ರಜಾ ದಿನದಂದು ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಶ್ರೀನಿವಾಸಪುರ ಪುರಸಭಾ ವ್ಯಾಪ್ತಿಯಲ್ಲಿ ಕಾಮಗಾರಿಗಳ ಪರಿಶೀಲನೆ
ಶ್ರೀನಿವಾಸಪುರ: ರಜಾ ದಿನದಂದು ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಪುರಸಭಾ ವ್ಯಾಪ್ತಿಯ ಇಂದಿರಾ ನಗರ, ಮಾರುತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ, ವೆಂಕಟೇಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಇಂದು ಭೇಟಿ ನೀಡಿ ಸ್ವಚ್ಛತೆ, ಬೀದಿ ದೀಪಗಳ ಸಿ ಸಿ ಎಂ ಎಸ್ ಲೈಟ್ಸ್ ನಿರ್ವಹಣೆ ಹಾಗೂ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಒಣ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿದರು.
ನಂತರ ಪುರಸಭಾ ಕಚೇರಿಗೆ ಭೇಟಿ ನೀಡಿದ ಮಾನ್ಯ ಜಿಲ್ಲಾಧಿಕಾರಿಗಳು ಕೆ.ಎಂ.ಎಫ್-24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್ ಗಳಲ್ಲಿ ಸ್ವತಃ ತಾವೇ ಕರವಸೂಲಿಗರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್-24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ, ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ , ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಎಲ್ಲಾ ಸೆಸ್ಗಳ ವಿವರಗಳ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಯೋಜನಾ ನಿದೇಶಕರ ಕಛೇರಿಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚಲಪತಿ, ಪುರಸಭಾ ಮುಖ್ಯಾಧಿಕಾರಿ ವೈ. ಎನ್. ಸತ್ಯನಾರಾಯಣ, ಕಂದಾಯಧಿಕಾರಿ ವಿ. ನಾಗರಾಜು, ಕಿರಿಯ ಅಭಿಯಂತರಾದ ವಿ. ಶ್ರೀನಿವಾಸಪ್ಪ, ಹಿ.ಆ.ನಿ , ಕೆ. ಜಿ. ರಮೇಶ್ ನೋಡಲ್ ಅಧಿಕಾರಿ ಚೌಡೇಗೌಡ ಹಾಗೂ ಪುರಸಭಾ ಸಿಬ್ಬಂಧಿ ಹಾಜರಿದ್ದರು.