಿ ವಿರುದ್ಧ ದುಬೆ ದೂರು ಸಲ್ಲಿಸಿದ್ದರು.

ಆ.31ರಂದು ತಮ್ಮ ಬಾಡಿಗೆ ಅನುಮತಿಯನ್ನು ಪಡೆದುಕೊಳ್ಳಲು ವಿಮಾನ ನಿಲ್ದಾಣದ ಭದ್ರತಾ ವಿಮಾನದ ಟೇಕ್‌ ಆಫ್‌ಗಾಗಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‌ನ್ನು ಪ್ರವೇಶಿಸಿದ್ದಕ್ಕಾಗಿ ಜಾರ್ಖಂಡ್‌ ಪೊಲೀಸರು ದುಬೆ, ತಿವಾರಿ ಮತ್ತು ಇತರ ಏಳು ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ ಬೆನ್ನಲ್ಲೇ ಭಜಂತ್ರಿ ವಿರುದ್ಧ ದಾಖಲಾಗಿದೆ.

ಘಟನೆಯ ಬಳಿಕ ಭಜಂತ್ರಿ ಮತ್ತು ಬಿಜೆಪಿ ಸಂಸದರ ನಡುವೆ ಟ್ವಿಟರ್ ಕಾಳಗ ನಡೆದಿದ್ದು, ಅಂತಿಮವಾಗಿ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ. ಸಜೀವವಾಗಿ ದಹನಗೊಳಿಸಲಾಗಿದ್ದ 198 ಹರೆಯದ ಯುವತಿಯ ಕುಟುಂಬದ ಭೇಟಿಗಾಗಿ ಬಿಜೆಪಿ ನಾಯಕರು ದುಮ್ಯಾಕೆ ಪ್ರಯಾಣಿಸಿದ್ದರು. ಬಳಿಕ ಈ ನಾಯಕರು ಮತ್ತು ಇತರರು ದೇವಘರ ವಿಮಾನ ನಿಲ್ದಾಣದಿಂದ ವಾಪಸ್ ತೆರಳಬೇಕಾಗಿತ್ತು. ದೇವಘರ ವಿಮಾನ ನಿಲ್ದಾಣವು ಜು.12ರಂದು ಉದ್ಘಾಟನೆಗೊಂಡಿದ್ದು, ವಿಮಾನಗಳ ರಾತ್ರಿ ಕಾರ್ಯಾಚರಣೆಗಳಿಗಾಗಿ ಇನ್ನಷ್ಟೇ ಅನುಮತಿ ದೊರೆಯಬೇಕಿದೆ. ಪ್ರಸಕ್ತ ಸೂರ್ಯಾಸ್ತಕ್ಕೆ 30 ನಿಮಿಷಗಳ ಮೊದಲು ಯಾನಗಳನ್ನು ಆರಂಭಿಸಲು ಅವ ಕಾಶವಿದೆ. ವಿಮಾನ ನಿಲ್ದಾಣದ ಭದ್ರತಾ ಮುಖ್ಯಸ್ಥ ಸುಮನ್ ಆನಂದ ದೂರಿನ ಮೇರೆಗೆ ದುಬೆ, ತಿವಾರಿ, ದುಬೆಯವರ ಪುತ್ರರಾದ ಕನಿಷ್ಠಕಾಂತ ದುಬೆ ಮತ್ತು ಮಹಿಕಾಂತ ದುಬೈ, ದೇವಘರ ವಿಮಾನ ನಿಲ್ದಾಣದ ನಿರ್ದೇಶಕ ಮತ್ತಿತರರ ವಿರುದ್ಧ ಸೆ.1ರಂದು ದಾಖಲಾಗಿತ್ತು. ಎಫ್‌ಐಆರ್ ಎಟಿಸಿ ರೂಮ್‌ನ್ನು ಪ್ರವೇಶಿಸುವ ಮತ್ತು ರಾತ್ರಿ ವೇಳೆಯಲ್ಲಿ ತಮ್ಮ ಬಾಡಿಗೆ ವಿಮಾನದ ಟೇಕ್-ಆಫ್‌ಗೆ ಅನುಮತಿ ನೀಡುವಂತೆ ಅಧಿಕಾರಿಗಳನ್ನು ಬಲವಂತಗೊಳಿಸುವ ಮೂಲಕ ಸಂಸದರು ಎಲ್ಲ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆನಂದ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ದುಬೆ ಮತ್ತು ತಿವಾರಿ ಸೇರಿದಂತೆ ಒಂಭತ್ತು ಜನರ ವಿರುದ್ಧ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯವನ್ನೊಡ್ಡಿದ ಮತ್ತು ಅತಿಕ್ರಮ ಪ್ರವೇಶದ ಆರೋಪಗಳನ್ನು ಹೊರಿಸಲಾಗಿದೆ.

ವಿಮಾನದ ಟೇಕ್-ಆಫ್‌ಗೆ ಅನುಮತಿಯನ್ನು ನಿರಾಕರಿಸಿದಾಗ ಪೈಲಟ್ ಮತ್ತು ಇತರ ಪ್ರಯಾಣಿಕರು ಎಟಿಸಿ ರೂಮ್‌ ನ್ನು ಪ್ರವೇಶಿಸಿದ್ದರು ಮತ್ತು ಬಲವಂತದಿಂದ ಟೇಕ್-ಆಫ್ ಗೆ ಅನುಮತಿಯನ್ನು ಪಡೆದುಕೊಂಡಿದ್ದರು ಎಂದು ಭದ್ರತಾ ಮುಖ್ಯಸ್ಥರು ತಿಳಿಸಿದ್ದಾರೆ. ಇಂತಹ ಕೃತ್ಯಗಳು ವಿಮಾನ ನಿಲ್ದಾಣದ ಸಾಮಾನ್ಯ ಭದ್ರತಾ ನಿಯಮಗಳ ಉಲ್ಲಂಘನೆಯಾಗಿವೆ ಎಂದು ಭಜಂತ್ರಿ ಅವರು ಜಾರ್ಖಂಡ್ ನಾಗರಿಕ ವಾಯುಯಾನ ಇಲಾಖೆಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದರು.

ಆಗಿನಿಂದ ಭಜಂತ್ರಿ ಮತ್ತು ದುಬೆ ನಡುವೆ ಟ್ವಿಟರ್‌ನಲ್ಲಿ ವಾಗ್ವಾದ ಆರಂಭಗೊಂಡಿತ್ತು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...